Advertisement
ಆರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್‌ನಿಂದಲೇ ಆರಂಭಿಸುವುದಾದರೆ, ಮೆಸ್ಸಿ ಕಪ್ ಚುಂಬಿಸುವ ವೇಳೆ ಆಗಷ್ಟೇ ಸಂಜೆ ಆವರಿಸುತ್ತಿತ್ತು. ರಾತ್ರಿಯಿಡೀ ಜಾಗರಣೆ. ರಾಷ್ಟ್ರೀಯ ಸ್ಮಾರಕವಾದ “ಒಬೆಲಿಸ್ಕೊ’ದಲ್ಲಿ ಒಂದೆರಡಲ್ಲ, ಬರೋಬ್ಬರಿ 20 ಲಕ್ಷದಷ್ಟು ಮಂದಿ ಬೀದಿಯಲ್ಲಿ ಕುಣಿದು ಕುಪ್ಪಳಿಸು ತ್ತಿದ್ದರು. ಪುಟ್ಟ ಮಕ್ಕಳಿಂದ ಹಿಡಿದು, ಹಿರಿಯ ನಾಗರಿಕರೂ ಈ ಫುಟ್‌ಬಾಲ್ ಖುಷಿಯಲ್ಲಿ ತೇಲಾಡಿದರು. ಎಲ್ಲ ಕಟ್ಟಡಗಳ ಮೇಲೂ ಆರ್ಜೆಂಟೀನಾದ ಬೃಹತ್ ಜೆರ್ಸಿ, ಎಲ್ಲರ ಮೈಮೇಲೂ ಆರ್ಜೆಂಟೀನಾದ ಫುಟ್‌ಬಾಲ್ ದಿರಿಸು, ಕೈಯಲ್ಲಿ ರಾಷ್ಟ್ರಧ್ವಜ… ಕ್ರಿಸ್‌ಮಸ್‌ಗೂ ಮೊದಲೇ ಕಂಡುಬಂದ ಈ ಸಂಭ್ರಮದ ವಾತಾವರಣ ಆರ್ಜೆಂಟೀನಾದಲ್ಲಿ ಮಹಾಅಲೆಯನ್ನೇ ಎಬ್ಬಿಸಿದೆ. ಮೆಸ್ಸಿ ಬಳಗದ ಗೆಲುವಿನ ನಾದಕ್ಕೆ ಎಲ್ಲರೂ ದನಿಗೂಡಿಸಿದರು. ಸುದೀರ್ಘ 36 ವರ್ಷಗಳ ಕಾಯುವಿಕೆಯ ಫಲ ಇದಾಗಿತ್ತು.
– ಆರ್ಜೆಂಟೀನಾ ಕೂಟದ ಮೊದಲ ಪಂದ್ಯವನ್ನು ಸೋತೂ ವಿಶ್ವ ಚಾಂಪಿ ಯನ್ ಆಗಿ ಮೂಡಿಬಂದ ಕೇವಲ 2ನೇ ತಂಡವೆನಿಸಿತು. ಮೊದಲ ತಂಡ ಸ್ಪೇನ್. ಅದು 2010ರ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಸ್ವಿಜರ್ಲೆಂಡ್‌ಗೆ ಸೋತು, ಕೊನೆಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
– ವಿಶ್ವಕಪ್‌ಗೆ ಅಡಿಯಿರಿಸಿ 6,029 ದಿನಗಳ ಬಳಿಕ ಮೆಸ್ಸಿ ಅವರಿಗೆ ಕಪ್ ಎತ್ತುವ ಅದೃಷ್ಟ ಒಲಿಯಿತು.
– ಮೆಸ್ಸಿ ವಿಶ್ವಕಪ್ ಕೂಟವೊಂದರ ಎಲ್ಲ ಹಂತಗಳಲ್ಲೂ ಗೋಲು ಬಾರಿಸಿದ ವಿಶ್ವದ ಏಕೈಕ ಆಟಗಾರ. ಲೀಗ್, ರೌಂಡ್ ಆಫ್ 16, ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಗೋಲು ಬಾರಿಸಿದ ಸಾಹಸ.
– ಮೆಸ್ಸಿ ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ ಅತ್ಯಧಿಕ 5 ಸಲ “ಪ್ಲೇಯರ್
ಆಫ್ ದ ಮ್ಯಾಚ್’ ಪ್ರಶಸ್ತಿಯಿಂದ ಪುರಸ್ಕೃತರಾದ ಏಕೈಕ ಆಟಗಾರ.
