Advertisement

ವಿರಾಟ್‌ ಕೊಹ್ಲಿ ದಾಖಲೆಗಳಿಗೆ ಕೊನೆಯುಂಟೇ?

10:38 PM Oct 18, 2019 | Team Udayavani |

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಸಮಕಾಲೀನ ಕ್ರಿಕೆಟ್‌ನ ಸರ್ವಶ್ರೇಷ್ಠ ಆಟಗಾರ. ಅವರ ಆಟವನ್ನು ವರ್ಣಿಸಿ, ಅವರೊಬ್ಬ ಅದ್ಭುತ ಆಟಗಾರ ಎಂದು ತಿಳಿಹೇಳುವ ಅಗತ್ಯ ಯಾರಿಗೂ ಇಲ್ಲ. ಅವರು ಪ್ರತೀ ಬಾರಿ ಬ್ಯಾಟ್‌ ಹಿಡಿದು ಕ್ರೀಸ್‌ಗಿಳಿದರೆಂದರೆ ಒಂದು ವಿಶ್ವದಾಖಲೆಯ ನಿರೀಕ್ಷೆ ಮೂಡಿರುತ್ತದೆ. ಇತ್ತೀಚೆಗೆ ಮುಗಿದ ದ.ಆಫ್ರಿಕಾ ವಿರುದ್ಧ 2ನೆ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ ಅವರು, ಒಂದೇ ಏಟಿಗೆ ಹಲವು ವಿಶ್ವದಾಖಲೆ ನಿರ್ಮಿಸಿದರು.

Advertisement

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 21 ಸಾವಿರ ರನ್‌ಗಳನ್ನು ವೇಗವಾಗಿ ಮುಟ್ಟಿದ ಆಟಗಾರ, 7 ದ್ವಿಶತಕ ಹೊಡೆದ ಮೊದಲ ಭಾರತೀಯ, ನಾಯಕನಾಗಿ ಗರಿಷ್ಠ ದ್ವಿಶತಕ, ಗರಿಷ್ಠ 150ಕ್ಕೂ ಅಧಿಕ ರನ್‌ಗಳು, 40 ಶತಕಗಳು…ಈ ಎಲ್ಲ ದಾಖಲೆಗಳನ್ನು ಕೇಳಿಯೇ ಸುಸ್ತಾಗುತ್ತದೆ. ವಿಶ್ವದ ಇತರೆ ದಿಗ್ಗಜರೆಲ್ಲ ಯಾವುದೋ ಒಂದು ಮಾದರಿಯಲ್ಲಿ ಸರ್ವಶ್ರೇಷ್ಠರೆನಿಸಿಕೊಂಡಿದ್ದರೂ, ಕೊಹ್ಲಿ ಮೂರೂ ಮಾದರಿಯಲ್ಲಿ ಅಡೆತಡೆಗಳೇ ಇಲ್ಲದೇ ಮುನ್ನುಗ್ಗುತ್ತಿದ್ದಾರೆ. ಇನ್ನು ಕೆಲವೇ ವರ್ಷ ಅವರು ಇದೇ ರೀತಿಯಲ್ಲಿ ಬ್ಯಾಟ್‌ ಬೀಸಿದರೆ, ಸಚಿನ್‌ ತೆಂಡುಲ್ಕರ್‌ ಅವರ ಎಲ್ಲ ದಾಖಲೆಗಳು ನೆಲಸಮವಾಗುವುದು ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next