ಹೊಸದಿಲ್ಲಿ: ನಾಗಾಲ್ಯಾಂಡ್‌ನಲ್ಲಿ 11 ನಾಗರಿಕರ ಹತ್ಯೆಯ ಬಗ್ಗೆ ಸೇನೆ ಭಾನುವಾರ ವಿಷಾದ ವ್ಯಕ್ತಪಡಿಸಿದೆ. ಘಟನೆಯನ್ನು “ದುರದೃಷ್ಟಕರ” ಎಂದು ಕರೆದಿದೆ. ನಾಗಾಲ್ಯಾಂಡ್ ಹತ್ಯೆಯ ಘಟನೆಯನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ, ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೇನೆಯು ಭರವಸೆ ನೀಡಿದೆ.
ದಂಗೆಕೋರರ ಚಲನವಲನದ ಖಚಿತ ಮಾಹಿತಿ ಗುಪ್ತಚರ ಇಲಾಖೆಯಿಂದ ಪಡೆದ ನಂತರ ಮೊನ್ ಜಿಲ್ಲೆಯ ತಿರು ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ನಡೆಸಲು ಯೋಜಿಸಲಾಗಿತ್ತು ಎಂದು ಸೇನೆಯ ಮೂಲಗಳು ತಿಳಿಸಿದೆ.
“ಘಟನೆಯಲ್ಲಿ ಭದ್ರತಾ ಪಡೆಗಳು ತೀವ್ರವಾಗಿ ಗಾಯಗೊಂಡಿದ್ದು, ಒಬ್ಬ ಯೋಧ ಗಾಯಗೊಂಡು ಸಾವನ್ನಪ್ಪಿದ್ದಾರೆ” ಎಂದು ಸೇನೆಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ದೇಶದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ: ಒಟ್ಟು ಸಂಖ್ಯೆ 5ಕ್ಕೇರಿಕೆ
ಇದಕ್ಕೂ ಮುನ್ನ ನಾಗಾಲ್ಯಾಂಡ್ ಸಿಎಂ ನೆಫಿಯು ರಿಯೊ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