– ಮೆಸ್ಸಿ 2 ಪ್ರತಿಷ್ಠಿತ ಅಂತಾರಾಷ್ಟ್ರೀಯ ಕೂಟಗಳಲ್ಲಿ ಅತ್ಯಧಿಕ 26 ಗೋಲು ಬಾರಿಸಿದ ದಕ್ಷಿಣ ಅಮೆರಿಕದ ಆಟಗಾರನೆನಿಸಿದರು (ವಿಶ್ವಕಪ್‌ನಲ್ಲಿ 13, ಕೊಪಾ ಅಮೆರಿಕ ಕೂಟದಲ್ಲಿ 13). ರೊನಾಲ್ಡೊ ನಝಾರಿಯೊ ದ್ವಿತೀಯ ಸ್ಥಾನಕ್ಕೆ ಇಳಿದರು (25 ಗೋಲ್).
– ಮೆಸ್ಸಿ ಅತ್ಯಧಿಕ 26 ವಿಶ್ವಕಪ್ ಪಂದ್ಯಗಳಲ್ಲಿ ಆಡಿದ ದಾಖಲೆ ಸ್ಥಾಪಿಸಿದರು.
– ವಿಶ್ವಕಪ್ ಫೈನಲ್‌ನಲ್ಲಿ 2 ಗೋಲು ಹೊಡೆದ ಅತೀ ಹಿರಿಯ ಆಟಗಾರನೆಂಬ ದಾಖಲೆಯೂ ಮೆಸ್ಸಿ ಅವರದಾಯಿತು (35 ವರ್ಷ).
– ಮೆಸ್ಸಿ ಬಲಗಾಲಿನಿಂದ 100 ಗೋಲು ಹೊಡೆದರು.
– ಆರ್ಜೆಂಟೀನಾದ ಲಿಯೋನೆಲ್ ಸ್ಕಾಲೊನಿ ವಿಶ್ವಕಪ್ ಹಾಗೂ ಕೊಪಾ ಅಮೆರಿಕ (2021) ಪ್ರಶಸ್ತಿಗಳೆರಡನ್ನೂ ಗೆದ್ದ ಕೇವಲ 3ನೇ ಮ್ಯಾನೇಜರ್ ಎನಿಸಿದರು. ಬ್ರಝಿಲ್‌ನ ಮಾರಿಯೊ ಝಗಾಲೊ, ಕಾರ್ಲೋಸ್ ಆಲ್ಬರ್ಟ್ ಪೆರೇರ ಉಳಿದಿಬ್ಬರು.
– ಕೈಲಿಯನ್ ಎಂಬಪೆ ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ ಅತ್ಯಧಿಕ 8 ಗೋಲು ಬಾರಿಸಿದ 23 ಹಾಗೂ ಇದಕ್ಕೂ ಕೆಳ ವಯಸ್ಸಿನ ಆಟಗಾರನೆನಿಸಿದರು. 1958ರಲ್ಲಿ ಪೀಲೆ, 1978ರಲ್ಲಿ ಮಾರಿಯೊ ಕೆಂಪೆಸ್ ಮತ್ತು 2014ರಲ್ಲಿ ಜೇಮ್ಸ್ ರೋಡ್ರಿಗೆಝ್ ತಲಾ 6 ಗೋಲು ಹೊಡೆದಿದ್ದರು.
– ಎಂಬಪೆ 24 ವರ್ಷ ತುಂಬುವುದರೊಳಗೆ ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಸರ್ವಾಧಿಕ 7 ಗೋಲು ಹೊಡೆದರು. ಪೀಲೆ ಅವರ 6 ಗೋಲುಗಳ ದಾಖಲೆ ಪತನಗೊಂಡಿತು.
– ಎಂಬಪೆ ವಿಶ್ವಕಪ್ ಫೈನಲ್‌ಗಳಲ್ಲಿ ಅತ್ಯಧಿಕ 4 ಗೋಲು ಹೊಡೆದ ದಾಖಲೆ ಸ್ಥಾಪಿಸಿದರು (2018ರಲ್ಲಿ ಒಂದು, ಈ ಬಾರಿ 3).
