Advertisement
ಸಹಕಾರಿ ಸಂಸ್ಥೆ ಕ್ಯಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಕೆ.ಜಿ.ಗೆ 7 ರೂ., ಹಳೆ ಅಡಿಕೆಗೆ 10 ರೂ.ಗಳಷ್ಟು ಅಧಿಕ ಇದ್ದು ಬೆಳೆಗಾರರು ಹೊರ ಮಾರುಕಟ್ಟೆಯತ್ತ ದೃಷ್ಟಿ ನೆಟ್ಟಿದ್ದಾರೆ. ಕಳೆದ ಬಾರಿ ಹೊರ ಮಾರುಕಟ್ಟೆ ಧಾರಣೆಗೆ ಸರಿಸಾಟಿಯಾಗಿ ಅಡಿಕೆ ಖರೀದಿ ಸಹಕಾರಿ ಸಂಸ್ಥೆಗಳು ಕೂಡ ಧಾರಣೆ ನೀಡಿದ್ದವು. ಇದರಿಂದ ದರ ಏರಿಕೆಯ ವಿಚಾರದಲ್ಲಿ ಪೈಪೋಟಿ ನಡೆದಿತ್ತು.
ಕೆಲವು ದಿನಗಳ ಹಿಂದೆ ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಯನ್ನು 430 ರೂ., ಹಳೆ ಅಡಿಕೆಯನ್ನು 520 ರೂ.ಗೆ ಖರೀದಿಸಲಾಗುತ್ತಿತ್ತು. ಇದೀಗ ಧಾರಣೆ ಕೊಂಚ ಏರಿದೆ. ಜು. 11ರಂದು ಪುತ್ತೂರು ಕ್ಯಾಂಪ್ಕೋದಲ್ಲಿ ಹೊಸದಕ್ಕೆ 435-450 ರೂ. ಇದ್ದರೆ ಹಳೆಯದಕ್ಕೆ 510-550 ರೂ., ಜು. 19ರಂದು ಹೊಸದಕ್ಕೆ 440 ರೂ., ಹಳೆಯದಕ್ಕೆ 565 ರೂ. ಇತ್ತು. ಬೆಳ್ಳಾರೆ ಹೊರ ಮಾರುಕಟ್ಟೆಯಲ್ಲಿ ಜು. 11ರಂದು ಹೊಸದಕ್ಕೆ 442 ರೂ. ಇದ್ದರೆ ಹಳೆಯದಕ್ಕೆ 560 ರೂ. ಇತ್ತು. ಜು. 19ರಂದು ಕ್ರಮವಾಗಿ 447 ರೂ. ಮತ್ತು 565 ರೂ.ಗಳಲ್ಲಿತ್ತು.ಧಾರಣೆ ಏರಿದರೂ ಬೇಡಿಕೆಗೆ ತಕ್ಕಷ್ಟು ಅಡಿಕೆ ಮಾರುಕಟ್ಟೆಗೆ ಬರುತ್ತಿಲ್ಲ. ಅಸ್ಸಾಂ, ಮೇಘಾಲಯ ಸೇರಿದಂತೆ ಉತ್ತರದ ಭಾಗದಲ್ಲಿ ಭಾರೀ ಮಳೆಯಕಾರಣ ಅಡಿಕೆ ವಹಿವಾಟು ಕುಸಿದಿದ್ದು, ಮಾರುಕಟ್ಟೆಯು ಬಹು ಪಾಲು ದಕ್ಷಿಣ ಭಾಗವನ್ನು ಅವಲಂಬಿ ಸಿರುವುದು ಕೂಡ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.