Advertisement
ಈಗಾಗಲೇ “ವಿರಾಟ’ ಮತ್ತು ನೂತನವಾಗಿ ನಿರ್ಮಿಸಲಾದ “ಐಎನ್‌ಎಸ್ ವಿಕ್ರಾಂತ್’ ವಿಮಾನ ವಾಹಕ ನೌಕೆಗಳು ಇವೆ. ಇದಲ್ಲದೆ, ಸಮುದ್ರದ ಮೇಲೆ ಹೆಚ್ಚುತ್ತಿರುವ ವಿವಿಧ ದೇಶಗಳ ಪ್ರಾಬಲ್ಯ, ಹಿಂದೂಮಹಾಸಾಗರ ಪ್ರದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು, ಆರ್ಥಿಕ ವೃದ್ಧಿ, ಹೆಚ್ಚುತ್ತಿರುವ ನಿರೀಕ್ಷೆಗಳಿಗೆ ತಕ್ಕಂತೆ ಮತ್ತೂಂದು ಅತಿದೊಡ್ಡ ನೌಕೆಯ ಆವಶ್ಯಕತೆ ಇದೆ ಎಂಬುದನ್ನು ಮನಗಂಡು ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ.
Related Articles
Advertisement
ವಿಕ್ರಾಂತ್‌ಗೆ “ವಿಶಾಲ್’ ಹೆಸರಿತ್ತು!ಸಿಎಸ್‌ಎಲ್ ಒಂದು ಸಾರ್ವಜನಿಕ ಉದ್ದಿಮೆಯಾಗಿದ್ದು, ಈಗಾಗಲೇ ವಿಕ್ರಾಂತ್ ನಿರ್ಮಿಸಿದ ಅನುಭವ ಅದಕ್ಕಿದೆ. ಹೀಗಾಗಿ, ಎರಡನೇ ನೌಕೆಯನ್ನೂ ಅದೇ ಸಂಸ್ಥೆ ನಿರ್ಮಿಸಲೂಬಹುದು. ಆದರೆ, ಇದು ಸರಕಾರದ ಹಂತದಲ್ಲಿ ತೀರ್ಮಾನ ಆಗಬೇಕಿದೆ. ಸದ್ಯಕ್ಕೆ ಈ ಭವಿಷ್ಯದ ನೌಕೆಗೆ “ವಿಶಾಲ್’ ಎಂದು ನಾಮಕರಣ ಮಾಡುವ ಚಿಂತನೆ ನಡೆದಿದೆ. ಆದರೆ, ಮುಂಬರುವ ದಿನಗಳಲ್ಲಿ ಅದು ಬದಲಾಗಲೂಬಹುದು. ಯಾಕೆಂದರೆ, ಈಗ ನೌಕಾಪಡೆಗೆ ಹಸ್ತಾಂತರಗೊಳ್ಳುತ್ತಿರುವ “ಐಎನ್‌ಎಸ್ ವಿಕ್ರಾಂತ್’ ನೌಕೆಗೆ ಆರಂಭದಲ್ಲಿ “ವಿಶಾಲ್’ ಎಂಬ ಹೆಸರಿಡಲಾಗಿತ್ತು. ಅನಂತರದಲ್ಲಿ ಅದನ್ನು 1971ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕ್ರಾಂತ್ ಎಂದು ಹೆಸರಿಡಲಾಯಿತು. ಗಾಳಿಪಟದಿಂದ ವಿಮಾನದವರೆಗೆ…!
