Advertisement

ಐಎಂ ಉಗ್ರ ಆರಿಜ್‌ ಅರೆಸ್ಟ್‌

10:50 AM Feb 15, 2018 | Harsha Rao |

ಹೊಸದಿಲ್ಲಿ: ಉಡುಪಿಯಿಂದ ಹೊಸದಿಲ್ಲಿಗೆ 2008ರ ಸೆಪ್ಟೆಂಬರ್‌ನಲ್ಲಿ ಸ್ಫೋಟಕಗಳನ್ನು ತೆಗೆದುಕೊಂಡು ಹೋಗಿದ್ದ ಇಂಡಿಯನ್‌ ಮುಜಾಹಿದೀನ್‌ ಉಗ್ರ ಆರಿಜ್‌ ಖಾನ್‌ ಅಲಿಯಾಸ್‌ ಜುನೈದ್‌ (32)ನನ್ನು ಬಂಧಿಸಲಾಗಿದೆ.

Advertisement

ಭಾರತ ಮತ್ತು ನೇಪಾಳ ಗಡಿ ಪ್ರದೇಶದಲ್ಲಿ ನಡೆಸಲಾಗಿರುವ ಕಾರ್ಯಾಚರಣೆಯಲ್ಲಿ ಹೊಸದಿಲ್ಲಿಯ ಪೊಲೀಸ್‌ ಇಲಾಖೆಯ ವಿಶೇಷ ತಂಡ ಮಂಗಳವಾರ ಬಂಧಿಸಿದೆ.  2008ರಲ್ಲಿ ಹೊಸದಿಲ್ಲಿಯ ಬಾತ್ಲಾ ಎನ್‌ಕೌಂಟರ್‌ ವೇಳೆ ಇದ್ದ ನಾಲ್ವರು ಉಗ್ರರಲ್ಲಿ ಈತನೂ ಒಬ್ಬ ಎಂಬ ಮಾಹಿತಿ ಲಭ್ಯವಾಗಿದೆ ಎಂದಿದ್ದಾರೆ. ಈತ ಉತ್ತರ ಪ್ರದೇಶ, ಗುಜರಾತ್‌ನ ಅಹಮದಾಬಾದ್‌, ರಾಜಸ್ಥಾನದ ಜೈಪುರ ಸೇರಿದಂತೆ ದೇಶದ ಹಲವೆಡೆ ನಡೆದ ಬಾಂಬ್‌ ಸ್ಫೋಟಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ವಿಶೇಷ ತಂಡದ ಡಿ.ಸಿ.ಪಿ.ಪ್ರದೀಪ್‌ ಸಿಂಗ್‌ ಖುಶ್ವಾಹ ಹೇಳಿದ್ದಾರೆ. ಇದೊಂದು ಭರ್ಜರಿ ಯಶಸ್ಸು ಎಂದು ಹೇಳಿರುವ ಅವರು ಈತ 2008ರಲ್ಲಿ ದೇಶಾದ್ಯಂತ ಕೋಲಾಹಲಕ್ಕೆ ಕಾರಣವಾಗಿದ್ದ ಬಾತ್ಲಾ ಎನ್‌ಕೌಂಟರ್‌ನಲ್ಲಿಯೂ ಭಾಗಿಯಾಗಿದ್ದ. 2008ರ ಸೆ.19ರಂದು ನಡೆದಿದ್ದ ಎನ್‌ಕೌಂಟರ್‌ನಲ್ಲಿ ಇಬ್ಬರು ಇಂಡಿಯನ್‌ ಮುಜಾಹಿದೀನ್‌ ಉಗ್ರರು ಹತರಾಗಿದ್ದರು. ಅವರಿಬ್ಬರ ಜತೆ ಆರಿಜ್‌ ಖಾನ್‌ ಮತ್ತು ಅಬ್ದುಲ್‌ ಸಭಾನ್‌ ಖುರೇಷಿ ಎಂಬಾತನೂ ಇದ್ದ ಎಂದು ಖುಶ್ವಾಹ ಹೇಳಿದ್ದಾರೆ.

2008ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಸ್ಫೋಟದಲ್ಲಿ 30 ಮಂದಿ ಅಸುನೀಗಿ, 100 ಮಂದಿ ಗಾಯಗೊಂಡಿದ್ದರು. ದಿಲ್ಲಿ ಸ್ಫೋಟಕ್ಕೆ ಕರ್ನಾಟಕದ ಉಡುಪಿಯಿಂದ ಆತನ ಸ್ನೇಹಿತರಾದ ಮೊಹಮ್ಮದ್‌ ಸಯೀದ್‌, ಖಾಲಿದ್‌ ಅಲಿಯಾಸ್‌ ಕೋಡಿ ಎಂಬುವರ ಜತೆಗೂಡಿ ತಂದಿದ್ದ. ಹೊಸದಿಲ್ಲಿಯಲ್ಲಿ ಆರಿಜ್‌ನ ಶಾಲಾ ಸಹಪಾಠಿ ಆತಿಫ್ ಅಮೀನ್‌ ಅವುಗಳನ್ನು ಸ್ವೀಕರಿಸಿದ್ದ.

