Advertisement

“ಆರ್ಜೆಂಟೀನಾ ಹಾಕಿ ಸರಣಿ ನಿರ್ಣಾಯಕ’

11:19 PM Jan 01, 2021 | Team Udayavani |

ಹೊಸದಿಲ್ಲಿ: ಆರ್ಜೆಂಟೀನಾ ವಿರುದ್ಧದ ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರಿದರೆ ಟೋಕಿಯೊ ಒಲಿಂಪಿಕ್ಸ್‌ಗೆ ಅದೊಂದು ಉತ್ತಮ ಸಿದ್ಧತೆಯಾಗಲಿದೆ, ತಮ್ಮ ಆತ್ಮವಿಶ್ವಾಸ ವೃದ್ಧಿಸಲಿದೆ ಎಂದು ಭಾರತೀಯ ವನಿತಾ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕೊರೊನಾ ಪಿಡುಗಿನಿಂದ ಬಹುತೇಕ ಒಂದು ವರ್ಷ ಸ್ಥಗಿತ ಗೊಂಡಿದ್ದ ಭಾರತದ ಮಹಿಳಾ ಹಾಕಿ ತಂಡದ ಚಟುವಟಿಕೆ ಮುಂಬರುವ ಅರ್ಜೆಂಟೀನಾ ಪ್ರವಾಸದ ಮೂಲಕ ಪುನರಾರಂಭಗೊಳ್ಳಲಿದೆ. ಈ ಮೂಲಕ ಒಲಿಂಪಿಕ್ಸ್‌ಗೆ ರಾಣಿ ಬಳಗ ಸಜ್ಜುಗೊಳ್ಳಲಿದೆ.

ನಿರ್ಣಾಯಕ ಪ್ರದರ್ಶನ
“ಆರ್ಜೆಂಟೀನಾ ಎದುರು ನಾವು ತೋರುವ ಪ್ರದರ್ಶನ ನಿರ್ಣಾಯಕ ವಾಗಲಿದೆ. ದೀರ್ಘ‌ ಸಮಯದ ಬಳಿಕ ನಾವು ಮೈದಾನಕ್ಕೆ ಇಳಿಯುತ್ತಿದ್ದೇವೆ. ನಮ್ಮ ದೈಹಿಕ ಸಾಮರ್ಥ್ಯ ಯಾವ ಮಟ್ಟದಲ್ಲಿದೆ ಎನ್ನುವುದು ಇಲ್ಲಿ ಸಾಬೀತಾಗುತ್ತದೆ. ಆದ್ದರಿಂದ ಈ ಸರಣಿಯಲ್ಲಿ ಭಾರತ ಮೇಲುಗೈ ಸಾಧಿಸಿದ್ದೇ ಆದರೆ ಒಲಿಂಪಿಕ್ಸ್‌ ಪದಕದ ಕನಸೊಂದನ್ನು ಕಾಣಬಹುದು’ ಎಂದು ರಾಣಿ ರಾಮ್‌ಪಾಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಅಂತಾರಾಷ್ಟ್ರೀಯ ಟೂರ್ನಿಗೆ ಮರಳಲು ನಾವು ಉತ್ಸುಕರಾಗಿದ್ದೇವೆ. 2020 ನಿಜಕ್ಕೂ ಸವಾಲಿನ ವರ್ಷವಾಗಿತ್ತು. ಆದರೂ ರಾಷ್ಟ್ರೀಯ ಶಿಬಿರದಲ್ಲಿ ಅಭ್ಯಾಸ ಮುಂದು ವರಿಸಿದೆವು. ತಂಡದಲ್ಲಿ ಹಲವಾರು ಯುವ ಆಟಗಾರ್ತಿಯರಿದ್ದು, ಶ್ರೇಷ್ಠ ಪ್ರದರ್ಶನ ತೋರುವ ನಿರೀಕ್ಷೆಯಿದೆ’ ಎಂದರು.

ಆರ್ಜೆಂಟೀನಾ ವಿರುದ್ಧದ ಸರಣಿ ಜ. 17ರಿಂದ 31ರ ವರೆಗೆ ನಡೆಯಲಿದ್ದು, ಭಾರತ 8 ಪಂದ್ಯಗಳನ್ನಾಡಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next