ನೌಕೆಯ ಮೂಲಕ ವಾಯುಗಾಮಿ ಕಾರ್ಯಾಚರಣೆಗೆ ದೊಡ್ಡ ಇತಿಹಾಸ ಇದ್ದು, ಸ್ವಾರಸ್ಯಕರ ಸಂಗತಿಗಳಿಂದ ಕೂಡಿದೆ. ನೌಕೆಯ ಮೂಲಕ ವಾಯುಗಾಮಿ ಮೊದಲ ಬಾರಿ ಶುರುವಾಗಿದ್ದು 1806ರಲ್ಲಿ ಅದೂ ಗಾಳಿಪಟವನ್ನು ಹಾರಿಬಿಡುವ ಮೂಲಕ ಎನ್ನುವುದು ವಿಶೇಷ. ದಾಖಲೆಗಳ ಪ್ರಕಾರ ಬ್ರಿಟಿಷ್ ರಾಯಲ್ ನೌಕಾಪಡೆ ತನ್ನ ಎಚ್‌ಎಂಎಸ್ ಪಲ್ಲಾಸ್ (32) ಯುದ್ಧನೌಕೆ ಮೂಲಕ ನೆಪೋಲಿಯನ್ ಮಿಲಿಟರಿ ನಾಯಕನ ವಿರುದ್ಧ ಕರಪತ್ರವನ್ನು ಗಾಳಿಪಟದ ಮೂಲಕ ಫ್ರೆಂಚ್ ನೆಲಕ್ಕೆ ಕಳುಹಿಸಿಕೊಡಲಾಯಿತು. ಇದಾಗಿ ಹಲವು ದಶಕಗಳ ಅನಂತರ ಅಂದರೆ 1849ರಲ್ಲಿ ಸುಲಭವಾಗಿ ದಹಿಸುವ ಬಲೂನುಗಳನ್ನು ಆಸ್ಟ್ರಿಯನ್ ನೌಕೆ ಎಸ್‌ಎಂಎಸ್ ವಲ್ಕಾನೊ ಮೂಲಕ ಹಾರಿಸಲಾಯಿತು. ಆದರೆ, ವಿರುದ್ಧವಾಗಿ ಬೀಸಿದ ಗಾಳಿಯಿಂದ ವಿಫಲಗೊಂಡು ಬಲೂನುಗಳು ನೌಕೆಯ ಮೇಲೆಯೇ ಬಂದು ಬಿದ್ದವು! ಇದಾದ ಅನಂತರ 1905ರಲ್ಲಿ ರಷ್ಯಾ- ಜಪಾನ್ ಯುದ್ಧದಲ್ಲಿ ಗೆದ್ದ ಜಪಾನ್, ರಷ್ಯಾ ನೌಕಾಪಡೆಯಿಂದ ನೌಕೆಯೊಂದನ್ನು ವಶಪಡಿಸಿಕೊಂಡಿತು. ಇದನ್ನು “ಸೀಪ್ಲೇನ್’ ಆಗಿ ಪರಿವರ್ತಿಸಲಾಯಿತು. ಇದರ ಮೂಲಕ ಮೊದಲ ವಿಶ್ವ ಮಹಾಯುದ್ಧದಲ್ಲಿ ಮೊದಲ ವಾಯುದಾಳಿ ಮಾಡಲಾಯಿತು. ತದನಂತರದಲ್ಲಿ ಇದನ್ನು 1920ರಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ವಿಮಾನವಾಹಕ ನೌಕೆಯನ್ನಾಗಿ ರೂಪಿಸಲಾಯಿತು. ಆ ನೌಕೆಯ ಹೆಸರು ವಾಕಾಮಿಯಾ. 1932ರಲ್ಲಿ ಇದು ಗುಜರಿಗೆ ಹೋಯಿತು. ಸ್ಟೀಲ್ ಸ್ಟೋರಿ!
