Advertisement

ಜು.21ರಂದು ಕರಾವಳಿಯಲ್ಲಿ ‘ಅರ್ಜುನ್‌ ವೆಡ್ಸ್‌ ಅಮೃತ’

10:04 PM Jul 12, 2017 | Karthik A |

ಮಹಾನಗರ: ಬಹುನಿರೀಕ್ಷಿತ ‘ಅರ್ಜುನ್‌ ವೆಡ್ಸ್‌ ಅಮೃತಾ’ ತುಳು ಸಿನೆಮಾ ಜು.21ಕ್ಕೆ ಬಿಡುಗಡೆಯಾಗಲಿದೆ. ನವಿರಾದ ಪ್ರೇಮಕಥೆಯನ್ನೊಳಗೊಂಡ ಚಿತ್ರದ ಸಂಗೀತ ಈಗಾಗಲೇ ತುಳುವರಿಗೆ ಇಷ್ಟವಾಗಿದ್ದು ಚಿತ್ರ ಬಿಡುಗಡೆಗೆ ಕಾಯುವಂತೆ ಮಾಡಿದೆ. ಸುಮಾ ಎಲ್‌.ಎನ್‌. ಶಾಸ್ತ್ರಿ ಮೊದಲ ಬಾರಿಗೆ ಸಂಗೀತ ನೀಡಿರುವುದು ಚಿತ್ರದ ವಿಶೇಷತೆ. ರಘು ಶೆಟ್ಟಿ ನಿರ್ದೇಶನ ಇರುವ ಚಿತ್ರವನ್ನು ಬೆದ್ರ 9 ಕ್ರಿಯೇಷನ್‌ ನಿರ್ಮಿಸಿದ್ದು ಹಾಸ್ಯಮಿಶ್ರಿತ ಪ್ರೇಮಕಥೆ ಚಿತ್ರದಲ್ಲಿದೆ. ಅನೂಪ್‌ ಸಾಗರ್‌ – ಆರಾಧ್ಯ ಶೆಟ್ಟಿ ನಾಯಕ, ನಾಯಕಿಯರಾಗಿ ಚಿತ್ರಕ್ಕೆ ಬಣ್ಣ ಹಚ್ಚಿದ್ದರೆ ಜನರನ್ನು ರಂಜಿಸಲು ಅರವಿಂದ್‌ ಬೋಳಾರ್‌, ಭೋಜರಾಜ್‌ ವಾಮಂಜೂರು, ಉಮೇಶ್‌ ಮಿಜಾರ್‌, ಸುಂದರ ರೈ ಮಂದಾರ ಜೊತೆ ಸೇರಿದ್ದಾರೆ. ನವೀನ್‌ ಡಿ. ಪಡೀಲ್‌ ಚಿತ್ರದಲ್ಲಿ ಗಂಭೀರ ಪಾತ್ರವನ್ನು ನಿರ್ವಹಿಸಿದ್ದಾರೆ.

Advertisement

ರಘುಶೆಟ್ಟಿ ಚೊಚ್ಚಲ ನಿರ್ದೇಶನದ ಅರ್ಜುನ್‌ ವೆಡ್ಸ್‌ ಅಮೃತ ಸಿನೆಮಾಕ್ಕೆ ಕಳೆದ ನ. 2ರಂದು ಕಟೀಲು ಕ್ಷೇತ್ರದಲ್ಲಿ ಮುಹೂರ್ತ ನೆರವೇರಿತ್ತು. ರಾಜೇಶ್‌ ಶೆಟ್ಟಿ, ದಾಮೋದರ ದೊಂಡೋಲೆ ಲೋಕು ಕುಡ್ಲ ಅವರ ಸಾಹಿತ್ಯ ಇದೆ. ಕಿರಣ್‌ ತರುಣ್‌ರಾಜ್‌ ಕೊರಿಯೋಗ್ರಾಫರ್‌ ಆಗಿದ್ದಾರೆ. ರಾಜೇಶ್‌ ಕೃಷ್ಣನ್‌. ಹೇಮಂತ್‌, ಎಲ್‌.ಎನ್‌. ಶಾಸ್ತ್ರಿ ಸುಪ್ರಿಯಾ ಮತ್ತು ಸುಮಾ ಎಲ್‌.ಎನ್‌ ಶಾಸ್ತ್ರಿ ಸ್ವರ ನೀಡಿದ್ದಾರೆ. ಚೇತನ್‌ ಮುಂಡಾಡಿ ಕಲಾ ನಿರ್ದೇಶಕರು ಆನಂದ ಸುಂದರೇಶ್‌ ಅವರು ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಸಹ ನಿರ್ದೇಶಕರಾಗಿ ತ್ರಿಶೂಲ್‌ ಶೆಟ್ಟಿ, ರಾಮ್‌ದಾಸ್‌ ಸಸಿಹಿತ್ಲು ದುಡಿದಿದ್ದಾರೆ. ಅನೂಪ್‌ ಸಾಗರ್‌ ನಾಯಕ ನಟರಾಗಿ, ಆರಾಧ್ಯ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್‌ ಡಿ.ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ಉಮೇಶ್‌ ಮಿಜಾರ್‌, ಸಂದೀಪ್‌ ಶೆಟ್ಟಿ, ಪ್ರಸನ್ನ ಶೆಟ್ಟಿ, ರಮೇಶ್‌ ರೈ ಕುಕ್ಕುವಳ್ಳಿ, ಸುನೀಲ್‌ ನೆಲ್ಲಿಗುಡ್ಡೆ, ಸುಧೀರ್‌ ರಾಜ್‌ ಉರ್ವಾ, ಸತೀಶ್‌ ಬಂದಲೆ, ಪವಿತ್ರ ಶೆಟ್ಟಿ ಕಟಪಾಡಿ, ಹರಿಣಿ ಕಾರ್ಕಳ ಆರ್‌.ಜೆ.ಅನುರಾಗ್‌, ಪ್ರಜ್ವಲ್‌ ಪಾಂಡೇಶ್ವರ್‌ ಮೊದಲಾದವರಿದ್ದಾರೆ. ರಘು ಶೆಟ್ಟಿ ಅವರದೇ ಕಥೆ, ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next