Advertisement

Encounter: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್: ಸೇನಾ ಕ್ಯಾಪ್ಟನ್ ಹುತಾತ್ಮ, ಶಸ್ತ್ರಾಸ್ತ ವಶ

04:03 PM Aug 14, 2024 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ (ಆಗಸ್ಟ್ 14) ದೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಎನ್‌ಕೌಂಟರ್‌ನಲ್ಲಿ ಸೇನಾ ಕ್ಯಾಪ್ಟನ್ ಹುತಾತ್ಮರಾಗಿದ್ದಾರೆ. ಭಯೋತ್ಪಾದಕರ ಕಾರ್ಯಾಚರಣೆ ವೇಳೆ ನಡೆಸಿದ ದಾಳಿಯಲ್ಲಿ ಕ್ಯಾಪ್ಟನ್ ದೀಪಕ್ ಸಿಂಗ್ ವೀರ ಮರಣವನ್ನಪ್ಪಿದ್ದಾರೆ.

Advertisement

ದೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂಬ ಗುಪ್ತಚರ ವರದಿ ಆಧರಿಸಿ ಸೇನೆಯು ಸ್ಥಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಸೇನೆಯೂ ಪ್ರತಿದಾಳಿ ನಡೆಸಿದೆ ಈ ವೇಳೆ ಕ್ಯಾಪ್ಟನ್ ದೀಪಕ್ ಸಿಂಗ್ ಅವರಿಗೆ ಗುಂಡು ತಗುಲಿ ಗಂಭೀರ ಗಾಯಗೊಂಡು ವೀರ ಮರಣ ಹೊಂದಿದ್ದಾರೆ. ವರದಿಗಳ ಪ್ರಕಾರ, ನಾಲ್ಕು ಶಂಕಿತ ಭಯೋತ್ಪಾದಕರ ಗುಂಪು ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿತು. ಈ ವೇಳೆ ಸ್ಥಳೀಯ ನಿವಾಸಿಯೊಬ್ಬರೂ ಗಾಯಗೊಂಡಿದ್ದಾರೆ.

ದೋಡಾ ಜಿಲ್ಲೆಯ ಅರಣ್ಯದಲ್ಲಿ ಅಡಗಿರುವ ಭಯೋತ್ಪಾದಕರ ಹುಡುಕಾಟ ಮುಂದುವರೆದಿದ್ದು ಈ ವೇಳೆ ಅರಣ್ಯದಲ್ಲಿ ಅಮೆರಿಕ ನಿರ್ಮಿತ M4 ರೈಫಲ್ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ಸೇನೆಯು ವಶಪಡಿಸಿಕೊಂಡಿದೆ.

 

Advertisement

ಅಧಿಕಾರಿಗಳ ಸಭೆ
ಇದೀಗ ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನ ಮೊದಲು ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ ನಡೆದು ಕ್ಯಾಪ್ಟನ್ ಹುತಾತ್ಮರಾದ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಿಸಲು ರಕ್ಷಣಾ ಸಚಿವರ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಲಾಯಿತು. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕಾಶ್ಮೀರದ ಅರಣ್ಯ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಗುಪ್ತಚರ ಇಲಾಖೆ ಈ ಹಿಂದೆ ವರದಿ ನೀಡಿತ್ತು. ಇದರ ಬೆನ್ನಲ್ಲೇ ಕಳೆದ ಕೆಲ ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಇತ್ತೀಚೆಗಷ್ಟೇ ಕಾಶ್ಮೀರದ ಕೋಕರ್ನಾಗ್ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಸೈನಿಕರು ಮತ್ತು ಸ್ಥಳೀಯ ನಿವಾಸಿಯೊಬ್ಬರು ಹತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next