Advertisement

ಕ್ಯಾಮರ ಎಸೆದು ನಟ ಅರ್ಜುನ್‌ ರಾಮ್‌ಪಾಲ್‌ರಿಂದ ಹಲ್ಲೆ;ವ್ಯಕ್ತಿಗೆ ಗಾಯ

02:52 PM Apr 09, 2017 | Team Udayavani |

ಹೊಸದಿಲ್ಲಿ : ಇಲ್ಲಿನ ಪಂಚತಾರ ಹೊಟೇಲ್‌ವೊಂದರಲ್ಲಿ ನಟ ಅರ್ಜುನ್‌ ರಾಮ್‌ಪಾಲ್‌ ಅವರು ಫೋಟೋ ತೆಗೆಯುತ್ತಿದ್ದ ವ್ಯಕ್ತಿಯೊಬ್ಬನ ಕ್ಯಾಮರಾ ಕಸಿದು ಅದರಿಂದಲೇ ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ.

Advertisement

ಹಲ್ಲೆಗೊಳಗಾಗಿರುವ ಶೋಭಿತ್‌ ಎಂಬಾತ ಪೊಲೀಸರಿಗೆ ನೀಡಿರುವ ದೂರಿನಂತೆ.ಶಾಂಗ್ರಿ ಲಾ ಹೊಟೇಲ್‌ನಲ್ಲಿ ನಸುಕಿನ 3.30 ರ ವೇಳೆಗೆ ನಡೆಯುತ್ತಿದ್ದ ಡಿಜೆ ಕಾರ್ಯಕ್ರಮದಲ್ಲಿ ಘಟನೆ ನಡೆದಿದ್ದು, ಕ್ಯಾಮಾರ ಕಸಿದು ರಾಮ್‌ಪಾಲ್‌ ಎಸೆದಿದ್ದು ಅದು ತಗುಲಿ ಗಾಯಗೊಂಡಿರುವುದಾಗಿ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next