Advertisement

ಅರ್ಜೆಂಟೀನಾ ಓಪನ್‌ ಶಾರ್ಟ್ಸ್ ಮನ್‌-ಸೆಶಿನಾಟೊ ಪ್ರಶಸ್ತಿ ಕಾದಾಟ

12:45 AM Feb 18, 2019 | Team Udayavani |

ಬ್ಯೂನಸ್‌ ಐರಸ್‌: ಸ್ಥಳೀಯ ಆಟಗಾರ ಡೀಗೊ ಶಾರ್ಟ್ಸ್ ಮನ್‌ ಹಾಲಿ ಚಾಂಪಿಯನ್‌ ಡೊಮಿನಿಕ್‌ ಥೀಮ್‌ ಅವರಿಗೆ ಆಘಾತ ನೀಡಿ “ಅರ್ಜೆಂಟೀನಾ ಓಪನ್‌’ ಕೂಟದ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಶಾರ್ಟ್ಸ್ಮನ್‌  2 ಗಂಟೆಗಳ ಹೋರಾಟದ ಬಳಿಕ ಥೀಮ್‌ ಅವರನ್ನು 2-6, 6-4, 7-6 (7-5) ಸೆಟ್‌ಗಳಿಂದ ಪರಾಭವಗೊಳಿಸಿದರು. ಮೊದಲ ಸೆಟ್‌ ಕಳೆದುಕೊಂಡ ಶಾಟ್‌ರ್ಸ¾ನ್‌ ದ್ವಿತೀಯ ಹಾಗೂ ತೃತೀಯ ಸೆಟ್‌ನಲ್ಲೂ 2-4 ಅಂಕಗಳಿಂದ ಹಿಂದಿದ್ದರು.

ಫೈನಲ್‌ನಲ್ಲಿ ಶಾರ್ಟ್ಸ್ಮನ್‌ ಇಟಲಿಯ ಮಾರ್ಕೋ ಸೆಶಿನಾಟೊ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಸೆಶಿನಾಟೊ ಸ್ಥಳೀಯ ಆಟಗಾರ ಗೈಡೊ ಪೆಲ್ಲ ಅವರನ್ನು 6-4, 6-2 ನೇರ ಸೆಟ್‌ಗಳಿಂದ ಸೋಲಿಸಿದ್ದರು. ಇಬ್ಬರೂ ವೃತ್ತಿಜೀವನದ 3ನೇ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next