Advertisement

Army ಸಾಮರ್ಥ್ಯ ವೃದ್ಧಿ: ಕೇಂದ್ರದ ದಿಟ್ಟ ನಡೆ

01:02 AM Dec 01, 2023 | Team Udayavani |

ಭಾರತೀಯ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ದೃಷ್ಟಿ ಯಿಂದ ಮತ್ತು ಯುದ್ಧ ವಿಮಾನಗಳು ಮತ್ತು ಕಾಪ್ಟರ್‌ಗಳನ್ನು ಖರೀದಿಸುವ ಪ್ರಸ್ತಾವಕ್ಕೆ ಕೇಂದ್ರ ಸರಕಾರ ಗುರುವಾರ ತನ್ನ ಪ್ರಾಥಮಿಕ ಒಪ್ಪಿಗೆಯನ್ನು ನೀಡಿದೆ. ಈ ಮೂಲಕ ಭಾರತ, ತನ್ನ ಸೇನಾ ಪಡೆಗಳನ್ನು ಜಾಗತಿಕ ಮಟ್ಟದಲ್ಲಿ ಬದಲಾಗು ತ್ತಿರುವ ಸನ್ನಿವೇಶಗಳಿಗೆ ತಕ್ಕಂತೆ ಸರ್ವಸನ್ನದ್ಧವಾಗಿರಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ.

Advertisement

97 ತೇಜಸ್‌ ಲಘು ಯುದ್ಧ ವಿಮಾನಗಳು ಮತ್ತು 156 ಪ್ರಚಂಡ್‌ ಹೆಲಿ ಕಾಪ್ಟ ರ್‌ಗಳನ್ನು ಖರೀದಿಸುವ ಮತ್ತು ಭಾರತೀಯ ವಾಯುಪಡೆಯ ಎಸ್‌ಯು- 30 ಫೈಟರ್‌ ಫ್ಲೀಟ್‌ ಅನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಕೇಂದ್ರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ರಕ್ಷಣ ಖರೀದಿ ಮಂಡಳಿ ಯು ಕೇಂದ್ರ ಸರಕಾರದ ಮುಂದಿರಿಸಿತ್ತು. ಈ ಎರಡೂ ಪ್ರಸ್ತಾವನೆಗಳಿಗೂ ಕೇಂ ದ್ರ ಸರಕಾರ ಮೊದಲ ಹಂತದ ಹಸುರು ನಿಶಾನೆಯನ್ನು ತೋರಿದೆ. ಈ ಎರಡೂ ಯೋಜನೆಗಳಿಗೆ ಒಟ್ಟು 1.6 ಲಕ್ಷ ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ.

ಕಳೆದೊಂದು ದಶಕದಿಂದೀಚೆಗೆ ಕೇಂದ್ರ ಸರಕಾರ ಭಾರತೀಯ ಸಶಸ್ತ್ರ ಪಡೆ ಗಳಿಗೆ ಅತ್ಯಾಧುನಿಕ ಸಮರ ವಿಮಾನಗಳು, ಹೆಲಿಕಾಪ್ಟರ್‌ಗಳು, ಕ್ಷಿಪಣಿಗಳು, ಸಮರನೌಕೆಗಳು, ಜಲಾಂತರ್ಗಾಮಿಗಳ ಸೇರ್ಪಡೆಗೆ ಹೆಚ್ಚಿನ ಉತ್ತೇಜನ ನೀಡುತ್ತಲೇ ಬಂದಿದೆಯಲ್ಲದೆ ಯೋಧರ ಪ್ರಾಥಮಿಕ ಆವಶ್ಯಕತೆಗಳನ್ನು ಪೂರೈ ಸಲು ಹೆಚ್ಚಿನ ಆಸ್ಥೆ ವಹಿಸಿದೆ. ನೆರೆಯ ಪಾಕಿಸ್ಥಾನ ಮತ್ತು ಚೀನ ಗಡಿಯಲ್ಲಿ ಪದೇ ಪದೆ ತಕರಾರು ಎತ್ತಿ, ಕಾಲುಕೆರೆದು ಜಗಳಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದೇಶದ ರಕ್ಷಣೆಯನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ದೃಢ ನಿರ್ಧಾರಗಳನ್ನು ಕೈಗೊಂಡಿದೆ. ಅಷ್ಟು ಮಾತ್ರವಲ್ಲದೆ ರಕ್ಷಣ ಕ್ಷೇತ್ರದಲ್ಲಿ ವಿಶ್ವದ ಪ್ರಬಲ ರಾಷ್ಟ್ರಗಳೊಂದಿಗೆ ಸಹಭಾಗಿತ್ವವನ್ನು ಹೆಚ್ಚಿಸುವ ಜತೆಯಲ್ಲಿ ಸ್ವಾವಲಂ ಬನೆಯ ದಿಸೆಯಲ್ಲೂ ದಾಪುಗಾಲಿರಿಸಿದೆ.

