Advertisement

ಪುರಸಭೆಗೆ ಅರ್ಚನಾ ಅಧ್ಯಕ್ಷೆ

03:13 PM Oct 24, 2020 | Suhan S |

ಪಾಂಡವಪುರ: ಚುನಾವಣೆ ನಡೆದು 2 ವರ್ಷ ಕಳೆದು ಅಧ್ಯಕ್ಷ, ಉಪಾಧ್ಯಕ್ಷೆ ನಡೆಯದೆನನೆಗುದಿಗೆ ಬಿದ್ದಿದ್ದ ಪುರಸಭೆಗೆ ಶುಕ್ರವಾರ ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನದ ಚುನಾವಣೆ ನಡೆಯಿತು.

Advertisement

ಪಟ್ಟಣದ ಪುರಸಭೆ ನೂತನ ಅಧ್ಯಕ್ಷೆಯಾಗಿ ಜೆಡಿಎಸ್‌ನ ವಿ.ಕೆ.ಅರ್ಚನಾಚಂದ್ರು, ಉಪಾಧ್ಯಕ್ಷೆಯಾಗಿ ಹಾರೋಹಳ್ಳಿ ಶ್ವೇತಾ ಅವಿರೋಧ ಆಯ್ಕೆಯಾದರು. ಒಟ್ಟು 23 ಮಂದಿ ಸದಸ್ಯರ ಸಂಖ್ಯಾಬಲ ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್‌ 18, ಕಾಂಗ್ರೆಸ್‌ 3, ಬಿಜೆಪಿ 1, ರೈತಸಂಘ 1 ಸದಸ್ಯರಿದ್ದಾರೆ. ಜೆಡಿಎಸ್‌ ಸ್ಪಷ್ಟ ಬಹುಮತ ಪಡೆದುಕೊಂಡಿದೆ.

ಪೈಪೋಟಿ: ರಾಜ್ಯ ಸರ್ಕಾರ ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್‌.ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ಪ್ರಕಟಿಸಿತ್ತು. ಪುರಸಭೆಯಲ್ಲಿ ಬಹುಮತ ಪಡೆದ ಜೆಡಿಎಸ್‌ನ 17ನೇ ವಾರ್ಡ್ ನ ವಿ.ಕೆ.ಅರ್ಚನ ಚಂದ್ರು ಇಬ್ಬರೇ ಎಸ್‌ಸಿ ಮೀಸಲು ಅಭ್ಯರ್ಥಿಯಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಹಲವರಲ್ಲಿ ಪೈಪೋಟಿ ಎದುರಾಗಿತ್ತು. ಜಿಲ್ಲಾಧಿಕಾರಿ ಶುಕ್ರವಾರ ಚುನಾವಣೆ ನಿಗದಿಪಡಿಸಿದ್ದರು.

ಅವಿರೋಧ: ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ವಿ.ಕೆ. ಅರ್ಚನಚಂದ್ರು ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ 21ನೇ ವಾರ್ಡ್‌ ಶ್ವೇತಾ ನಾಮ ಪತ್ರ ಸಲ್ಲಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್‌ ಪ್ರಮೋದ್‌ ಎಲ್‌.ಪಾಟೀಲ್‌ ಘೋಷಿಸಿದರು.

ಸಹಕಾರ ಅವಶ್ಯ:ನೂತನ ಅಧ್ಯಕ್ಷೆ ವಿ.ಕೆ. ಅರ್ಚನಚಂದ್ರು ಮಾತನಾಡಿ, ನಮ್ಮನಾಯಕರಾದ ಶಾಸಕ ಸಿ.ಎಸ್‌. ಪುಟ್ಟರಾಜು ಅವರ ಆಶೀರ್ವಾ ದದಿಂದ ಹಾಗೂ ನಮ್ಮ ಪಕ್ಷದ ಸದಸ್ಯರ ಸಹ ಕಾರದಿಂದ ಪುರಸಭೆ ಅಧ್ಯಕ್ಷೆಯಾಗಿ ಆಯ್ಕೆ ಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಪುರಸಭೆಯ ಅಭಿವೃದ್ಧಿಗೆ ಪೂರಕವಾಗಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರ ಮಾರ್ಗದರ್ಶನದಲ್ಲಿ ನಡೆಯುತ್ತೇನೆಂದರು.

