Advertisement
ಕಳೆದ ರಾತ್ರಿ “ಅಹ್ಮದ್ ಬಿನ್ ಅಲ್ ಸ್ಟೇಡಿಯಂ’ನಲ್ಲಿ ನಡೆದ ಆಸ್ಟ್ರೇಲಿಯ ಎದುರಿನ ಪಂದ್ಯವನ್ನು ಆರ್ಜೆಂಟೀನಾ 2-1 ಅಂತರದಿಂದ ಗೆದ್ದಿತು. ಮೊದಲ ಗೋಲು ಮೆಸ್ಸಿ ಕಾಲ್ಚಳಕದಲ್ಲಿ ದಾಖಲಾಯಿತು.
Related Articles
Advertisement
ವಿರಾಮದ ತನಕ ಆರ್ಜೆಂಟೀನಾ ಈ ಮುನ್ನಡೆಯನ್ನು ಕಾಯ್ದುಕೊಂಡಿತು. 57ನೇ ನಿಮಿಷದಲ್ಲಿ ಜೂಲಿಯನ್ ಅಲ್ವರೇಜ್ ದ್ವಿತೀಯ ಗೋಲು ಬಾರಿಸಿದರು. ಆರ್ಜೆಂಟೀನಾದ ಗೆಲುವು ಖಾತ್ರಿಯಾಯಿತು. 77ನೇ ನಿಮಿಷದಲ್ಲಿ ಆಸ್ಟ್ರೇಲಿಯದ ಎಂಝೊ ಫೆರ್ನಾಂಡಿಸ್ ಸಮಾಧಾನಕರ ಗೋಲೊಂದನ್ನು ಹೊಡೆದು ಸೋಲಿನ ಅಂತರವನ್ನು ತಗ್ಗಿಸುವಲ್ಲಿ ಯಶಸ್ವಿಯಾದರು. ಆಸೀಸ್ ಪಾಲಿಗೆ ಇದೊಂದು ಅನಿರೀಕ್ಷಿತ ಗೋಲ್ ಆಗಿತ್ತು.
“ಇವೆಲ್ಲ ಸ್ಮರಣೀಯ, ಅದ್ಭುತ ಅನುಭವಗಳು. ಇಂದು ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ನಾನು ನಿಜಕ್ಕೂ ಖುಷಿಪಡುತ್ತೇನೆ’ ಎಂದು ಮೆಸ್ಸಿ ಹೇಳಿದರು.
ಆರ್ಜೆಂಟೀನಾ 1986ರ ಬಳಿಕ ವಿಶ್ವಕಪ್ ಗೆದ್ದಿಲ್ಲ. ಅಂದಿನ ಕಪ್ ಮರಡೋನಾ ಕಾಲಾವಧಿಯಲ್ಲಿ ಬಂದಿತ್ತು.
ಆರ್ಜೆಂಟೀನಾ ಗ್ರೇಟ್ ಕಮ್‌ಬ್ಯಾಕ್:
45 ಸಾವಿರ ವೀಕ್ಷಕರ ಸಾಮರ್ಥ್ಯವುಳ್ಳ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯದ ಹಳದಿ ಜೆರ್ಸಿ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ ಆರ್ಜೆಂಟೀನಾದ ಅಬ್ಬರದ ಆಟದ ಮುಂದೆ ಕಾಂಗರೂ ಫ್ಯಾನ್ಸ್ ಥಂಡಾ ಹೊಡೆದರು. ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತು ಆಘಾತಕ್ಕೊಳಗಾಗಿದ್ದ ಆರ್ಜೆಂಟೀನಾ ಪಾಲಿಗೆ ಇದು ಗ್ರೇಟ್ ಕಮ್‌ಬ್ಯಾಕ್.