Advertisement

Arjun Kapikad; ತುಳುನಾಡಿನ ಕಲ್ಜಿಗದ ಕಥೆ: ಕರಾವಳಿ ಮಂದಿಯ ಮತ್ತೊಂದು ಸಾಹಸ

10:45 AM Apr 21, 2024 | Team Udayavani |

ಕಲ್ಜಿಗ- ಹೀಗೊಂದು ಸಿನಿಮಾ ಸದ್ದಿಲ್ಲದೇ ತಯಾರಾಗಿದೆ. ಅರ್ಜುನ್‌ ಕಾಪಿಕಾಡ್‌ ಈ ಚಿತ್ರದ ನಾಯಕ. ಈ ಚಿತ್ರ ತುಳು ಮತ್ತು ಕನ್ನಡ ಎರಡು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಕಲ್ಜಿಗ ಎಂಬುದು ತುಳುಪದವಾಗಿದ್ದು, ಕಲಿಯುಗ ಎಂಬ ಅರ್ಥವಿದೆ. ತುಳುನಾಡಿನಲ್ಲಿ ಹಲವು ಪವಾಡಗಳ, ತನ್ನ ಶಕ್ತಿಯ ಮೂಲಕ ಅಪಾರ ಭಕ್ತರನ್ನು ಹೊಂದಿರುವ ದೈವವೊಂದರ ಸುತ್ತ ಈ ಸಿನಿಮಾ ನಡೆಯಲಿದೆ.

Advertisement

ಸುಮನ್‌ ಸುವರ್ಣ ನಿರ್ದೇಶನದ ಈ ಚಿತ್ರವನ್ನು ಶರತ್‌ ಕುಮಾರ್‌ ಎ.ಕೆ. ನಿರ್ಮಿಸಿದ್ದಾರೆ. ಸುಶ್ಮಿತಾ ಭಟ್‌ ಈ ಚಿತ್ರದ ನಾಯಕಿ. ನಾಯಕ ಅರ್ಜುನ್‌ ಕಾಪಿಕಾಡ್‌ಗೆ ಈ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಸಾಕಷ್ಟು ಹೊಸ ಅನುಭವಗಳಾಗಿದ್ದು, ಇದಕ್ಕೆಲ್ಲಾ ಕಾರಣ ಆ ದೈವದ ಕಾರಣಿಕ ಎಂಬುದು ಅವರ ಮಾತು.

ಚಿತ್ರದ ಬಗ್ಗೆ ಮಾತನಾಡುವ ತಂಡ, “ಇದು ಕರಾವಳಿಯಲ್ಲಿ ನಡೆಯುವ ಕಥೆ. ಕರಾವಳಿಗರು ದೈವ-ದೇವರ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡವರು. ಈ ಸಿನಿಮಾದಲ್ಲೂ ತುಳುನಾಡಿನ ದೈವದ ಕಥೆ ಇದೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆ. ಚಿತ್ರದ ಚಿತ್ರೀಕರಣ ಕೂಡಾ ಅಲ್ಲೇ ನಡೆದಿದೆ’ ಎಂಬ ಮಾಹಿತಿ ನೀಡುತ್ತದೆ.

ಚಿತ್ರಕ್ಕೆ ಹಂಸಲೇಖ ಸಂಗೀತವಿದ್ದು, ಚಿತ್ರದಲ್ಲಿ ಎರಡು ಹಾಡುಗಳಿವೆ. ಸಚಿನ್‌ ಶೆಟ್ಟಿ ಛಾಯಾಗ್ರಹಣ, ಪ್ರಸಾದ್‌ ಕೆ ಶೆಟ್ಟಿ ಹಿನ್ನೆಲೆ ಸಂಗೀತ, ಯಶ್ವಿ‌ನ್‌ ಕೆ ಶೆಟ್ಟಿಗಾರ್‌ ಸಂಕಲನ ಈ ಚಿತ್ರಕ್ಕಿದೆ. ಚಿತ್ರವನ್ನು ಸೆಪ್ಟೆಂಬರ್‌ನಲ್ಲಿ ತೆರೆಗೆ ತರುವ ಯೋಚನೆ ಚಿತ್ರತಂಡದ್ದು.

Advertisement

Udayavani is now on Telegram. Click here to join our channel and stay updated with the latest news.

Next