Advertisement

ಚಳಿಗಾಲದಲ್ಲೂ ಸೇನೆ ನಿಯೋಜನೆ : ಸಂಸದೀಯ ಮಂಡಳಿಗೆ ಸಿಡಿಎಸ್‌ ಮಾಹಿತಿ

02:27 PM Aug 12, 2020 | sudhir |

ಹೊಸದಿಲ್ಲಿ: ಎಲ್‌ಎಸಿಯ ಬಿಕ್ಕಟ್ಟನ್ನು ದೀರ್ಘಾವಧಿವರೆಗೆ ಎದುರಿಸಲು ಭಾರತ ಸನ್ನದ್ಧವಾಗಿದೆ. ಕಠಿನ ಚಳಿಗಾಲದಲ್ಲೂ ಸೈನಿಕರ ನಿಯೋಜನೆಗೆ ಸೇನೆ ಸಿದ್ಧವಾಗಿದೆ ಎಂದು ಉನ್ನತ ಮಟ್ಟದ ಸೇನಾಧಿಕಾರಿಗಳು ಸಂಸದೀಯ ಮಂಡಳಿಗೆ ಅಧಿಕೃತವಾಗಿ ಮಾಹಿತಿ ಒಪ್ಪಿಸಿದ್ದಾರೆ.

Advertisement

ಮುಖ್ಯ ರಕ್ಷಣಾ ಸಿಬಂದಿ (ಸಿಡಿಎಸ್‌) ಜನರಲ್‌ ಬಿಪಿನ್‌ ರಾವತ್‌ ನೇತೃತ್ವದಲ್ಲಿ ಉನ್ನತಾಧಿಕಾರಿಗಳು ಭಾರತ- ಚೀನ ನಡುವಿನ ಬಿಕ್ಕಟ್ಟು ಶೀಘ್ರವೇ ಬಗೆಹರಿಯುವುದಿಲ್ಲ. ಉದ್ವಿಗ್ನತೆ ತಣ್ಣಗಾಗಲು ಹೆಚ್ಚಿನ ಸಮಯ ಹಿಡಿಸುತ್ತದೆ ಎಂದು ವಾಸ್ತವ ತಿಳಿಸಿದ್ದಾರೆ.
ಗಡಿಯಲ್ಲಿ ಎದುರಾಳಿಗಳಿಂದ ಯಾವುದೇ ಸವಾಲು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಸೇನೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಚಳಿಗಾಲಕ್ಕೆ ಅಗತ್ಯವಾದ ರಕ್ಷಣಾ ಉಡುಪುಗಳ ಕಿಟ್‌, ಆಹಾರ ಸಾಮಗ್ರಿ, ಯುದ್ದೋಪಕರಣಗಳ ಸಂಗ್ರಹ ಮತ್ತು ಖರೀದಿಯನ್ನು ಸೇನೆ ಚುರುಕುಗೊಳಿಸಿದೆ.

ಚೀನ ಕ್ಷಿಪಣಿ ನಿಯೋಜನೆ: ಭಾರತ ವಿರುದ್ಧದ ಗಡಿಬಿಕ್ಕಟ್ಟನ್ನು ಚೀನ ಇನ್ನಷ್ಟು ತೀವ್ರಗೊಳಿಸುವ ಯೋಚನೆಯಲ್ಲಿದೆ. ಭಾರತದ ಉತ್ತರ ಮತ್ತು ಪೂರ್ವ ಗಡಿ ವಲಯಗಳಲ್ಲಿ ಕ್ಷಿಪಣಿಗಳನ್ನು ನಿಯೋಜಿ ಸುತ್ತಿರುವುದು ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟವಾಗಿದೆ ಎಂದು ಓಪನ್‌ ಸೋರ್ಸ್‌ ಇಂಟೆಲಿಜೆನ್ಸ್‌ (ಓಎಸ್‌ಐಎನ್‌ಟಿ) ಎಚ್ಚರಿ ಸಿದೆ. ಹೊತಾನ್‌ ಮತ್ತು ಕಾಷ್ಪರ್‌ನಲ್ಲಿ ಎಚ್‌-6 ಬಾಂಬರ್‌ ಯುದ್ಧವಿಮಾನಗಳನ್ನು ನಿಯೋಜಿಸಿರುವ ಬಗ್ಗೆಯೂ ಈ ಹಿಂದೆ ಎಚ್ಚರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next