Advertisement

ಒಣ ದ್ರಾಕ್ಷಿ ಪೋಷಕಾಂಶಗಳ ಕಣಜ; ಜೀರ್ಣಶಕ್ತಿ, ರೋಗನಿರೋಧಕ ಶಕ್ತಿ ವೃದ್ಧಿ

03:56 PM Jan 18, 2023 | Team Udayavani |

ಸಣ್ಣಪುಟ್ಟ ಕಾಯಿಲೆಗಳಿಂದ ಹಿಡಿದು ದೊಡ್ಡದೊಡ್ಡ ರೋಗಗಳು ಬಾರದಂತೆ ಕಾಪಾಡುವ ಔಷಧಗಳು ನಮ್ಮ ಅಡುಗೆ ಮನೆಯಲ್ಲೇ ಇವೆ. ಆದರೆ ಇದರ ಬಗ್ಗೆ
ಅಸಡ್ಡೆಯೇ ಹೆಚ್ಚು. ಆಯುರ್ವೇದದ ಪ್ರಕಾರ ಭಾರತೀಯ ಅಡುಗೆ ಶೈಲಿಯಲ್ಲಿ ಬಳಸುವ ಪ್ರತಿಯೊಂದು ಪದಾರ್ಥಗಳಲ್ಲೂ ಆರೋಗ್ಯ ವರ್ಧನೆಯ ಅಂಶಗಳಿರುತ್ತವೆ. ಹೆಚ್ಚಾಗಿ ಸಿಹಿ ಖಾದ್ಯಗಳಲ್ಲಿ ಬಳಕೆಯಾಗುವ ಒಣ ದ್ರಾಕ್ಷಿ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

Advertisement

ರಾತ್ರಿ ಮಲಗುವ ಮುನ್ನ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದ ಅನಂತರ ಆ ನೀರನ್ನು ಸೇವಿಸುವುದರಿಂದಲೂ ಅನೇಕ ಲಾಭಗಳಿವೆ. ಈ ನೀರನ್ನು ಸತತವಾಗಿ ನಾಲ್ಕು ದಿನ ಕುಡಿದರೆ ಕರುಳು ಸ್ವತ್ಛವಾಗುತ್ತದೆ.

ಹೃದಯ ಸಂಬಂಧಿ, ಯಕೃತ್‌ ಸಮಸ್ಯೆಗಳು ಇಲ್ಲವಾಗುತ್ತದೆ. ಪ್ರತಿದಿನ ಒಣದ್ರಾಕ್ಷಿ ನೆನೆಸಿದ ನೀರನ್ನು ಕುಡಿಯುವುದರಿಂದ ರಕ್ತವು ಶುದ್ಧಿಯಾಗುತ್ತದೆ, ಹಿಮೋಗ್ಲೋಬಿನ್‌ ಸಂಖ್ಯೆ ಹೆಚ್ಚಾಗುತ್ತದೆ. ಹೃದಯಾಘಾತದ ಅಪಾಯವಿರುವುದಿಲ್ಲ. ಇದರಲ್ಲಿರುವ ಕಬ್ಬಿನಾದಂಶ ದೇಹಕ್ಕೆ ದೊರೆತು ರಕ್ತಹೀನತೆ ತೊಂದರೆಯಿಂದ ರಕ್ಷಿಸುತ್ತದೆ.

ಜತೆಗೆ ಇದು ಜೀರ್ಣಶಕ್ತಿ, ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ. ಮೂತ್ರಪಿಂಡಗಳಲ್ಲಿ ಸಂಗ್ರಹವಾಗುವ ಕಶ್ಮಲಗಳನ್ನು ನಿವಾರಿಸಲು ಇದು ಅತ್ಯುತ್ತಮ.
ಇನ್ನು ನೆನೆಸಿಟ್ಟ ಒಣ ದ್ರಾಕ್ಷಿ ಸೇವನೆಯಿಂದಲೂ ಅನೇಕ ಲಾಭಗಳಿವೆ. ಇದರಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು, ಬಾಯಿ, ಒಸಡು, ಹಲ್ಲುಗಳಲ್ಲಿರುವ
ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ. ಇದು ಉಸಿರಿನ ದುರ್ವಾಸನೆ ಯನ್ನು ಹೋಗಲಾಡಿಸುತ್ತದೆ.

ಒಣದ್ರಾಕ್ಷಿಯಲ್ಲಿ ಅತ್ಯಧಿಕ ಪ್ರಮಾಣ ಕ್ಯಾಲ್ಸಿಯಂ ಹಾಗೂ ಹಲವು ಪೋಷಕಾಂಶಗಳಿದ್ದು, ಮೂಳೆಗಳ ಆರೋಗ್ಯಕ್ಕೆ ಅತ್ಯುತ್ತಮ. ಇದರಲ್ಲಿರುವ ಕರಗುವ ನಾರುಗಳು ಹಾಗೂ ಹಲವು ಪೋಷಕಾಂಶಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಸಂಗ್ರಹವಾಗುವುದನ್ನು ತಡೆದು ಉತ್ತಮ ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸಿ ಹೃದಯ  ಸಂಬಂಧಿ ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಇದರಲ್ಲಿರುವ ವಿಟಮಿನ್‌ ಎ, ಬಿಟಾ ಕ್ಯಾರೋಟಿನ್‌ ಕಣ್ಣಿನ  ಆರೋಗ್ಯಕ್ಕೆ ಅತ್ಯುತ್ತಮ. ಇದು ದೃಷ್ಟಿ ಹೀನತೆಯನ್ನು ತಡೆಯುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next