Advertisement
ಶನಿಕಾಟದ ಸಂದರ್ಭದಲ್ಲಿ ಈ ರಾಶಿಯ ಜನ ಅಪಾರವಾಗಿ ಯಾತನೆಗೆ ಗುರಿಯಾಗುತ್ತಾರಾದರೂ ಗುರುಬಲ ದೊರೆತಾಗಲೆಲ್ಲ ಕಾಟವನ್ನು ಎದುರಿಸುವ ಸ್ಥೈರ್ಯ ತೋರುತ್ತಾರೆ. ಮುಖ್ಯವಾಗಿ ವೈಜಾnನಿಕ ವಿಚಾರಗಳಲ್ಲಿ ಹೆಚ್ಚಿನ ಕುತೂಹಲ ಹೊಂದಿರುತ್ತಾರೆ. ಶುಕ್ರಗ್ರಹ ಎಡವಟ್ಟಾಗಿದ್ದಾಗ ಸರ್ರನೆ ಇವರ ಜಗತ್ತಿನಲ್ಲಿ ಶುಕ್ರನ ತೊಂದರೆಗಳಿಂದ ಮಾನಸಿಕವಾದ ಅಸ್ವಸ್ಥತೆ ಪಡೆದುಬಿಡುತ್ತಾರೆ. ಲೈಂಗಿಕವಾಗಿ ವಿಪರೀತವಾಗಿ ಸ್ವೇಚ್ಛೆಯನ್ನು ಪಡೆಯುವಲ್ಲಿ ಮುಂದಿರುತ್ತಾರೆ. ಆದರೆ ತತ್ವಶಾಸ್ತ್ರಗಳಲ್ಲಿ ಹೆಚ್ಚಿನ ಆಸ್ಥೆ ತಳೆಯುತ್ತಾರೆ. ಸದಾಚಾರಗಳಿಂದ ದೂರಾಗದಿರಲು ಈ ತಾತ್ವಿಕತೆಯೇ ಇವರಿಗೆ ಉರುಗೋಲಾಗುತ್ತದೆ. ಇದರಿಂದಾಗಿ ಜೀವನದಲ್ಲಿ ಅನುಪಮವಾದ ಮಾನವೀಯ ಗುಣಧರ್ಮಗಳನ್ನು ಹೊಂದಿರಲು ಹೆಚ್ಚಿನ ತವಕ ತೋರುತ್ತಾರೆ.
ರಾಜಕಾರಣಿ ಲಾಲಕೃಷ್ಣ ಆಡ್ವಾಣಿ 2009ರ ಲೊಕಸಭಾ ಚುನಾವಣೆಯಲ್ಲಿ ಬಹುದೊಡ್ಡ ರೀತಿಯಲ್ಲಿ ವೈಫಲ್ಯವನ್ನು ಕಂಡದ್ದು, ಶನೈಶ್ಚರನ ಕ್ರೂರವಾದ ಋಣಾತ್ಮಕ ಪ್ರಭಾವ ನೇರ ಚಂದ್ರನ ಮೇಲೇ ಬಿದ್ದದ್ದು ಪಂಚಮ ಶನಿಕಾಟದಿಂದ ಬಳಲಿದ ಆಡ್ವಾಣೀ ಪ್ರಧಾನಿಯಾಗುವುದಿರಲಿ ಪಕ್ಷದ ಮೇಲಿನ ಹಿಡಿತವನ್ನೇ ಕಳೆದುಕೊಂಡರು. ಗುರುಬಲವೂ° ಕಳೆದುಕೊಂಡಿದ್ದ ಆಡ್ವಾಣಿ ನೀಚ ಗುರು ದಯನೀಯ ಸ್ಥಿತಿಯಿಂದಾಗಿ ವಾಕ್ ಪ್ರಾಭಲ್ಯ ಇದ್ದರೂ ಅದು ಕೈಕೊಡುವ ಹಂತ ತಲುಪಿತ್ತು. ಶ್ರೇಷ್ಠವಾದ ಧರ್ಮ ಸಹಿಷ್ಣುವಿರುವ ಮುತ್ಸದ್ಧಿ ಎಂದು ಕರೆದು ಆರೆಸ್ಸೆಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗ ಆಡ್ವಾಣಿಯವರ ಜಾತಕದಲ್ಲಿ ನೀಚನಾಗಿರುವ ಸೂರ್ಯನಿಗೆ ಮಾರಕ ಸ್ಥಾನ ಗೋಚಾರ ಸ್ಥಿತಿ ಬಂದಿತ್ತು. ಮೇಷರಾಶಿಯವರಾದ ಆಡ್ವಾಣಿ ಅಸಹಾಯಕರಾಗಿ ನರಳಿದ್ದರು. ಉತ್ತಮನಾದ ಗುರುದಶಾ ಮುಕ್ತಾಯವಾಗಿ ಜಾತಕದಲ್ಲಿ ದುಷ್ಟನಾದ ಶನಿದಶಾ ಕೂಡಾ ಆಗ ಪ್ರಾರಂಭವಾಗಿತ್ತು. ಹೀಗೆ ಮೇಷರಾಶಿಯವರಿಗೆ ಶನೈಶ್ಚರ ಶತಾಯ ಗತಾಯ ಕಾಡುತ್ತಾನೆೊಂದೊಮ್ಮೆ ಗುರುಗ್ರಹದ ಅಥವಾ ಶುಕ್ರಗ್ರಹದ ಉಪಶಮನಕಾರಕ ದೃಷ್ಟಿ/ಪ್ರಾಭಲ್ಯ ಹೆಚ್ಚಾ ಧನಾತ್ಮಕವಾಗಿದ್ದರೆ ಶನೈಶ್ಚರನ ಕಾಟಕ್ಕೆ ಪರಿಣಾಮಕಾರಿಯಾದ ತಡೆ ಉಂಟಾಗುವುದರಲ್ಲಿ ಸಹಾಯವಾಗುತ್ತದೆ. ನೀಚ ಹಸ್ತಂಗತ ಶತೃ ಪೀಡಿತ ರಾಹುಗ್ರಸ್ಥ ಬುಧನಿದ್ದರಂತೂ ಮೇಷರಾಶಿಯವರ ನಿರ್ಧಾರಗೆಳೆಲ್ಲಾ ವಿಫಲಗೊಂಡು ಅಪಕೀರ್ತಿ ಬರುತ್ತದೆ. ಈ ರಾಶಿಯ ಅಧಿಪತಿ ಕುಜನಾಗಿದ್ದು ಸಾಮಾನ್ಯವಾಗಿ ಈ ರಾಶಿಯವರಿಗೆ ಕುಜದೋಷ ಒದಗಿ ಬರುವುದಿಲ್ಲ. ಪರಿಣಾಮಕಾರಿಯಾದ ನಿರ್ಣಯವನ್ನು ಕ್ಷಣಾರ್ಧದಲ್ಲಿ ತಳೆಯುವ ವಿಶೇಷ ಹರಿತ ಇವರ ಬುದ್ಧಿ ಕೌಶಲ್ಯಕ್ಕೆ ಸಹಜವಾದುದಾಗಿರುತ್ತದೆ. ಹಾಗೆಯೇ ಈ ರಾಶಿಯವರಿಗೆ ಧೈರ್ಯ ಜಾಸ್ತಿ. ಆತುರರದ ಸಹನೆ ತಾಳ್ಮೆಗಳನ್ನು ಚಂದ್ರನೂ ಉತ್ತಮನಾಗಿದ್ದು ಈ ರಾಶಿಯವರಿಗೆ ಧಾರೆ ಎರೆದಲ್ಲಿ ಮೇಷರಾಶಿಯವರು ಬಹುಚತುರ ಮೇಧಾವಿಗಳಾಗಿ ಸಂಪನ್ನ ಕಾರ್ಯ ತಂತ್ರ ಸಂಯೋಜಕರಾಗಿ ಹೊರಹೊಮ್ಮುತ್ತಾರೆ.
Related Articles
ಜಯಶೀಲರಾಗುವುದು ಇವರ ಜಾಯಮಾನ. ದಣಿವು ಎಂಬುದನ್ನೇ ಹೆಚ್ಚಾಗಿ ಈ ರಾಶಿಯವರು ಅರಿಯರು. ಈ ರಾಶಿಯವರಿಗೆ ಗುರು ಮತ್ತು ಸೂರ್ಯ ಅಗಾಧವಾದ ಸಿದ್ಧಿಯನ್ನು ಒದಗಿಸಬಲ್ಲರು. ಶುಕ್ರ, ಶನಿ ಹಾಗೂ ಬುಧ, ಗ್ರಹಗಳು ಈ ರಾಶಿಯವರಿಗೆ ಸದಾ ಪೀಡಕರಾಗಿ ಸತಾಯಿಸುತ್ತ ಇರುತ್ತಾರೆ.
