ಮುಂಬಯಿ: ವರುಣ್ ಧವನ್ ಅಭಿನಯದ ʼಭೇಡಿಯಾʼ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಬಹು ಸಮಯದ ಬಳಿಕ ಮತ್ತೆ ಬಾಲಿವುಡ್ ಬ್ಯಾಕ್ ಟು ವಿನ್ನಿಂಗ್ ಟ್ರ್ಯಾಕ್ ಗೆ ಬಂದಿದೆ. ಅತ್ತ ಅಜಯ್ ದೇವಗನ್ ಅವರ ʼದೃಶ್ಯಂ-2ʼ ಸಿನಿಮಾ ಕೂಡ ಸದ್ದು ಮಾಡುತ್ತಿದೆ.
ಸಿನಿಮಾದ ಪ್ರಚಾರದ ಅಂಗವಾಗಿ ನಟ ವರುಣ್ ಧವನ್ ಹಾಗೂ ಕೃತಿ ಸನೋನ್ ಖಾಸಗಿ ವಾಹಿನಿಯ ಡ್ಯಾನ್ಸ್ ಶೋ ‘ಝಲಕ್ ದಿಖ್ಲಾ ಜಾ’ದಲ್ಲಿ ಭಾಗಿಯಾಗಿದ್ದಾರೆ. ಕರಣ್ ಜೋಹರ್ ( ಕಾರ್ಯಕ್ರಮದಲ್ಲಿ ತೀರ್ಪುಗಾರ) ವರುಣ್ ಧವನ್ ಬಳಿ ಲಿಸ್ಟ್ ನಲ್ಲಿ ಕೃತಿ ಅವರ ಹೆಸರು ಯಾಕೆ ಮಿಸ್ ಆಗಿದೆ ಎಂದಿದ್ದಾರೆ. ಇದಕ್ಕೆ ವರುಣ್ ಧವನ್ ತಮಾಷೆಯಾಗಿಯೇ ಉತ್ತರಿಸಿದ್ದು, ಕೃತಿ ಅವರ ಡೇಟಿಂಗ್ ವಿಚಾರವನ್ನು ಹೇಳಿದ್ದಾರೆ.
ಕೃತಿ ಅವರ ಹೆಸರು ಯಾಕಿಲ್ಲ ಎಂದು ಹೇಳುವಾಗ ಕೃತಿ ವರಣ್ ಅವರ ಮಾತನ್ನು ತಡೆಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ವರುಣ್ ಮಾತು ಮುಂದುವರೆಸಿ ಕೃತಿ ಅವರ ಹೆಸರು ಯಾರಾದೋ ಹೃದಯದಲ್ಲಿದೆ ಎಂದಿದ್ದಾರೆ.
ಕರಣ್ ಅವರು ಯಾರು ಎಂದು ಕೇಳಿದಾಗ, ಒಬ್ಬ ವ್ಯಕ್ತಿ ಇದ್ದಾರೆ ಅವರೀಗ ಮುಂಬಯಿಯಲ್ಲಿಲ್ಲ. ಈಗ ಅವರು ದೀಪಿಕಾ ಪಡುಕೋಣೆಯೊಂದಿಗೆ ಶೂಟಿಂಗ್ ನಲ್ಲಿದ್ದಾರೆ ಎಂದಿದ್ದಾರೆ. ಇದಕ್ಕೆ ಕೃತಿ ಮುಗುಳು ನಕ್ಕಿದ್ದಾರೆ.
ದೀಪಿಕಾ ಪಡುಕೋಣೆ – ಪ್ರಭಾಸ್ ಮುಖ್ಯಭೂಮಿಕೆಯ ʼಪ್ರೂಜೆಕ್ಟ್ ಕೆʼ ಚಿತ್ರದ ಶೂಟ್ ಭರದಿಂದ ಸಾಗುತ್ತಿದೆ.’ಆದಿಪುರುಷ್ʼ ಚಿತ್ರದಲ್ಲಿ ಕೃತಿ ಹಾಗೂ ಪ್ರಭಾಸ್ ನಟಿಸಿದ್ದಾರೆ. ಚಿತ್ರದ ಟೀಸರ್ ರಿಲೀಸ್ ಸಮಯದಲ್ಲಿಯೂ ಆತ್ಮೀಯವಾಗಿ ಪ್ರಭಾಸ್ – ಕೃತಿ ಕಾಣಿಸಿಕೊಂಡಿದ್ದರು. ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಬಿಟೌನ್ ನಲ್ಲಿ ಹಬ್ಬಿದೆ.