Advertisement

ಅರಿಶಿಣಗುಪ್ಪೆ : ಗ್ರಾಮೀಣ ಸಿರಿ ಉತ್ಪನ್ನ‌ ಮಳಿಗೆ ಉದ್ಘಾಟನೆ

01:00 AM Mar 04, 2019 | Harsha Rao |

ಶನಿವಾರಸಂತೆ: “ಗ್ರಾಮೀಣ ಮಹಿಳೆಯರು ಸ್ವ ಉದ್ಯೋಗ ಮಾಡುವ ಮೂಲಕ ಕುಟುಂಬದ ಆರ್ಥಿಕ ಮುಗ್ಗಟ್ಟು ಪರಿಸ್ಥಿತಿಯನ್ನು ನಿವಾರಣೆ ಮಾಡಬಹುದಾಗಿದೆ’ ಎಂದು ಶ್ರೀಧರ್ಮಸ್ಥಳ ಸಿರಿ ಗ್ರಾಮದ್ಯೋಗ ಸಂಸ್ಥೆಯ ಜಿಲ್ಲಾ ನಿರ್ದೇಶಕ ಯೋಗೇಶ್‌ ಅಭಿಪ್ರಾಯ ಪಟ್ಟರು. ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ಟಾಲೆ ವಲಯದ ಅರಿಶಿಣಗುಪ್ಪೆ ಕಾರ್ಯಕ್ಷೇತ್ರದಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಗ್ರಾಮೀಣ ಸಿರಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣದ ಯೋಜನೆಗಳಲ್ಲಿ  ಗ್ರಾಮೀಣ ಸಿರಿ ಉತ್ಪನ್ನ ಮಾರಾಟವು ಒಂದಾಗಿದೆ, ಇಂಥಹ ಸ್ವ ಉದ್ಯೋಗದಿಂದ ಮಹಿಳೆಯರ ಕುಟುಂಬದ ಆರ್ಥಿಕ ಮಟ್ಟ ಮತ್ತಷ್ಟು ಸುಧಾರಣೆಯಾಗುತ್ತದೆ ಎಂದರು.  ಸಿರಿ ಮಳಿಗೆಗಳಲ್ಲಿ ಸಿರಿ ಉಪ್ಪಿನಕಾಯಿ, ಅಕ್ಕಿರೊಟ್ಟಿ, ಹಪ್ಪಳ, ಸಿರಿ ಧಾನ್ಯ ಮುಂತಾದ ಆಹಾರ ಪದಾರ್ಥಗಳು ಸೇರಿದಂತೆ ಫಿನಾಯ್ಲ ಮುಂತಾದ ನಿತ್ಯ ಉಪಯೋಗಿ ವಸ್ತುಗಳು ದೊರಕುತ್ತದೆ, ಈ ನಿಟ್ಟಿನಲ್ಲಿ ಮಳೆಯರು ಸಿರಿ ಉತ್ಪನ್ನ ಮಾರಾಟ ಮಳಿಗೆಯಲ್ಲಿ ವ್ಯಾಪಾರ ವವಾಟು ನಡೆಸುವ ಮೂಲಕ ಸ್ವ ಉದ್ಯೋಗಿಗಳಾಗಿ ಸ್ವಾವಲಂಬಿಗಳಾಗಿ ಜೀವನ ಸಾಗಿಸುವಂತೆ ಸಲಹೆ ನೀಡಿದರು.

Advertisement

ತೊರೆನೂರು ಗ್ರಾ.ಪಂ.ಸದಸ್ಯ ರವಿಕುಮಾರ್‌ ಮಾತನಾಡಿ,ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯು ಮಳೆಯರ ಆರ್ಥಿಕ ಸಬಲಿಕರಣಕ್ಕೆ ಪೂರಕವಾಗಿದೆ ಎಂದರು. ಗ್ರಾಮೀಣ ಸಿರಿ ಉದ್ಯೋಗದ ಮೂಲಕ ಸಿರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಪರಿಕಲ್ಪನೆ ಉತ್ತಮವಾಗಿದೆ, ಸಿರಿ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಿರಿ ಆಹಾರ ಪದಾರ್ಥ, ಸಿರಿ ಧಾನ್ಯಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಸಿರಿ ಮಾರಾಟ ಮೇಲ್ವಿಚಾರಕ ಹರೀಶ್‌, ಹೆಬ್ಟಾಲೆ ವಲಯ ಮೇಲ್ವಿಚಾರಕ ಕೆ.ನೋದ್‌ಕುಮಾರ್‌, ಸೇವಾ ಪ್ರತಿನಿಧಿ ಮಂಜುಳಾ, ಸಿರಿ ಮಳಿಗೆ ಮಾಲಕ ನಿರ್ಮಲ ಸುರೇಶ್‌, ಒಕ್ಕೂಟದ ಉಪಾಧ್ಯಕ್ಷೆ ಪಾರ್ವತಿ, ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next