ವಿಕ್ರಾಂತ್‌ಗೆ ಸುಮಾರು 28 ಸಾವಿರ ಟನ್ ಸ್ಟೀಲ್ ಬಳಸಲಾಗಿದೆ. ಇದು ರಷ್ಯಾದಿಂದ ಪೂರೈಕೆ ಆಗಬೇಕಿತ್ತು. ಆದರೆ, ಸಕಾಲದಲ್ಲಿ ಪೂರೈಕೆ ಆಗದಿರುವುದರಿಂದ ದೇಶೀಯವಾಗಿಯೇ ಅದನ್ನು ಅಭಿವೃದ್ಧಿಪಡಿಸಿ, ಸರಬರಾಜು ಮಾಡಲಾಯಿತು. ಈಗ ಅದೇ ಗುಣಮಟ್ಟದ ಉಕ್ಕು ಭಾರತೀಯ ನೌಕಾಪಡೆಯ ವಿವಿಧ ನಿರ್ಮಾಣ ಕಾರ್ಯಗಳಿಗೆ ಬಳಸಲಾಗುತ್ತಿದೆ. ಕೋವಿಡ್ ಹಾವಳಿಯಲ್ಲಿ ಕ್ಲಿಷ್ಟಕರ ಹಂತ
ಶೇ. 76ರಷ್ಟು ದೇಶೀಯವಾಗಿದ್ದು, ಶೇ. 24ರಷ್ಟು ಕಾರ್ಯಗಳಿಗೆ ಇಟಲಿ, ಜರ್ಮನಿ, ರಷ್ಯಾ ಸೇರಿದಂತೆ ವಿವಿಧ ದೇಶಗಳನ್ನು ಅವಲಂಬಿಸಲಾಗಿತ್ತು. ಕೋವಿಡ್ ಹಾವಳಿಯಲ್ಲಿ ಅವರೆಲ್ಲ ತಮ್ಮ ದೇಶಗಳಿಗೆ ಹಿಂದಿರುಗಿದರು. ಇದೇ ಸಂದರ್ಭದಲ್ಲಿ ನೌಕೆಯ ವಿವಿಧ ಹಂತಗಳ ಸಮುದ್ರ ಪರೀಕ್ಷೆ ಕೂಡ ನಡೆಸಬೇಕಿತ್ತು. ಅದರಲ್ಲೂ ಸೀ ಟ್ರಯಲ್ ಅತ್ಯಂತ ಕ್ಲಿಷ್ಟಕರ ಹಂತವಾಗಿತ್ತು. ಅದನ್ನು ಭಾರತೀಯ ನೌಕಾಪಡೆ ಮತ್ತು ಸಿಎಸ್‌ಎಲ್ ಸಂಯುಕ್ತವಾಗಿ ಯಶಸ್ವಿಗೊಳಿಸಿದೆ. ಕೇಬಲ್ ಉದ್ದ ಕೊಚ್ಚಿಯಿಂದ ದಿಲ್ಲಿ!
ಐಎನ್‌ಎಸ್ ವಿಕ್ರಾಂತ್ ಅಕ್ಷರಶಃ ಒಂದು ನರಮಂಡಲ. ಅದರಲ್ಲಿ ನಾನಾ ಪ್ರಕಾರದ ಕೇಬಲ್‌ಗಳು ಹಾದು
ಹೋಗಿದ್ದು, ಅದರ ತುದಿಯನ್ನು ಹಿಡಿದುಕೊಂಡು ಹೊರಟರೆ, ಕೊಚ್ಚಿ ಬಂದರಿನಿಂದ ರಾಜಧಾನಿ ದಿಲ್ಲಿವರೆಗೆ ಆಗು
ತ್ತದೆ! ಹೌದು, ನೌಕೆಯಲ್ಲಿ ಸುಮಾರು 2,300 ಕಿ.ಮೀ. ಉದ್ದದ ಕೇಬಲ್ ವೈರ್‌ಗಳಿವೆ. ಕಮಾಂಡಿಂಗ್, ಕಂಟ್ರೋ ಲಿಂಗ್, ವಿದ್ಯುತ್, ನೀರು, ನೆಟ್‌ವರ್ಕ್, ಮೆಡಿಕಲ್ ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಅಧಿಕ ವಿಭಾಗಗಳಿಗೆ ಸಂಬಂಧಿಸಿದ ಕೇಬಲ್‌ಗಳು ಇವಾಗಿವೆ. -ವಿಜಯಕುಮಾರ ಚಂದರಗಿ