Advertisement

ಧೋನಿ ಕಾಲುಮುಟ್ಟಿ ನಮಸ್ಕರಿಸಿದ ಅರಿಜಿತ್ ಸಿಂಗ್: ರಶ್ಮಿಕಾ ಮಾಡಿದ್ದೇನು?

12:29 PM Apr 01, 2023 | Team Udayavani |

ಅಹಮದಾಬಾದ್: 16ನೇ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ವರ್ಣರಂಜಿತವಾಗಿ ಶುಕ್ರವಾರ ಆರಂಭವಾಗಿದೆ. ಹಲವು ವರ್ಷಗಳ ಬಳಿಕ ಐಪಿಎಲ್ ಕೂಟದ ಉದ್ಘಾಟನಾ ಸಮಾರಂಭ ನಡೆಯಿತು. ಗಾಯಕ ಅರಿಜಿತ್ ಸಿಂಗ್ ಅವರ ಗಾಯನ, ದಕ್ಷಿಣ ಭಾರತದ ಸಿನಿ ತಾರೆಯರ ನೃತ್ಯ ಕಾರ್ಯಕ್ರಮ ಸಮಾರಂಭಕ್ಕೆ ಕಳೆತಂದು ಕೊಟ್ಟಿತು.

Advertisement

ಬಾಲಿವುಡ್ ನ ಹೆಸರಾಂತ ಗಾಯಕ ಅರಿಜಿತ್ ಸಿಂಗ್ ಅವರು ಹಲವು ಹಾಡುಗಳನ್ನು ಹಾಡಿ ಸೇರಿದ್ದ ಲಕ್ಷಕ್ಕೂ ಮಿಕ್ಕಿ ಜನರನ್ನು ರಂಜಿಸಿದರು. ಸೌತ್ ಸುಂದರಿಯರಾದ ತಮನ್ನ ಭಾಟಿಯಾ ಮತ್ತು ರಶ್ಮಿಕಾ ಮಂದಣ್ಣ ಅವರು ಸಖತ್ ಹೆಜ್ಜೆ ಹಾಕಿ ಐಪಿಎಲ್ ಆರಂಭಕ್ಕೆ ಮತ್ತಷ್ಟು ರಂಗು ತುಂಬಿದರು.

ಇವರ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಲ್ಲಿ ಮೂವರು ಒಟ್ಟಾಗಿ ಬಂದು ಬಿಸಿಸಿಐ ಅಧಿಕಾರಿಗಳೊಂದಿಗೆ ಕಾಣಿಸಿಕೊಂಡರು. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವೇದಿಕೆಯಲ್ಲಿ ಇದ್ದವರಿಗೆ ಹಸ್ತಲಾಘವ ಮಾಡಿದರು. ಧೋನಿ ಅವರು ಅರಿಜಿತ್ ಬಳಿ ಬಂದಾಗ ಗಾಯಕನು ಲೆಜೆಂಡರಿ ಕ್ರಿಕೆಟರ್ ಕಾಲಿಗೆ ನಮಸ್ಕರಿಸಿದರು. ಅರಿಜಿತ್ ಈ ನಡೆಗೆ ಪ್ರೇಕ್ಷಕರು ಕರಾಡತನದಿಂದ ಹರ್ಷ ವ್ಯಕ್ತಪಡಿಸಿದರು.

ಇದೇ ಮೊದಲ ಬಾರಿಗೆ ಐಪಿಎಲ್ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ರಶ್ಮಿಕಾ ಮಂದಣ್ಣ ಅವರು ನಾಟು ನಾಟು ಹಾಡಿಗೆ ನರ್ತಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next