ಆತನ ಮಾಹಿತಿ ನೀಡಿದವರಿಗೆ 15 ಲಕ್ಷ ರೂ. ಬಹುಮಾನ ಕೂಡ ಘೋಷಿಸಲಾಗಿತ್ತು. ಈತ ಬಾಂಬ್‌ ಇರಿಸುವುದರಲ್ಲಿ ಸಿದ್ಧಹಸ್ತನಿದ್ದು ಈತನಿಂದಾಗಿ 165 ಮಂದಿ ಸಾವಿಗೀಡಾಗಿ, 535 ಮಂದಿ ಗಾಯಗೊಂಡಿದ್ದಾರೆ.

ನೇಪಾಲಕ್ಕೆ ಪರಾರಿ: ಈತ ನೇಪಾಳಕ್ಕೆ ತೆರಳಿ, ಅಲ್ಲಿನ ಪೌರತ್ವ ಪಡೆದುಕೊಂಡಿದ್ದ. ಅದಕ್ಕಾಗಿ ಆತ ಸಲೀಂ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಆರಂಭದಲ್ಲಿ ಆರಿಜ್‌ ರೆಸ್ಟಾರೆಂಟ್‌ ವ್ಯವಹಾರಕ್ಕೆ ನಡೆಸಲು ಮುಂದಾಗಿದ್ದ ಎಂದು ಖುಶ್ವಾಹ ತಿಳಿಸಿದ್ದಾರೆ. 

Advertisement

ಇದೇ ಸಂದರ್ಭದಲ್ಲಿ ಇಂಡಿಯನ್‌ ಮುಜಾದೀನ್‌ ಸಂಸ್ಥಾಪಕ ರಿಯಾಜ್‌ ಭಟ್ಕಳ್‌ ಜತೆ ಮತ್ತೆ ಸಂಪರ್ಕ ಸಾಧಿಸಿದ್ದ. ಆತ ಮನವೊಲಿಸಿದ್ದ ಹಿನ್ನೆಲೆಯಲ್ಲಿ 2014ರ ಸೆಪ್ಟೆಂಬರ್‌ನಲ್ಲಿ ಉಗ್ರ ಸಂಘಟನೆಯನ್ನು ಮತ್ತೆ ಮರು ಸಂಘಟಿಸಲು ಹಣಕಾಸಿನ ನೆರವು ಪಡೆಯಲು ಅಲ್ಲಿಗೆ ತೆರಳಿದ್ದ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. 

2017ರ ಮಾರ್ಚ್‌ನಲ್ಲಿ ಆರಿಜ್‌ ಸೌದಿ ಅರೇಬಿಯಾದಿಂದ ನೇಪಾಲಕ್ಕೆ ಆಗಮಿಸಿದ್ದ. ಅಲ್ಲಿಂದ ಭಾರತಕ್ಕೆ ಹಲವು ಬಾರಿ ಬಂದಿದ್ದ ಎಂಬ ಮಾಹಿತಿಯೂ ಈಗ ದಿಲ್ಲಿ ಪೊಲೀಸ ರಿಂದಲೇ ಲಭ್ಯವಾಗಿದೆ. ಸಹಾನುಭೂತಿ ಪಡೆಯಲೋಸುಗ ನೇಪಾಲದಲ್ಲಿ ಕೂಲಿ ಕಾರ್ಮಿಕನಂತೆಯೂ ಕೆಲಸ ಮಾಡಿದ್ದ ಎಂದು ಖುಶ್ವಾಹ ತಿಳಿಸಿದ್ದಾರೆ. ಈ ಮೂಲಕ ಆತ ಹಲವಾರು ಮಂದಿಯಿಂದ ಸಹಾನುಭೂತಿ ಪಡೆದುಕೊಂಡಿದ್ದಾನೆ. ಆತ ಅಧ್ಯಾ ಪ ಕ ನಾಗಿ ವೇಷ ಮರೆ ಸಿ ಕೊಂಡು ಕೆಲ ಕಾಲ ಇದ್ದ ಮಾಹಿತಿ ಸಿಕ್ಕಿ ದೆ.

Advertisement

Udayavani is now on Telegram. Click here to join our channel and stay updated with the latest news.

Next