Advertisement

ಚುನಾವಣಾ ಪ್ರಕ್ರಿಯೆಯಲ್ಲಿ ಪುರಸಭೆ ಸದಸ್ಯರಾದ ಎಂ.ಗಿರೀಶ್‌, ಆರ್‌.ಸೋಮ ಶೇಖರ್‌, ಪಿ.ಶಿವಣ್ಣ, ಬಿ.ವೈ.ಬಾಬು, ಕೃಷ್ಣ ಎ.ಅಣ್ಣಯ್ಯ, ಚಿಕ್ಕತಿಮ್ಮೇಗೌಡ, ಚಂದ್ರು, ಶಿವಕುಮಾರ್‌, ಸರಸ್ವತಿ ಜಯರಾಮು, ಸುಧಾ, ಖಮರುನ್ನೀಸಾ, ಎಂ.ಜಯಲಕ್ಷ್ಮೀ ಪಾರ್ಥಸಾರಥಿ,ಎ.ಗೀತಾ, ಕೆ.ಎಸ್‌.ಸುನೀತಾ, ಎಲ್‌.ಅಶೋಕ್‌, ಕೆ.ಉಮಾಶಂಕರ್‌, ಧನ ಲಕ್ಷ್ಮೀ, ಇಮ್ರಾನ್‌, ಮಹದೇವು, ಮಂಗಳ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌ ಮತ್ತಿತರರಿದ್ದರು.

ಮಳವಳ್ಳಿ ಪುರಸಭೆಗೆ ರಾಧಾ ನೂತನ ಅಧ್ಯಕ್ಷೆ :

ಮಳವಳ್ಳಿ :ಪುರಸಭೆ ನೂತನ ಅಧ್ಯಕ್ಷರಾಗಿ ಜೆಡಿಎಸ್‌ನ ರಾಧಾ ನಾಗರಾಜು, ಉಪಾಧ್ಯಕ್ಷರಾಗಿ ನಂದಕುಮಾರ್‌ ಅವಿರೋಧ ಆಯ್ಕೆಯಾದರು. ಕಳೆದ 10 ವರ್ಷಗಳಿಂದ ಕಾಂಗ್ರೆಸ್‌ ಹಿಡಿದಲ್ಲಿದ್ದ ಪುರಸಭೆ ಆಡಳಿತವನ್ನು ಜೆಡಿಎಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಪಟ್ಟಣದ ಪುರಸಭೆ ಸಭಾಂಗಣದಲ್ಲಿದ್ದ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡಿನ ಜೆಡಿಎಸ್‌ ನ ಸದಸ್ಯೆ ರಾಧಾ ನಾಗರಾಜು, ಉಪಾಧ್ಯಕ್ಷ ಸ್ಥಾನಕ್ಕೆ 10ನೇ ವಾರ್ಡಿನ ಜೆಡಿಎಸ್‌ ಸದಸ್ಯ ನಂದಕುಮಾರ್‌ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಗಿದ್ದ ತಹಶೀಲ್ದಾರ್‌ ಕೆ.ಚಂದ್ರಮೌಳಿ ಘೋಷಿಸಿದರು.

ಪಟ್ಟಣದ 23 ವಾರ್ಡಿಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ 9, ಕಾಂಗ್ರೆಸ್‌ನ 5, ಬಿಜೆಪಿಯ ಇಬ್ಬರು ಹಾಗೂ 7 ಮಂದಿ ಪಕ್ಷೇತರರು ಗೆಲುವು ಸಾಧಿಸಿದ್ದರು. ಅಧಿಕಾರ ಹಿಡಿಯಲು 13 ಸದಸ್ಯರ ಬೆಂಬಲದ ಅಗತ್ಯವಿತ್ತು. ಜೆಡಿಎಸ್‌ ತನ್ನ 9 ಸದಸ್ಯರ ಜತೆ ಬಿಜೆಪಿ, ಪಕ್ಷೇತರರು ಸದಸ್ಯರ ಬೆಂಬಲ ಪಡೆದು ಪುರಸಭೆಯಲ್ಲಿ ಹತ್ತು ಬಳಿಕ ಅಧಿಕಾರದ ಗದ್ದುಗೆ ಹಿಡಿದಿದೆ. ಕಾಂಗ್ರೆಸ್‌ನ ಐವರು ಸದಸ್ಯರು ಚುನಾವಣೆಪ್ರತಿಕ್ರಿಯೆಗೆಗೈರು ಆಗಿದ್ದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಶಾಸಕ ಡಾ.ಕೆ.ಅನ್ನದಾನಿ ಅಭಿನಂದಿಸಿ, ಪುರಸಭೆಗೆ ವಿಶೇಷ ಅನುದಾನಕ್ಕೆ ತರುವ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು.

ಉಪಾಧ್ಯಕ್ಷ ನಂದಕುಮಾರ್‌, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣಕ್ಕೆ ಹೊಸ ರೂಪ ನೀಡಲಾಗುವುದು ಎಂದರು.

ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಪುರಸಭೆ ಮುಖ್ಯಾಧಿಕಾರಿ ಗಂಗಾಧರ್‌ ಅಭಿನಂದಿಸಿದರು. ಜೆಡಿಎಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷ ಮಲ್ಲೇಗೌಡ, ಯುವ ಜೆಡಿಎಸ್‌ ಘಟಕದ ಅಧ್ಯಕ್ಷ ಚಂದಹಳ್ಳಿ ಶ್ರೀಧರ್‌, ಪುರಸಭೆ ಸದಸ್ಯರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next