Advertisement
ಅಝರ್ ಬೈಜಾನ್ ನ ಏಳು ಮಂದಿ ಹಾಗೂ ಅರ್ಮೇನಿಯಾದ ಇಬ್ಬರು ಸೇರಿದಂತೆ ಒಂಬತ್ತು ಮಂದಿ ನಾಗರಿಕರು ಸಾವನ್ನಪ್ಪಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.ಎರಡು ದೇಶಗಳ ಯುದ್ಧದಲ್ಲಿ ಯಾವುದೇ ಸೈನಿಕರು ಸಾವನ್ನಪ್ಪಿರುವ ಬಗ್ಗೆ ಅಝರ್ ಬೈಜಾನ್ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದರೆ ಅರ್ಮೇನಿಯಾದ ಪ್ರತ್ಯೇಕತವಾದಿ ಅಧಿಕಾರಿಗಳು ಬಿಡುಗಡೆ ಮಾಡಿರುವ ವಿಡಿಯೋ ಫೂಟೇಜ್ ನಲ್ಲಿ ಶಸ್ತ್ರಸಜ್ಜಿತ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಇದರಲ್ಲಿ ಸೈನಿಕರ ಸುಟ್ಟ ಶವಗಳಿರುವುದು ಕಂಡುಬಂದಿದ್ದು, ಇದು ಅಝರ್ ಬೈಜಾನ್ ಸೈನಿಕರ ಶವ ಎಂದು ಹೇಳಿದೆ.
Related Articles
Advertisement
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
2018ರಲ್ಲಿ ಅಝರ್ ಬೈಜಾನ್ ನಲ್ಲಿನ ಬಾಕುವಿನಲ್ಲಿ ಸಂಭವಿಸಿದ ಅಗ್ನಿ ದುರಂತದ ವೇಳೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಚಿವೆ ಸುಷ್ಮಾ ಸ್ವರಾಜ್ ಅವರು ಭೇಟಿ ನೀಡಿದ್ದರು. ಇಲ್ಲಿನ ದೇವಾಲಯಗಳನ್ನು ಹಿಂದೆ ಹಿಂದೂಗಳು ಮತ್ತು ಝೋರಾಸ್ಟ್ರಿಯನ್ ಸಮುದಾಯ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿತ್ತು. ಬಹುಶಃ ಇವರೆಲ್ಲ ಭಾರತದಿಂದ ಭೇಟಿ ನೀಡುತ್ತಿದ್ದ ವ್ಯಾಪಾರಿಗಳು. ಆದರೆ ಅರ್ಮೇನಿಯಾ ದೇಶದ ವಿಚಾರಕ್ಕೆ ಬಂದರೆ, ಅದು ಹಲವಾರು ಪ್ರಮುಖ ವಿಷಯಗಳಲ್ಲಿ ಭಾರತದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ವರದಿ ಹೇಳಿತ್ತು.
ಪ್ರತ್ಯೇಕತೆಗಾಗಿ ಹಾತೊರೆಯುತ್ತಿರುವ ನಗೊರ್ನೊ-ಕರಬಾಖ್ ಗಾಗಿ ಎರಡು ದೇಶಗಳ ನಡುವೆ ಯುದ್ಧ ನಡೆದಿದ್ದು, ಸುಮಾರು 23 ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿ ತಿಳಿಸಿತ್ತು.