ಜಾಗತಿಕ ಮಟ್ಟದಲ್ಲಿ ಹಾಲಿ ನಡೆಯುತ್ತಿರುವ ಸಂಘರ್ಷ, ವಿಶ್ವ ರಾಷ್ಟ್ರ ಗಳನ್ನು ಆರ್ಥಿಕ ಸಂಕಷ್ಟ ಕಾಡುತ್ತಿರುವ ಹೊರತಾಗಿಯೂ ಭಾರತ ಅಭಿವೃದ್ಧಿ ಪಥ ದಲ್ಲಿ ದಾಪುಗಾಲಿಡುತ್ತಿದೆ. ಇದರ ನಡುವೆಯೇ ಭಯೋತ್ಪಾದನೆ, ಅಲ್ಲಲ್ಲಿ ಮೊಳಕೆ ಯೊಡೆಲೆತ್ನಿಸುತ್ತಿರುವ ಪ್ರತ್ಯೇಕತಾವಾದಿ ಸಂಘಟನೆಗಳು, ಗಡಿ ಪ್ರದೇಶ ದಲ್ಲಿ ಚೀನ ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯದಲ್ಲಿ ನಿರತವಾಗಿರು ವುದು, ಸೇನಾಪಡೆಗಳ ಗಸ್ತನ್ನು ಹೆಚ್ಚಿಸುತ್ತಿರುವುದು ಹೀಗೆ ಈ ಎಲ್ಲ ಪ್ರತಿಕೂಲ ವಿದ್ಯ ಮಾನಗಳ ಹಿನ್ನೆಲೆಯಲ್ಲಿ ದೇಶದ ಭದ್ರತೆ ಮತ್ತು ಸಾರ್ವಭೌಮತೆಯ ರಕ್ಷಣೆಯ ನಿಟ್ಟಿನಲ್ಲಿ ಸಶಸ್ತ್ರ ಪಡೆಗಳ ಬಲವರ್ಧನೆಯ ಕೇಂದ್ರದ ನಿರ್ಧಾರ ಅತ್ಯಂತ ಗಮನಾರ್ಹ.

ಜಾಗತಿಕ ಸಮುದಾಯದೊಂದಿಗೆ ಶಾಂತಿ-ಸೌಹಾರ್ದ, ಸಹಭಾಗಿತ್ವದ ಮಂತ್ರ ವನ್ನು ಸದಾ ಪಠಿಸುತ್ತಲೇ ಬಂದಿರುವ ಭಾರತ, ಇದೇ ವೇಳೆ ತನ್ನನ್ನು ಕೆಣಕಲು ಬಂದ ದೇಶಗಳಿಗೆ ಸೂಕ್ತ ಪಾಠ ಕಲಿಸಿದೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಯಾವುದೇ ತೆರನಾದ ಸಂಭಾವ್ಯ ಪರಿಸ್ಥಿತಿಗಳನ್ನೆದುರಿಸಲು ದೇಶದ ಸೇನಾಪಡೆಗಳನ್ನು ಸರ್ವಸನ್ನದ್ಧವಾಗಿರಿಸಲು ಗರಿಷ್ಠ ಆದ್ಯತೆಯನ್ನು ನೀಡಿದೆ. ಈ ರಕ್ಷಣ ಕಾರ್ಯತಂತ್ರದ ಭಾಗವಾಗಿ ಸರಕಾರ ಈಗ ಭಾರತೀಯ ಸಶಸ್ತ್ರ ಪಡೆಗಳ ಸಾಮರ್ಥ್ಯ ವರ್ಧನೆಗೆ ಮುಂದಾಗಿದ್ದು ಮತ್ತಷ್ಟು ಸಮರ ವಿಮಾನಗಳನ್ನು ದೇಶದ ಸೇನಾ ಬತ್ತಳಿಕೆಗೆ ಸೇರ್ಪಡೆಗೊಳಿಸುವ ತೀರ್ಮಾನ ಕೈಗೊಂಡಿರುವುದು ಅತ್ಯಂತ ದಿಟ್ಟ ಹೆಜ್ಜೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next