Advertisement

17ಕ್ಕೆ ಜಿಸ್ಯಾಟ್‌ 30 ಉಡಾವಣೆ

10:01 AM Jan 15, 2020 | Hari Prasad |

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಿತ ‘ಜಿಸ್ಯಾಟ್‌-30’ ಉಪಗ್ರಹವನ್ನು ಜ. 17ರಂದು ದಕ್ಷಿಣ ಅಮೆರಿಕದ ಫ್ರೆಂಚ್‌ ಗಯಾನಾ ಉಡ್ಡಯನ ಕೇಂದ್ರದಿಂದ ನಭಕ್ಕೆ ಹಾರಿಬಿಡಲಾಗುತ್ತದೆ.

Advertisement

ಅಂದು, ಭಾರತೀಯ ಕಾಲಮಾನದ ಪ್ರಕಾರ, ಅಪರಾಹ್ನ 2.35ರ ಹೊತ್ತಿಗೆ ಎರೇನ್‌ ಲಾಂಚ್‌ ಕಾಂಪ್ಲೆಕ್ಸ್‌ ಉಡ್ಡಯನ ಕೇಂದ್ರದಿಂದ ‘ಎರೇನ್‌ 5’ ಎಂಬ ರಾಕೆಟ್‌ ಮೂಲಕ ಈ ಉಪಗ್ರಹ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಹೇಳಿದೆ.

3,357 ಕೆಜಿ ತೂಕವಿರುವ ಈ ಉಪಗ್ರಹ ಟೆಲಿವಿಷನ್‌ ಅಪ್‌ ಲಿಂಕಿಂಗ್‌ ಹಾಗೂ ಡೌನ್‌ಲಿಂಕಿಂಗ್‌, ಡಿಟಿಎಚ್‌, ಟೆಲಿಪೋರ್ಟ್‌ ಸೇವೆಗಳು, ಡಿಜಿಟಲ್‌ ಸ್ಯಾಟಲೈಟ್‌ ನ್ಯೂಸ್‌ ಗ್ಯಾದರಿಂಗ್‌ (ಡಿಎಸ್‌ಎನ್‌ಜಿ), ಸೆಲ್ಯೂರಲ್‌ ಬ್ಯಾಕ್‌ಹೌಲ್‌ ಕನೆಕ್ಟಿವಿಟಿ ಸೇರಿದಂತೆ ಇನ್ನೂ ಅನೇಕ ಸೇವೆಗಳನ್ನು ಭಾರತೀಯ ಭೂಭಾಗ, ಕೊಲ್ಲಿ, ಏಷ್ಯಾದ ಇತರ ರಾಷ್ಟ್ರಗಳು, ಆಸ್ಟ್ರೇಲಿಯಾದಲ್ಲಿ ಸಿ-ಬ್ಯಾಂಡ್‌ ಮೂಲಕ ಮುಂದಿನ 15 ವರ್ಷಗಳವರೆಗೆ ನೀಡಲಿದೆ. ಇದೇ ಸೇವೆಗಳ ನಿರ್ವಹಣೆಗಾಗಿ ಈ ಹಿಂದೆ ಹಾರಿಬಿಡಲಾಗಿದ್ದ ‘ಇನ್‌ಸ್ಯಾಟ್‌-4ಎ’ ಉಪಗ್ರಹದ ಬದಲಿಗೆ ‘ಜಿಸ್ಯಾಟ್‌-30’ ಸೇವೆ ಸಲ್ಲಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next