Advertisement
ದಂಡ ಎಷ್ಟು?ಸಾಮಾನ್ಯವಾಗಿ, ಅವಧಿಗೆ ಮುನ್ನ ಎಫ್.ಡಿ. ಹಿಂಪಡೆದುಕೊಳ್ಳುವ ಸಂದರ್ಭದಲ್ಲಿ, ಬ್ಯಾಂಕುಗಳು ವಿಧಿಸುವ ದಂಡ ಶೇ. 0.5- 1 ಇದೆ. ಕೆಲ ಬ್ಯಾಂಕುಗಳು, ದಂಡ ಶುಲ್ಕ
ವಿಧಿಸುವುದಿಲ್ಲ. ಎಸ್.ಬಿ.ಐ. ಪ್ರಿ ಮೆಚೂರ್ಡ್ ವಿತ್ ಡ್ರಾವಲ್‌ಗೆ, ಎಫ್.ಡಿ. ಮೊತ್ತ 5 ಲಕ್ಷದ ಒಳಗೆ ಇದ್ದರೆ, ಶೇ. 0.5 ದಂಡ ಶುಲ್ಕವನ್ನು ವಿಧಿಸುತ್ತಿದೆ. ಎಫ್.ಡಿ. ಮೊತ್ತ 5 ಲಕ್ಷಕ್ಕೂ ಮೇಲಿದ್ದು, 1 ಕೋಟಿಯ ಒಳಗಿದ್ದರೆ ಶೇ.1ರಷ್ಟು ದಂಡ ವಿಧಿಸುತ್ತಿದೆ.
ಬ್ಯಾಂಕುಗಳು, ತಾವು ವಿಧಿಸಿದ ದಂಡ ಶುಲ್ಕವನ್ನು ಗ್ರಾಹಕರಿಗೆ ನೀಡುವ ಬಡ್ಡಿ ಹಣದಲ್ಲಿ ಮುರಿದುಕೊಳ್ಳುತ್ತವೆ. ಉದಾಹರಣೆಗೆ, ಬ್ಯಾಂಕು ಅವಧಿಗೆ ಮುನ್ನದ ಎಫ್ ಡಿ ಹಣ ಹಿಂಪಡೆಯಲು 1% ದಂಡ ವಿಧಿಸುತ್ತಿದೆ ಎಂದುಕೊಳ್ಳೋಣ. ಬ್ಯಾಂಕಿನಲ್ಲಿಟ್ಟ ಎಫ್ ಡಿ ಯ ಮೌಲ್ಯ 1 ಲಕ್ಷ ರೂ ಇದ್ದು, ಬಡ್ಡಿ 8% ಎಂದಿಟ್ಟುಕೊಳ್ಳೋಣ. ಒಂದು ವರ್ಷ ಪೂರ್ತಿಗೊಂಡ ನಂತರ, 8% ಬಡ್ಡಿ ರೂಪದಲ್ಲಿ ಹಣ ಸಂದಾಯವಾಗುತ್ತದೆ. ಗ್ರಾಹಕ, ಅವಧಿ ಪೂರ್ತಿಗೊಳ್ಳುವ ಮೊದಲೇ ಎಫ್ ಡಿ ಯನ್ನು ವಿತ್ ಡ್ರಾ ಮಾಡಿಕೊಂಡರೆ, ಶೇ.8ಕ್ಕೆ ಬದಲಾಗಿ ಶೇ.7 ಬಡ್ಡಿ ಆದಾಯ ನೀಡಲಾಗುತ್ತದೆ. ಇದು ಸರಿಯೇ?
ಅವಧಿಗೆ ಮುನ್ನ, ಎಫ್ಡಿ ಹಣ ವಿತ್‌ಡ್ರಾ ಮಾಡುವುದು ಒಳ್ಳೆಯದಲ್ಲ ಎನ್ನುವುದು ಹೆಚ್ಚಿನವರ ಅಭಿಪ್ರಾಯ. ಆದರೆ, ತುರ್ತು ಸನ್ನಿವೇಶಗಳಲ್ಲಿ, ತಕ್ಷಣಕ್ಕೆ ಹಣ ಬೇಕೆಂದಾಗ ಮಾತ್ರ ಪ್ರಿ ಮೆಚೂರ್ಡ್ ಎಫ್ಡಿ ವಿತ್ ಡ್ರಾವಲ್‌ಗೆ ಮುಂದಾಗಬೇಕು ಎಂದೂ ಮಾರ್ಕೆಟ್ ಪರಿಣತರು ಹೇಳುತ್ತಾರೆ.
Related Articles
ಎಸ್‌ಬಿಐ, ಹಿರಿಯ ನಾಗರಿಕ ಗ್ರಾಹಕರಿಗಾಗಿ “ವಿ ಕೇರ್’ ಎನ್ನುವ ಹೊಸ ಫಿಕ್ಸೆಡ್ ಡೆಪಾಸಿಟ್(ಎಫ್.ಡಿ) ಸ್ಕೀಮನ್ನು ಪರಿಚಯಿಸಿದೆ. ಬ್ಯಾಂಕ್ ಬಡ್ಡಿ ದರಗಳು ಕುಸಿಯುತ್ತಿರುವ ಈ ಸಮಯದಲ್ಲಿ, ಈ ಹೊಸ ಯೋಜನೆ ಹಿರಿಯ ನಾಗರಿಕರಿಗೆ ಲಾಭಕರವಾಗಿ ಪರಿಣಮಿಸಲಿದೆ. ಈ ಯೋಜನೆಯಲ್ಲಿ, ಹಿಂದಿನದ ಕ್ಕಿಂತ 0.8% ಹೆಚ್ಚಿಗೆ ಬಡ್ಡಿಯನ್ನು ನೀಡಲಾಗುತ್ತದೆ. ಉದಾಹರಣೆಗೆ, ಈವರೆಗಿನ ಬಡ್ಡಿ ದರ ಶೇ. 6 ಇತ್ತು ಅಂದುಕೊಳ್ಳಿ. ಇನ್ನು ಮುಂದೆ ಅದು, ಶೇ. 6.8 ಆಗಲಿದೆ. ಈ ಸವಲತ್ತು ಪಡೆಯಬೇಕಾದರೆ, ಟರ್ಮ್ ಡೆಪಾಸಿಟ್ ಅವಧಿ ಕನಿಷ್ಠ 5 ವರ್ಷಗಳಾಗಿರಬೇಕು. ಪ್ರಿ ಮೆಚೂರ್ಡ್ ವಿತ್ ಡ್ರಾ, ಅಂದರೆ 5 ವರ್ಷದ ಅವಧಿಗೆ ಮುನ್ನ ಹಣ ವಿತ್ ಡ್ರಾ ಮಾಡಿಕೊಂಡಲ್ಲಿ, ವಿ ಕೇರ್ ಯೋಜನೆಯ ಸವಲತ್ತು ಅನ್ವಯವಾಗುವುದಿಲ್ಲ. ಈ ಯೋಜನೆ, ಸೆಪ್ಟೆಂಬರ್ 30, 2020ರ ತನಕ ತೆರೆದಿರಲಿದೆ.
Advertisement