ದೇವದುರ್ಗ: ಜನಸಾಮಾನ್ಯರಿಗೆಕಾನೂನು ಅರಿವು-ನೆರವು ನೀಡುವಜತೆಗೆ ಜಾಗೃತಿ ಮೂಡಿಸಲು ನ.4ರಿಂದ 14ರವರೆಗೆ ತಾಲೂಕಿನಾದ್ಯಂತ ಅರಿವು-ನೆರವು ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು ತಾಲೂಕುಸಿವಿಲ್ ಕೋರ್ಟ್ ಹಿರಿಯ ಶ್ರೇಣಿ ನ್ಯಾಯಾಧೀಶೆ ವೈ.ಎಲ್. ಲಾಡ್‌ಖಾನ್ ಹೇಳಿದರು.
ಪಟ್ಟಣದ ತಾಲೂಕು ಕಾನೂನು ಸೇವಾ ಸಮಿತಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ತಾಲೂಕುಆಡಳಿತ, ತಾಪಂ ಸಹಯೋಗದಲ್ಲಿ ಗ್ರಾಮೀಣ ಭಾಗದಲ್ಲಿ ಕಾರ್ಯಾಗಾರ ಆಯೋಜಿಸಿ ಹಳ್ಳಿ ಜನರಿಗೆ ಕಾನೂನು ಜ್ಞಾನ ಮೂಡಿಸಲಾಗುವುದು ಎಂದರು.
ನ.4ರಂದು ಹೇಮನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.ಅಂದೇ ಅರಕೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ನಡೆಯಲಿದೆ. ನ.6ರಂದು ಗಬ್ಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೌಟುಂಬಿಕ ಕಲಹಗಳು ಹಾಗೂ ವಿವಿಧ ಸಮಸ್ಯೆ ಕುರಿತುಕಾರ್ಯಾಗಾರ, ನ.7ರಂದು ಗಾಣಧಾಳಪ್ರಾಥಮಿಕ ಶಾಲೆಯಲ್ಲಿ ವರದಕ್ಷಿಣೆ ವಿಷಯ ಕುರಿತು ಜಾಗೃತಿ, ನ.8ರಂದು ಕೊಪ್ಪರ ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ನ.9ರಂದು ಪಟ್ಟಣದ ಕೋರ್ಟ್ ಆವರಣದಲ್ಲಿ ಲೀಗಲ್ ಸರ್ವಿಸ್ ಹಾಗೂ ಕಾನೂನು ಸೇವೆಗಳ ದಿನಾಚರಣೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ನ.10ರಂದು ಆಲ್ಕೋಡ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 9.30ಕ್ಕೆಹಾಗೂ ಜಾಗೀರ್ ಜಾಡಲದಿನ್ನಿಯಲ್ಲಿಮಧ್ಯಾಹ್ನ 12ಕ್ಕೆ ಉಪ ನೋಂದಣಿಹಾಗೂ ಸಿವಿಲ್ ಕೇಸ್‌ಗಳ ವಿಷಯಕುರಿತು, ನ.11ರಂದು ದೊಂಡಂಬಳಿಹಾಗೂ ಕರಿಗುಡ್ಡ ಶಾಲೆಯಲ್ಲಿ ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ ಕುರಿತು ಅರಿವು ಮೂಡಿಸಲಾಗುವುದು.
ನ.12ರಂದು ಪಟ್ಟಣದ ಎಪಿಎಂಸಿಭವನದಲ್ಲಿ ವಲಸೆ ಕಾರ್ಮಿಕರ ಸಮಸ್ಯೆ ಹಾಗೂ ಅವರ ಮಕ್ಕಳ ಶಿಕ್ಷಣದ ಕುರಿತು, ನ.13ರಂದು ಮೋಟರ್‌ವಾಹನಗಳು ಹಾಗೂ ಗ್ರಾಹಕರು ಸೇವಾಸಮಸ್ಯೆ ಕುರಿತು ಮುಂಡರಗಿ ಹಾಗೂಬಿ. ಗಣೇಕಲ್ ಸರ್ಕಾರಿ ಶಾಲೆಯಲ್ಲಿಕಾರ್ಯಕ್ರಮ ನಡೆಸಲಾಗುವುದು.
ನ.14ರಂದು ಕಿತ್ತೂರು ರಾಣಿ ಚನ್ನಮ್ಮವಸತಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆಅರಿವು ಹಾಗೂ ಕಾನೂನು ಅರಿವು-ನೆರವುಕಾರ್ಯಕ್ರಮದ ಸಮಾರೋಪ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶ ಬಾಳಸಾಹೇಬ್ ವಡವಡೆ, ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಕೋಲ್ಕರ್ ಇತರರು ಇದ್ದರು.
ಎಸ್ಸೆಸ್ಸೆಲ್ಸಿ ಟಾಪರ್ ಹಾಗೂ ಬಾಲ್ಯ ಕಾರ್ಮಿಕ ಪದ್ಧತಿ ತಡೆಗೆ ಬಾಲ ಕಾರ್ಮಿಕ ಪುನರ್ವಸತಿ ಶಾಲೆಯಲ್ಲಿ ಓದಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ 3ಮಕ್ಕಳಿಗೆ ಸನ್ಮಾನಿಸಲಾಗುವುದು. ಪಿಯು 3 ಟಾಪರ್ ಹಾಗೂ ಡಾನ್‌ಬೋಸ್ಕ್ ಶಿಕ್ಷಣ ಕೇಂದ್ರದ 42 ಬಾಲ ಕಾರ್ಮಿಕ ಮಕ್ಕಳಿಗೆ ಸನ್ಮಾನಿಸಿ, ಪ್ರೋತ್ಸಾಹಿಸಲಾಗುವುದು.
-ವೈ.ಎಲ್. ಲಾಡ್‌ಖಾನ್, ಮುಖ್ಯ ನ್ಯಾಯಾಧೀಶರು, ಸಿವಿಲ್