Advertisement
ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಸಸಿಹಿತ್ಲು ಭಗವತೀ ಯಕ್ಷಗಾನ ಮೇಳದ ಕಲಾವಿದ ಪ್ರವೀತ್ ಕುಮಾರ್ (22) ಮೃತಪಟ್ಟವರು. ಮೇಳದಲ್ಲಿ ಸ್ತ್ರೀವೇಷಧಾರಿಯಾಗಿದ್ದ ಪ್ರವೀತ್ ಮಂಗಳವಾರ ಬಜಪೆ ಕಂದಾವರ ಬೈಲಿನಲ್ಲಿ ನಿಗದಿಯಾಗಿದ್ದ ಮೇಳದ ಯಕ್ಷಗಾನಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
Related Articles
ಪ್ರವೀತ್ ಬೆಳ್ತಂಗಡಿ ತಾಲೂಕು ಬದ್ಯಾರು ಮುಂಡೂರು ಮೂಲದವರಾಗಿದ್ದು, ಶೇಖರ ಎಂಬವರ ಮೂವರು ಪುತ್ರರಲ್ಲಿ ಎರಡನೆಯವರಾಗಿದ್ದರು. ಅಣ್ಣ ಕೆಲಸ ಮಾಡಿಕೊಂಡಿದ್ದು, ತಮ್ಮ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಎಂಎಸ್ಡಬ್ಲ್ಯು ಕಲಿಯಲು ಆಸಕ್ತಿ ಹೊಂದಿದ್ದ ಅವರಿಗೆ ವಿಟ್ಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಶಿಕ್ಷಣದ ಕಾರಣಕ್ಕಾಗಿ ಅವರು ಮಂಗಳೂರಿನ ಚಿಕ್ಕಮ್ಮನ ಮನೆಯಲ್ಲಿ ನೆಲೆಸಿದ್ದರು. ಮಂಗಳೂರಿನಿಂದಲೇ ಪ್ರತಿನಿತ್ಯ ಬೈಕ್ನಲ್ಲಿ ಬಿಸಿರೋಡ್ ವರೆಗೆ ತೆರಳಿ ಅಲ್ಲಿಂದ ಬಸ್ಸಿನಲ್ಲಿ ವಿಟ್ಲಕ್ಕೆ ಕಾಲೇಜಿಗೆ ತೆರಳುತ್ತಿದ್ದರು. ಅದರಂತೆ ಮಂಗಳವಾರವೂ ಕಾಲೇಜಿಗೆ ತೆರಳಿದ್ದು, ಬಿ.ಸಿ.ರೋಡ್ನಿಂದ ಬೈಕ್ನಲ್ಲಿ ವಾಪಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ.
Advertisement
ಮೂರನೇ ವರ್ಷದ ತಿರುಗಾಟಸಸಿಹಿತ್ಲು ಮೇಳದಲ್ಲಿ ಈ ಬಾರಿ ಮೂರನೇ ವರ್ಷದ ತಿರುಗಾಟ ನಡೆಸುತ್ತಿದ್ದರು. ಸಸಿಹಿತ್ಲು ಭಗವತಿ ಕ್ಷೇತ್ರ ಮಹಾತೆ¾ಯಲ್ಲಿ ದೇವಿಯ ಪಾತ್ರವನ್ನೂ ಮಾಡುತ್ತಿದ್ದರು. ಆರಂಭದಲ್ಲಿ ವಿವಿಧ ಸ್ತ್ರೀ ಹಾಗೂ ಇತರ ವೇಷಗಳನ್ನು ಮಾಡುತ್ತಿದ್ದ ಅವರು ಯಕ್ಷಗಾನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಸುಂಕದಕಟ್ಟೆ ಕಾಲೇಜಿನಲ್ಲಿ ಕಲಿಯುತ್ತಿದ್ದ ವೇಳೆ ಸುಂಕದಕಟ್ಟೆ ಮೇಳದಲ್ಲಿಯೂ ಒಂದು ವರ್ಷ ಪಾತ್ರ ಮಾಡಿದ್ದರು. ಕಾಲೇಜು ಮುಗಿಸಿ ಯಕ್ಷಗಾನದಲ್ಲಿ ಪಾತ್ರ ಮಾಡುವ ಮೂಲಕ ಶಿಕ್ಷಣದ ಜತೆಗೆ ಮನೆಗೂ ನೆರವಾಗುತ್ತಿದ್ದರು.