Advertisement

ಲೀಡ್‌ ಇಲ್ಲ,ಕಥೆಯೇ ಎಲ್ಲ! : ಅರಿಷಡ್ವರ್ಗ ಟ್ರೇಲರ್‌ ಬಿಡುಗಡೆ

12:53 PM Nov 18, 2020 | Suhan S |

ಸಾಮಾನ್ಯವಾಗಿ “ಅರಿಷಡ್ವರ್ಗ’ಗಳ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಈಗ ಇದೇ ಹೆಸರಿನಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿದೆ. ಮನುಷ್ಯನ “ಅರಿಷಡ್ವರ್ಗ’ಗಳನ್ನೇಕುರಿತು ಮಾಡಲಾದ ಸಸ್ಪೆನ್ಸ್‌ – ಥ್ರಿಲ್ಲರ್‌ಕಥಾಹಂದರ ಹೊಂದಿರುವ ಈ ಸಿನಿಮಾಕ್ಕೆ ರಂಗಕರ್ಮಿ ಅರವಿಂದ್‌ಕಾಮತ್‌ನಿರ್ದೇಶನ ಮಾಡಿದ್ದಾರೆ.

Advertisement

ಈಗಾಗಲೇ ಸದ್ದಿಲ್ಲದೆ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ “ಅರಿಷಡ್ವರ್ಗ’ ಚಿತ್ರ 2019ರಲ್ಲಿ ಲಂಡನ್‌ ವರ್ಲ್ಡ್ ಪ್ರೀಮಿಯರ್‌ ಮತ್ತು ಸಿಂಗಾಪುರದಲ್ಲಿ ನಡೆದ ಸೌತ್‌ ಏಷ್ಯನ್‌ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದುಕೊಂಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಇದೀಗ ಪ್ರೇಕ್ಷಕರ ಮುಂದೆ “ಅರಿಷಡ್ವರ್ಗ’ವನ್ನು ತರುವ ಯೋಚನೆ ಹಾಕಿಕೊಂಡಿದೆ. ಇದರ ಭಾಗವಾಗಿ ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿರುವ ಚಿತ್ರತಂಡ, “ಅರಿಷಡ್ವರ್ಗ’ದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿದೆ.

“ಕನಸು ಟಾಕೀಸ್‌’ ಬ್ಯಾನರ್‌ ಅಡಿಯಲ್ಲಿ ಆನಂದ್‌ ಮತ್ತು ಸ್ನೇಹಿತರ ಜೊತೆ ಸೇರಿ ಅರವಿಂದ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಪ್ರಕಾಶ್‌ ಬೆಳವಾಡಿ, ಸಂಯುಕ್ತ ಹೊರನಾಡು, ಅಂಜು, ಅವಿನಾಶ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, “ಈ ಚಿತ್ರದಲ್ಲಿ ಯಾವುದೇ ಲೀಡ್‌ ರೋಲ್‌ ಅಂತ ಇಲ್ಲ,ಕೇವಲ ಆರೇಳು ಮುಖ್ಯ ಪಾತ್ರಗಳಿವೆ ಅಷ್ಟೇ. ಆ ಎಲ್ಲ ಪಾತ್ರಗಳೂ ಕಥೆಯ ಸುತ್ತ ಸುತ್ತುತ್ತವೆ’ ಎನ್ನುತ್ತಾರೆ ನಿರ್ದೇಶಕರು.

Advertisement

Udayavani is now on Telegram. Click here to join our channel and stay updated with the latest news.

Next