Advertisement
ಕ್ರೈಸ್ತ ಧರ್ಮದ ಧಾರ್ಮಿಕ ವಿಧಿ-ವಿಧಾನ ಹಾಗೂ ಸರ್ವಧರ್ಮದ ಗಣ್ಯರ ಸಮ್ಮುಖದಲ್ಲಿ ನಡೆದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ನಿಡು ಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಗೃಹ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಜೆ.ಆರ್.ಲೋಬೋ, ಎನ್.ಎ.ಹ್ಯಾರಿಸ್, ವಿಧಾನಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜಾ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
Related Articles
ಬಲಿಪೂಜೆ ಅರ್ಪಣೆಗೂ ಪೂರ್ವದಲ್ಲಿ ಮಾತನಾಡಿದ ಡಾ.ಬರ್ನಾರ್ಡ್ ಮೊರಸ್, 50 ವರ್ಷದ ಗುರುದೀಕ್ಷೆಯ ಸಂದರ್ಭದಲ್ಲಿ ದೇವರಿಗೆ ಕೃತಜ್ಞತಾ ಪೂರ್ವಕವಾಗಿ ಧನ್ಯವಾದ ಸಲ್ಲಿಸಲು ಹಾಗೂ ದೇವರ ದಯೆ ಮತ್ತು ಕರುಣೆಗೋಸ್ಕರ ವಂದನೆ ಸಲ್ಲಿಸಲು ನಾನು ಈ ಬಲಿಪೂಜೆಯನ್ನು ನಿಮ್ಮೊಂದಿಗೆ ಅರ್ಪಿಸುತ್ತಿದ್ದೇನೆ ಎಂದರು.
Advertisement
50 ವರ್ಷದ ಗುರುದೀಕ್ಷೆಯ ಜೀವನದಲ್ಲಿ ದೇವರ ಪ್ರೀತಿಯನ್ನು ಅನುಭವಿಸಿದ್ದೇನೆ. ಅವರ ಕರುಣೆಯಿಂದ ನಾನು ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಬಲಿಪೂಜೆ ಅರ್ಪಿಸುವಾಗ ದೇವರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ನನ್ನ ಜೀವನದಲ್ಲಿ ಕಷ್ಟ, ಸಂಕಷ್ಟ, ಹಾಗೂ ನನ್ನಿಂದಾದ ತಪ್ಪು ಇರಬಹುದು, ದೇವರ ಕ್ಷಮೆಯನ್ನು ಹಾಗೂ ಕರುಣೆಯನ್ನು ಯಾಚಿಸುತ್ತೇನೆ. ಬಲಿಪೂಜೆ ಅರ್ಪಿಸುವಾಗ ನಾವು ನಮ್ಮ ಪಾಪಗಳನ್ನ ನೆನೆದುಕೊಂಡು ದೇವರಿಗೆ ಕ್ಷೇಮ ಬೇಡಿಕೊಳ್ಳೊಣ, ಎಲ್ಲರ ಕ್ಷೇಮಕ್ಕಾಗಿ ಪ್ರತ್ಯೇಕವಾಗಿ ಪ್ರಾರ್ಥಿಸಿ ಬಲಿಪೂಜೆ ಅರ್ಪಿಸೋಣ ಎಂದು ಬಲಿಪೂಜೆ ನಡೆಸಿದರು.
ಬಲಿಪೂಜೆಯ ನಂತರ ಡಾ.ಬರ್ನಾರ್ಡ್ ಮೊರಾಸ್ ಸೇರಿದಂತೆ ಮಹಾಧರ್ಮಗುರುಗಳು, ಧರ್ಮಗುರುಗಳು ಭಕ್ತರ ಬಳಿಗೆ ಬಂದು ಪ್ರಸಾದ ವಿತರಿಸಿದರು. ಬೆಂಗಳೂರು ಮಹಾಧರ್ಮಕ್ಷೇತ್ರದಿಂದ ಸಿದ್ಧಪಡಿಸಿದ್ದ ಕೇಕ್ ಕತ್ತರಿಸಿ, ಅವರಿಂದ ಸನ್ಮಾನ ಸ್ವೀಕರಿಸಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಪ್ರಾರ್ಥನೆ: ಕನ್ನಡ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ವಿವಿಧ ಪ್ರಾರ್ಥನೆಯನ್ನು ಸಾಮೂಹಿಕವಾಗಿ ನೆರವೇರಿಸಿದರು. ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಮಹಾಧರ್ಮಾಧ್ಯಕ್ಷರಿಗೆ ಅರ್ಪಿಸಲು ವಿಶೇಷ ಪ್ರಾರ್ಥನೆಯೊಂದನ್ನು ಸಿದ್ಧಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅದರ ಪ್ರತಿಯನ್ನು ಎಲ್ಲರಿಗೂ ವಿತರಿಸಿ ಸಾಮೂಹಿಕವಾಗಿ ಹಾಡಿದರು. ಸಂತ ಫ್ರಾನ್ಸಿಸ್ ಕ್ಸೇವಿಯರ್ ಪ್ರಧಾನಾಲಯದ ವ್ಯಾಪ್ತಿಯಲ್ಲಿ ಕೆಥೋಲಿಕ್ ಸಮುದಾಯ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನು ಡಾ.ಬರ್ನಾರ್ಡ್ ಮೊರಾಸ್ ನೆರವೇರಿಸಿದರು. ಗಣ್ಯರಿಂದ ಅಭಿನಂದನೆ:
ನಿಡುಮಾಮಿಡಿ ವೀರಭದ್ರಚನ್ನಮಲ್ಲ ಸ್ವಾಮೀಜಿ, ಗೃಹಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಗಣ್ಯರು ಡಾ.ಬರ್ನಾರ್ಡ್ ಮೊರಾಸ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಭೋಪಾಲ್, ಚಿಕ್ಕಮಗಳೂರು, ಮೈಸೂರು, ಕಲಬುರಗಿ, ಬೆಳಗಾವಿ, ಬಳ್ಳಾರಿ, ಕಾರವಾರ, ಶಿವಮೊಗ್ಗ, ಮಂಡ್ಯ ಹಾಗೂ ತಮಿಳುನಾಡಿನ ವಿವಿಧ ಚರ್ಚ್‌ನ ಧರ್ಮಾಧ್ಯಕ್ಷರು, ಧರ್ಮಗುರುಗಳು, ಸಂಘಟನಾ ಸಮಿತಿಯ ಶ್ರೇಷ್ಠಗುರುಗಳಾದ ಮೊನ್‌ಸಿಜೊnàರ್ ಎಸ್.ಜಯನಾಥನ್, ಮೊನ್‌ಸಿಜೊnàರ್ ಸಿ.ಫ್ರಾನ್ಸಿಸ್, ಧಾರ್ಮಿಕ ಸಮುದಾಯದ ಮಹಾಧರ್ಮಾಕ್ಷೇತ್ರದ ಪ್ರತಿನಿಧಿ ಸ್ವಾಮಿ ಕ್ಸೇವಿಯರ್ ಮನಾವತ್ ಮೊದಲಾದವರು ಉಪಸ್ಥಿತರಿದ್ದರು.