Advertisement
ಭಾರತದ ಪ್ರತಿಭಾಶೀಲ ಟೆನ್ನಿಸ್ ಅಗ್ರಗಣ್ಯ ಆಟಗಾರ್ತಿ ಸಾನಿಯಾ ಮಿಜಾì ಕೂಡಾ ಮೇಷರಾಶಿಯವರಾಗಿದ್ದು ಇವರ ಜಾತಕದಲ್ಲಿ ಬುಧ ಹಾಗೂ ಶುಕ್ರರು ಸೂರ್ಯ ಗ್ರಹಣದೊಂದಿಗೆ ತುಲಾದಲ್ಲಿ ಸ್ಥಿತವಾಗಿದ್ದು, ಇದು ಬಾಳ ಸಂಗಾತಿಯ ವಿಷಯದಲ್ಲಿ ತಲ್ಲಣಗಳು ಸೃಷ್ಟಿಯಾಗಲು ಕಾರಣವಾಗಿತ್ತು. ಪಂಚಮ ಶನಿಯ ಕಾಟದ ಸಂದರ್ಭದಲ್ಲಿ ನಿಶ್ಚಿತಾರ್ಥ ನೆರವೇರಿದ್ದ ವಿವರನೊಂದಿಗೆ ವಿವಾಹದ ಮಾತುಕತೆ ಮುರಿದು ಬಿತ್ತು. ಇಷ್ಟಾದರೂ ನೀಚಭಂಘರಾಜಯೋಗ ಪಡೆದ ಸೂರ್ಯನ ಕಾರಣವಾಗಿ ಶುಕ್ರಗ್ರಹದ ಸ್ವಗೃಹ ಸ್ಥಿತಿಯ ಸಹಾಯಕಾರಿ ಅಂಶಗಳು ಪಾಕಿಸ್ತಾನದ ಮಹಾನ್ ಕ್ರಿಕೆಟ್ ತಾರೆ ಶೊಯಬ್ ಮಲ್ಲಿಕ್ ಜೊತೆ ವಿವಾಹ ಸಂಬಂಧ ಕುದುರಿತ್ತು. ಮುರಿದು ಬಿದ್ದ ವಿವಾಹ ನಿಶ್ಚಿತಾರ್ಥದ ಸಲುವಾಗಿ ಸಾನಿಯಾ ಎದುರಿಸಿದ ಬದುಕಿನ ಬಿರುಗಾಳಿಯ ದಾಳಿಯಂತೂ ಅಂತಿಥದಲ್ಲ. ಒಟ್ಟಿನಲ್ಲಿ ಶುಕ್ರಬುಧರು ಆ ಸಂದರ್ಭದ ಬಿಕ್ಕಳಿಕೆಗಳಿಗೆ ಕಾರಣರಾದರು.
ಕತ್ರೀನಾ ಕೈಫ್ ಯಾರಿಗೆ ತಿಳಿದಿಲ್ಲ?
ಮನೋಹರ ರೂಪದ ಚೆಲುವೆ ಈಗ ಬಾಲಿವುಡ್ ಜಗತ್ತಿನ ಚಿನ್ನದ ವರ್ಚಸ್ಸಿನ ತಾರಾಮಣಿ. ಮೇಷ ರಾಶಿಯವಳಾದ ಈಕೆ ಪ್ರಧಾನವಾಗಿ ಚಂದ್ರನ ಮೂಲಕವಾದ ಅಗಾಧವಾದ ಆಕರ್ಷಣೆಯ ಸುಂದರಿಯಾದಳು. ಜೊತೆಗೆ ಅಂತಸ್ತು ವರ್ಚಸ್ಸನ್ನು ದಯಪಾಲಿಸಿದ ಚಂದ್ರ ನಟಿಯಾಗಿ ಈಕೆಯನ್ನು ಬೇಡಿಕೆಯ ನಟಿಯಾಗಿಸಿ ಸಿರಿವಂತಿಕೆಗೆ ಕಾರಣನಾದ. ಇದೇ ರೀತಿ ಇಂಗ್ಲೆಂಡಿನ ಯುವರಾಜ ಚಾರ್ಲ್ಸ್ ಸುಂದರ ಸುರೂಪಿಯಾಗಿ ಅನೇಕ ಮಹಿಳೆಯರ ಮನ ಗೆದ್ದವನಾದರೂ ರಾಹು ದೋಷದ ಪರಿಣಾಮವಾಗಿ ಅನೇಕ ಬಿಕ್ಕಟ್ಟುಗಳನ್ನು ವೈವಾಹಿಕ ಜೀವನದ ಸಂದರ್ಭದಲ್ಲಿ ಎದುರಿಸಬೇಕಾಗಿ ಬಂತು. ಮೇಷ ರಾಶಿಯವರಾದ ಚಾಲ್ಸ್ ì ಸಾಡೆಸಾತಿನ ಸಂದರ್ಭದಲ್ಲಿ ವಿಚ್ಛೇದಿತ ಪತ್ನಿ ಲೇಡಿ ಡಯಾನರನ್ನು ದಾರುಣ ಅಪಘಾತದಲ್ಲಿ ಕಳಕೊಳ್ಳಬೇಕಾಯಿತು.