Advertisement

ಕರ್ನಲ್, ಮೇಜರ್ ಸೇರಿ ಐವರು ಹುತಾತ್ಮ;ಉಗ್ರರ ವಿರುದ್ಧ 8 ಗಂಟೆ ಕಾರ್ಯಾಚರಣೆ, ನಾಗರಿಕರ ರಕ್ಷಣೆ

08:27 AM May 04, 2020 | Nagendra Trasi |

ನವದೆಹಲಿ:ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾ ನಗರದ ಸಮೀಪ ಭದ್ರತಾ ಪಡೆಗಳು ಸತತ 8ಗಂಟೆಗಳ ಕಾಲ ಉಗ್ರರ ವಿರುದ್ಧ ನಡೆಸಿದ ಎನ್ ಕೌಂಟರ್ ಕಾರ್ಯಾಚರಣೆ ಭಾನುವಾರ ಬೆಳಗ್ಗೆ ಅಂತ್ಯಗೊಂಡಿದ್ದು, ಪಿಟಿಐ ನ್ಯೂಸ್ ಏಜೆನ್ಸಿ ಪ್ರಕಾರ, ಭಾರೀ ಗುಂಡಿನ ಕಾಳಗದಲ್ಲಿ ಒಬ್ಬರು ಕರ್ನಲ್, ಮೇಜರ್, ಇಬ್ಬರು ಸೇನಾ ಯೋಧರು ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುತಾತ್ಮರಾಗಿದ್ದು, ಪ್ರತಿದಾಳಿಗೆ ಇಬ್ಬರು ಉಗ್ರರು ಬಲಿಯಾಗಿರುವುದಾಗಿ ತಿಳಿಸಿದೆ.

Advertisement

21ನೇ ರಾಷ್ಟ್ರೀಯ ರೈಫಲ್ಸ್ (ಆರ್ ಆರ್) ಯೂನಿಟ್ ನ ಕರ್ನಲ್ ಅಶುತೋಷ್ ಶರ್ಮಾ ಅವರು ಈ ಹಿಂದೆ ಹಲವಾರು ಭಯೋತ್ಪಾದಕ ನಿಗ್ರಹ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಧೈರ್ಯ, ಸಾಹಸಕ್ಕೆ ಹೆಸರಾಗಿದ್ದ ಶರ್ಮಾ ಶೌರ್ಯ ಪ್ರಶಸ್ತಿ ಸ್ವೀಕರಿಸಿದ್ದರು ಎಂದು ವರದಿ ಹೇಳಿದೆ.

ಭದ್ರತಾ ಪಡೆಯ ಮೇಜರ್ ಸೂದ್, ನಾಯಕ್ ರಾಜೇಶ್ ಮತ್ತು ಲ್ಯಾನ್ಸ್ ನಾಯಕ್ ದಿನೇಶ್ ಕಾರ್ಯಾಚರಣೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹುತಾತ್ಮಾಗಿರುವುದಾಗಿ ವರದಿ ವಿವರಿಸಿದೆ. ಹಂದ್ವಾರಾದ ಚಾಂಗಿಮುಲ್ಲಾ ಮನೆಯೊಂದರ ಒಳಗೆ ನಾಗರಿಕರನ್ನು ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.

ಉಗ್ರರು ಅಡಗಿದ್ದ ಮನೆಯ ಪ್ರದೇಶದೊಳಕ್ಕೆ ಐವರು ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿದಿತ್ತು. ದಿಟ್ಟತನದ ಹೋರಾಟದಲ್ಲಿ ನಾಗರಿಕರನ್ನು ರಕ್ಷಿಸುವಲ್ಲಿ ತಂಡ ಯಶಸ್ವಿಯಾಗಿತ್ತು. ಈ ವೇಳೆ ಉಗ್ರರು ನಡೆಸಿದ ಭಾರೀ ಗುಂಡಿನ ದಾಳಿಗೆ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next