Advertisement

ಧರ್ಮಶಾಲಾದಲ್ಲಿ ಅರ್ಜುನ್‌ ಅಭ್ಯಾಸ

07:35 AM Apr 29, 2018 | |

ಧರ್ಮಶಾಲಾ: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ 18ರ ಹರೆಯದ ಅರ್ಜುನ್‌ ತೆಂಡುಲ್ಕರ್‌ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ನ ಕ್ರೀಡಾಂಗಣದಲ್ಲಿ ಕಠಿನ ಅಭ್ಯಾಸ ನಡೆಸುತ್ತಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಅರ್ಜುನ್‌ ಅವರ ಅಭ್ಯಾಸವನ್ನು ವೀಕ್ಷಿಸಲು ಸಚಿನ್‌ ತೆರಳುವ ಸಾಧ್ಯತೆಯಿದೆ.

Advertisement

25 ಮಂದಿಯ ಅಂಡರ್‌-19 ಆಟಗಾರರು ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಒಂದು ತಿಂಗಳ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಬೆಳಗ್ಗೆ 6ರಿಂದ ಬೆಳಗ್ಗಿನ ಅವಧಿಯ ಅಭ್ಯಾಸ ಆರಂಭವಾಗಲಿದ್ದು ಸಂಜೆಯವರೆಗೂ ಮುಂದುವರಿಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರ್ಜುನ್‌ ತೆಂಡುಲ್ಕರ್‌ ಕಠಿನ ಅಭ್ಯಾಸ ನಡೆಸುತ್ತಿದ್ದಾರೆ. ಇತರ 25 ಅಂಡರ್‌ 19 ಕ್ರಿಕೆಟಿಗರ ಜತೆ ಕ್ರೀಡಾಂಗಣದ ಸಂಕೀìದಲ್ಲಿಯೇ ಅರ್ಜುನ್‌ ಕೂಡ ಉಳಿದುಕೊಂಡಿದ್ದಾರೆ ಎಂದು ಎಚ್‌ಪಿಸಿಎಯ ಅಧಿಕೃತ ವಕ್ತಾರ ಹೇಳಿದ್ದಾರೆ. ಶಿಬಿರ ಮೇ 20ರಂದು ಕೊನೆಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next