ಮಣಿಪಾಲ: ಕೋವಿಡ್ ಸಂಕಷ್ಟದ ಸಮಯದಲ್ಲಿ ಅಕಾಲಿಕವಾಗಿ ನಮ್ಮ ದೇಶಕ್ಕೆ ದಾಳಿ ಮಾಡಿರುವ ಮಿಡತೆ ಸೈನ್ಯವನ್ನು ಮಟ್ಟಹಾಕಲು ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿವೆ.
ವಿಜಯ್ ಶೆಟ್ಟಿ: ಮಿಡತೆ ಹಾವಳಿ ಬಗ್ಗೆ ನಾವು ತಲೆ ಕೆಡಿಸಿಕೊಂಡಿರೋದು ನಿಜ! ಆದರೆ ಚೀನಾದವರು ಮಿಡತೆಗಳು ತಮ್ಮ ದೇಶದ ಕಡೆ ಯಾಕೆ ಬರಲಿಲ್ಲ ಅಂತ ಹೊಟ್ಟೆ ಉರಕೊಂಡು ಸಾಯ್ತಿದ್ದಾರೆ!
ಹುಸೇನ್ ಭಾಷಾ ಕೆ: ಕೋವಿಡ್ ತಡೆಗೆ ಕೈಗೊಳ್ಳದ ಸರ್ಕಾರ ಇನ್ನು ಮಿಡತೆ ತಡೆಗೆ ಇನ್ಯಾವ ರೀತಿಯಲ್ಲಿ ಕಸರತ್ತು ನೆಡೆಸುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ. ಕಾದುನೋಡೋಣ
ಸುಲೋಚನ ಆರ್ ಶೆಟ್ಟಿ: ಸರಕಾರ ಹಾಗೂ ಇನ್ನೊಂದು ದೇಶವನ್ನು ಆಡಿಕೊಳ್ಳುವ ನಾವು ಈ ಮಟ್ಟದಲ್ಲಿ ಮಿಡತೆಗಳ ಹಾವಳಿಗೆ ಕಾರಣವೇನೆಂದು ಏಕೆ ಯೋಚಿವುದಿಲ್ಲ? ಜೈವಿಕ ಅಸಮತೋಲನವೇ ಇದಕ್ಕೆಲ್ಲ ಕಾರಣವಲ್ಲವೇ? ಆಹಾರ ಸರಪಳಿಯ ಬಗ್ಗೆ ನಮಗೆಲ್ಲಾ ತಿಳಿದೇ ಇದೆ. ಪ್ರಕೃತಿಯಲ್ಲಿ ಕೀಟಗಳು ಸರೀಸೃಪ ಹಾಗೂ ಪಕ್ಷಿಗಳ ಆಹಾರ ಇಂದು ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ ಜೈವಿಕ ಅಸಮತೋಲನ ಏರ್ಪಟ್ಟಿದೆ.ಪ್ರಕೃತಿಯ ವೈಪರೀತ್ಯವನ್ನು ಪ್ರಕೃತಿಯೇ ಸರಿದೂಗಿಸುತ್ತದೆ. ಆಧುನಿಕತೆಯ ಸೋಗಿನಲ್ಲಿ ಇದಕ್ಕೆಲ್ಲ ಕಾರಣವಾದ ಮಾನವ ಕುಲವೇ ಇದರ ಸಂಕಷ್ಟವನ್ನು ಅನುಭವಿಸಬೇಕು.
ರವಿ ರಾಜೇಶ್ವರ್: ಕೋವಿಡ್ ವಿರುಧ್ಧ ಹೋರಾಡಿದ ಹಾಗೆಯೇ ಮಿಡಿತೆಗಳ ವಿರುದ್ದವೂ ಅದೇ ರೀತಿ ಯಲ್ಲಿ ಹೋರಾಡುತ್ತಾರೆ ಎನ್ನುವದಕ್ಕೆ ಯಾವ ಸಂಶಯವೂ ಇಲ್ಲ…
ರಾಕೇಶ್ ಡಿ ಗೌಡ: ಮಿಡತೆ ಹಾವಳಿ ಬಗ್ಗೆ ನಾವು ತಲೆ ಕೆಡಿಸಿಕೊಂಡಿರೋದು ನಿಜ! ಆದರೆ ಚೀನಾದವರು ಮಿಡತೆಗಳು ತಮ್ಮ ದೇಶದ ಕಡೆ ಯಾಕೆ ಬರಲಿಲ್ಲ ಅಂತ ಹೊಟ್ಟೆ ಉರಕೊಂಡು ಸಾಯ್ತಿದ್ದಾರೆ!