Advertisement
ಅಮಾನತು ನಿರ್ಧಾರ ಸೋಮವಾರದಿಂದ ಜಾರಿಗೆ ಬರಲಿದೆ. ಆದರೆ ಆ. 19ರಿಂದ 25ರ ವರೆಗೆ ಮ್ಯಾಡ್ರಿಡ್‌ನಲ್ಲಿ ನಡೆಯಲಿರುವ ವಿಶ್ವ ಆರ್ಚರಿ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬಿಲ್ಗಾರರು ಕೊನೆಯ ಸಲ ಭಾರತೀಯ ಧ್ವಜದಡಿ ಭಾಗವಹಿಸಬಹುದಾಗಿದೆ.
ಎಎಐಯನ್ನು ಅಮಾನತು ಗೊಳಿಸುವ ನಿರ್ಧಾರವನ್ನು ವಿಶ್ವ ಆರ್ಚರಿ ಜೂನ್‌ನಲ್ಲೇ ತೆಗೆದುಕೊಂಡಿತ್ತು. ಜುಲೈ ಅಂತ್ಯದೊಳಗೆ ಸಮಸ್ಯೆ ಪರಿಹರಿಸಲು ಡಬ್ಲ್ಯುಎ ಕಾರ್ಯಕಾರಿ ಮಂಡಳಿ ಗಡು ವಿಧಿಸಿತ್ತು. ಆದರೆ ಯಾವುದೇ ಬೆಳವಣಿಗೆ ಕಾಣದ ಹಿನ್ನೆಲೆಯಲ್ಲಿ ಅಮಾನತು ಆದೇಶವನ್ನು ಜಾರಿಗೊಳಿಸಲಾಗಿದೆ ಎಂದು ಡಬ್ಲ್ಯುಎ ಪ್ರಧಾನ ಕಾರ್ಯದರ್ಶಿ ಟಾಮ್ ಡೀಲೆನ್ ತಿಳಿಸಿದ್ದಾರೆ. ಆಗಸ್ಟ್ ತಿಂಗಳೊಳಗೆ ಯಾವುದೇ ಪರಿಹಾರ ಕಾಣದಿದ್ದರೆ ಮುಂಬರುವ ಏಶ್ಯನ್ ಚಾಂಪಿಯನ್‌ಶಿಪ್ ಮತ್ತು ಏಶ್ಯನ್ ಪ್ಯಾರಾ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬಿಲ್ಗಾರರು ಭಾಗವಹಿಸುವ ಬಗ್ಗೆ ಕಾರ್ಯಕಾರಿ ಸಮಿತಿ ನಿರ್ಧಾರ ತೆಗೆದು ಕೊಳ್ಳಲಿದೆ ಎಂದು ಡೀಲೆನ್ ಹೇಳಿದರು.