Advertisement
ಏನಿದರ ಮಹತ್ವ?1947ರ ಜ. 15ರಂದು ಬ್ರಿಟಿಷರ ಆಳ್ವಿಕೆಯ ಅನಂತರ ಕರುನಾಡಿನ ವೀರ ಫೀ|ಮಾ| ಕೆ.ಎಂ. ಕಾರ್ಯಪ್ಪ ಭಾರತೀಯ ಸೇನೆಯ ಚುಕ್ಕಾಣಿ ಹಿಡಿದರು. ಅದರ ಸ್ಮರಣಾರ್ಥ ಸೇನಾ ದಿನಾಚರಣೆಯನ್ನು ಭಾರತೀಯ ಸೇನೆ ಹಮ್ಮಿಕೊಳ್ಳುತ್ತದೆ. ಫೀ|ಮಾ| ಕಾರ್ಯಪ್ಪ ಅವರಿಗೆ ತವರೂರಿನಲ್ಲಿ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿದ್ಯಾರ್ಥಿ ಗಳು, ಜನಸಾಮಾನ್ಯರ ಸಹಿತ ಎಲ್ಲ ವರ್ಗಗಳ ಜನರೊಂದಿಗೆ ಕಾರ್ಯ ಕ್ರಮ ಆಯೋಜಿಸುವ ಮೂಲಕ ನಾಗರಿಕರೊಂದಿಗೆ ಬಾಂಧವ್ಯವನ್ನು ಬಲ ಪಡಿಸಲು ಸೇನೆ ಮುಂದಾಗಿದೆ.
ಪರೇಡ್‌ನಲ್ಲಿ ಸೇನಾ ಶೌರ್ಯದ ಪ್ರದರ್ಶನವಾಗಲಿದೆ. ಸೇನೆಯ ಪರಾಕ್ರಮ ಮೆರೆಸುವುದರ ಜತೆಗೆ ಮಿಲಿಟರಿ ಬ್ಯಾಂಡ್,ಮೋಟಾರು ಸೈಕಲ್ ಡಿಸ್‌ಪ್ಲೇ, ಪ್ಯಾರಾ ಮೋಟಾರ್ಸ್ ಮತ್ತು ಸಾಹಸ ಚಟುವಟಿಕೆ ಗಳನ್ನು ನಡೆಸಲಾಗುತ್ತದೆ. ಒಂದು ತಿಂಗಳ ಅಭಿಯಾನ
ಸೇನಾ ದಿನದ ಅಂಗವಾಗಿ ಒಂದು ತಿಂಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶನಿವಾರ ಸದರ್ನ್ ಸ್ಟಾರ್ ವಿಜಯ್ ರನ್-2022 (ಯೋಧರಿಗಾಗಿ ಓಟ-ಯೋಧರ ಜತೆ ಓಟ ಪರಿಕಲ್ಪನೆ) ನಡೆಯಲಿದೆ. ಬೆಂಗಳೂರು, ಬೆಳಗಾವಿ ಸಹಿತ ದೇಶದ ವಿವಿಧ ಭಾಗಗಳಲ್ಲಿ ಇರುವ 18 ಸ್ಟೇಷನ್‌ಗಳಲ್ಲಿ ಏಕಕಾಲಕ್ಕೆ 50 ಸಾವಿರ ಯೋಧರು ಭಾಗಿಯಾಗಲಿದ್ದಾರೆ. ಈ ಮೂಲಕ ಈ ಸೇನಾ ದಿನಕ್ಕೆ ಚಾಲನೆ ಸಿಗಲಿದೆ.
Related Articles
“ರಕ್ತದಾನ ಮಾಡಿ, ಜೀವ ಉಳಿಸಿ’ ಎಂಬ ಪರಿಕಲ್ಪನೆಯಲ್ಲಿ 7,500 ಯುನಿಟ್ ರಕ್ತವನ್ನು ಸಂಗ್ರಹಿಸಲಾಗುತ್ತದೆ. ಇದರಲ್ಲಿ 75 ಸಾವಿರ ಸ್ವಯಂ ಸೇವಕರು ಭಾಗಿಯಾಗಲಿದ್ದಾರೆ.
Advertisement
ಡಿ. 30ರಂದು ಗ್ರಾಮ ಸೇವಾಕುಗ್ರಾಮ ಅಥವಾ ಗಡಿಯಲ್ಲಿರುವ 75 ಗ್ರಾಮಗಳನ್ನು ಗುರುತಿಸಿ, ಅವುಗಳನ್ನು “ಗ್ರಾಮ ಸೇವಾ- ರಾಷ್ಟ್ರ ಸೇವಾ’ ಎಂಬ ಪರಿಕಲ್ಪನೆಯಡಿ ಅಭಿವೃದ್ಧಿಪಡಿಸಲಾಗುತ್ತದೆ. ಇಲ್ಲಿ ಆರೋಗ್ಯ ಶಿಬಿರ, ಅಗ್ನಿಪಥ ಯೋಜನೆಯ ಅರಿವು, ವೀರ ನಾರಿ ಮತ್ತು ವೀರ ಮಾತೆಯರಿಗೆ ಗೌರವ, ಸ್ವತ್ಛ ಅಭಿಯಾನ, ವಾಲಿಬಾಲ್, ಖೋ ಖೋ, ಕಬಡ್ಡಿ ಕ್ರೀಡಾಂಗಣಗಳ ನಿರ್ಮಾಣ ಮತ್ತು ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಜನವರಿ 7
ಸೇನಾ ಪಬ್ಲಿಕ್ ಶಾಲೆಗಳು ಮತ್ತು 75 ಸರಕಾರಿ ಶಾಲೆಗಳ ಮಕ್ಕಳ ವಿನಿಮಯ ಕಾರ್ಯಕ್ರಮ ನಡೆಸಿ ಕ್ರೀಡಾ ಸೌಲಭ್ಯಗಳು, ಕ್ರೀಡೆಗಳ ಆಯೋಜನೆ, ಯೋಗಕ್ಕೆ ಉತ್ತೇಜನ ಮತ್ತು ಇತರ ಚಟುವಟಿಕೆಗಳ ಅರಿವು ಮೂಡಿಸಲಾಗುತ್ತದೆ. ಜನವರಿ 10
“ಜನ ಜೀವನ ಸುರಕ್ಷಾ’ ಪರಿಕಲ್ಪನೆ ಯಡಿ ಅಮೃತ ಸರೋವರ ಮತ್ತು ಕೆರೆಗಳ ಶುಚಿ ಕಾರ್ಯಕ್ರಮ. ಜನವರಿ 14
ದಕ್ಷಿಣ ಕಮಾಂಡ್ ಪ್ರದೇಶದಲ್ಲಿ 75 ಸಾವಿರ ಗಿಡಗಳನ್ನು ನೆಡಲಾಗುತ್ತದೆ. ಹಾಗೆಯೇ ಜ. 9ರಿಂದ 15ರ ವರೆಗೆ “ಏಕ ಭಾರತ, ಸಶಸ್ತ್ರ ಭಾರತ’ದ ಅಡಿಯಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನ, ಕ್ವಿಜ್ ಮತ್ತಿತರ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.