Advertisement

ದೀಪಿಕಾ ಕುಮಾರಿ –ಅತನು ನಿಶ್ಚಿತಾರ್ಥ

06:00 AM Dec 12, 2018 | Team Udayavani |

ರಾಂಚಿ: ಭಾರತದ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ ಹಾಗೂ ಅತನು ದಾಸ್‌ ಅವರ ನಿಶ್ಚಿತಾರ್ಥ ನೆರವೇರಿದೆ. ಇವರು ಮುಂದಿನ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸೋಮವಾರ ದೀಪಿಕಾ ಕುಮಾರಿ ಅವರ ಮನೆಯಲ್ಲಿ ನೆರವೇರಿದ ನಿಶ್ಚಿತಾರ್ಥ ಸಮಾ ರಂಭದಲ್ಲಿ ಝಾರ್ಖಂಡ್‌ನ‌ ಮಾಜಿ ಮುಖ್ಯಮಂತ್ರಿ ಅರ್ಜುನ್‌ ಮುಂಡಾ ಹಾಗೂ ಪತ್ನಿ ಮೀರಾ ಮುಂಡಾ ಭಾಗವಹಿಸಿದ್ದರು. 
“2019 ಒಲಿಂಪಿಕ್‌ ಅರ್ಹತಾ ಸುತ್ತು ಸೇರಿದಂತೆ ಹಲವು ಚಟು ವಟಿಕೆಗಳಿಂದ ಕೂಡಿರುವ ಕಾರಣ ವರ್ಷದ ಅಂತ್ಯದಲ್ಲಿ ಮದುವೆ ಯಾಗಲಿದ್ದೇವೆ. ಹೀಗಾಗಿ ಮುಂದಿನ ನವೆಂಬರ್‌ ವೇಳೆಗೆ ಹಸೆಮಣೆ ಏರಲಿದ್ದೇವೆ’ ಎಂದು ನಿಶ್ಚಿತಾರ್ಥ ಮುಗಿದ ಅನಂತರ ಜೋಡಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next