Related Articles
ಭಾರತದಲ್ಲಿ ಮೆಸ್ಸಿಮೇನಿಯಾ ಆರಂಭದಿಂದಲೇ ಕಂಡುಬಂದಿತ್ತು. ಆರ್ಜೆಂಟೀನಾ ಚಾಂಪಿಯನ್ ಆದಮೇಲಂತೂ ಈ ಖುಷಿ ಮುಗಿಲು ಮುಟ್ಟಿತು. ಕೊಚ್ಚಿ, ತಿರುವನಂತಪುರ, ಪಣಜಿ, ಕೋಲ್ಕತಾ, ಇಂಫಾಲ ಮೊದಲಾದ ಕಡೆ ಫುಟ್‌ಬಾಲ್ ಅಭಿಮಾನಿಗಳು ಬೀದಿಗೆ ಇಳಿದು ವಿಜಯೋತ್ಸವ ಆಚರಿಸಿದರು. ಮೆಸ್ಸಿಗೆ ಜೈಕಾರ ಕೂಗಿದರು.
ನೀಲಿ-ಬಿಳಿ ಬಣ್ಣದ ಜೆರ್ಸಿ, ಆರ್ಜೆಂಟೀನಾದ ರಾಷ್ಟ್ರಧ್ವಜ ಎಲ್ಲೆಡೆ ಕಂಡುಬಂತು.
Advertisement
ಸುಡುಮದ್ದಿನ ಸದ್ದು ಕಿವಿಗೆ ಅಪ್ಪಳಿಸುತ್ತಿತ್ತು. “ಈ ಸಂಭ್ರಮವನ್ನು ಕಾಣಲು ಡೀಗೊ ಮರಡೋನಾ ಇರಬೇಕಿತ್ತು’ ಎಂಬುದಾಗಿ ಆರ್ಜೆಂಟೀನಾದ ಕಟ್ಟಾ ಅಭಿಮಾನಿ ಸುಜನ್ ದತ್ತ ನೀಡಿದ ಹೇಳಿಕೆ ಅರ್ಥಪೂರ್ಣವಾಗಿತ್ತು. ಕೋಲ್ಕತಾದ ಕೆಲವೆಡೆ ಮೆಸ್ಸಿ ಜತೆಗೆ ಮರಡೋನಾ ಅವರ ಪ್ರತಿಕೃತಿಯೂ ರಾರಾಜಿಸುತ್ತಿದ್ದುನ್ನು ನೋಡಬಹುದಿತ್ತು.
ಗೋವಾದ ಬಹುತೇಕ ಕಡೆಗಳಲಲ್ಲಿ ಮಿನಿ ಪ್ರೊಜೆಕ್ಟರ್ ಮೂಲಕ ಎಲ್‌ಇಡಿ ಸ್ಕ್ರೀನ್‌ನಲ್ಲಿ ಫೈನಲ್ ಪಂದ್ಯದ ನೇರ ಪ್ರಸಾರಕ್ಕೆ ಏರ್ಪಾಡು ಮಾಡಲಾಗಿತ್ತು. ಬಳಿಕ ಇದರ ಮರುಪ್ರಸಾರವನ್ನೂ ಮಾಡಲಾಯಿತು.ಕೇಳರದ ಕೆಲವೆಡೆ ಇದು ಅತಿರೇಕಕ್ಕೆ ಹೋಯಿತು. ಕಣ್ಣೂರಿನಲ್ಲಿ ಫುಟ್‌ಬಾಲ್ ಅಭಿಮಾನಿಗಳು ಮತ್ತು ಪೊಲೀಸರ ನಡುವೆ ಗಲಾಟೆ ನಡೆಯಿತು. ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದ್ದು, ಓರ್ವನಿಗೆ ಚೂರಿಯಿಂದ ಇರಿಯಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ 5 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇಂಫಾಲದಲ್ಲಿ ನಡೆದ ದುರಂತವೊಂದರಲ್ಲಿ 50 ವರ್ಷದ ಮಹಿಳೆಯೊಬ್ಬರು ಗುಂಡಿನ ದಾಳಿಯಲ್ಲಿ ಮೃತಪಟ್ಟರು. ಈ ರಾಜ್ಯಗಳ ಮುಖ್ಯಮಂತ್ರಿಗಳು ವಿಶ್ವ ಚಾಂಪಿಯನ್ ಆರ್ಜೆಂಟೀನಾಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.