Advertisement

ಕ್ರಿಶ್ಚಿಯನ್‌,ಮುಸ್ಲಿಮರಿಗೆ ಟಿಕೆಟ್‌ ನೀಡದ ನೀವು ಕನ್ನಡಿಗರೆ?

11:55 AM May 01, 2018 | Team Udayavani |

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ನಿರಂತರವಾಗಿ ವಾಗ್ಧಾಳಿ ನಡೆಸುವ ಸಿಎಂ ಸಿದ್ದರಾಮಯ್ಯ ಅವರು ಟ್ವೀಟರ್‌ನಲ್ಲೂ ಸಮರ ಮುಂದುವರಿಸಿದ್ದಾರೆ. ನಾನು ಕನ್ನಡಿಗ, ಕರ್ನಾಟಕದ ಭಾಜಪ ಕಾರ್ಯಕರ್ತ ಎಂದ ಮೋದಿ ಅವರಿಗೆ 5 ಪ್ರಶ್ನೆಗಳ ಸವಾಲನ್ನು ಸಿಎಂ ಸಿದ್ದರಾಮಯ್ಯ ಎಸೆದಿದ್ದಾರೆ.

Advertisement

ಸರಣಿ ಟ್ವಿಟ್‌ಗಳ ಪ್ರಶ್ನೆಗಳು ಹೀಗಿವೆ

1.ಕನ್ನಡಿಗನೆಂದು ಘೋಷಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ  ಅವರಿಗೆ ಅಭಿನಂದನೆ.

ಕನ್ನಡಿಗನಾಗುವುದೆಂದರೆ….ನಾಡಭಾಷೆ, ನಾಡಗೀತೆ, ನಾಡಧ್ವಜವನ್ನು ಒಪ್ಪಿಕೊಳ್ಳುವುದು.
ಕರ್ನಾಟಕದ ನಾಡಧ್ವಜಕ್ಕೆ ಅಂಗೀಕಾರ‌ ನೀಡಿ, ನಿಜವಾದ ಕನ್ನಡಿಗರಾಗುವಿರಾ?. 

2.ಕನ್ನಡಿಗನಾಗುವುದೆಂದರೆ…ಈ ನೆಲದ ಶರಣರು, ಸಂತರು, ದಾಸರು, ಸೂಫಿಗಳು ಹುಟ್ಟುಹಾಕಿದ ಸೌಹಾರ್ದ ಪರಂಪರೆಯನ್ನು‌ ಗೌರವಿಸುವುದು.ಒಬ್ಬನೇ ಒಬ್ಬ‌ ಮುಸ್ಲಿಮ್,‌ಕ್ರಿಶ್ಚಿಯನ್‌ಗೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ನಿಮಗೆ‌ ನಿಜವಾದ ಕನ್ನಡಿಗರಾಗಲು ಸಾಧ್ಯವೇ?

Advertisement

3.ಕನ್ನಡಿಗನಾಗುವುದೆಂದರೆ…ಬಲತ್ಕಾರದ ಹಿಂದಿ ಹೇರಿಕೆಯನ್ನು  ಕೈಬಿಡುವುದು, ಕನ್ನಡಕ್ಕೆ ಪ್ರಾಮುಖ್ಯ ಕೊಡುವುದು.

4.ಕನ್ನಡಿಗರಾಗಲು ಸಿದ್ದ ಇದ್ದೀರಾ? ಕನ್ನಡಿಗನಾಗುವುದೆಂದರೆ….ಕನ್ನಡ ಕನ್ನಡಿಗ ಕರ್ನಾಟಕದ ಹಿತರಕ್ಷಣೆ.ರಾಷ್ಟೀಕೃತ ಬ್ಯಾಂಕುಗಳ ಪ್ರವೇಶ‌ ಪರೀಕ್ಷೆಯನ್ನು‌ ಕನ್ನಡಿಗರಿಗೆ ಕನ್ನಡದಲ್ಲಿ ಬರೆಯಲು ಅವಕಾಶ‌ ನೀಡಿ‌ ಕನ್ನಡಿಗರಾಗುವಿರಾ?

5.ಕನ್ನಡಿಗನಾಗುವುದೆಂದರೆ…ನೆಲ,ಜಲ,ಭಾಷೆಯ ರಕ್ಷಣೆಗೆ  ಬದ್ದವಾಗಿರುವುದು.
ಮಹದಾಯಿ ನೀರು ಹಂಚಿಕೆ ವಿವಾದ ಬಗೆಹರಿಸಲು ಮೂರು ರಾಜ್ಯಗಳ ಸಭೆ ಕರೆದು ಕನ್ನಡಿಗರಾಗುವಿರಾ?

Advertisement

Udayavani is now on Telegram. Click here to join our channel and stay updated with the latest news.

Next