Advertisement
ಸುಮಾರು 70 ವರ್ಷಗಳ ನಂತರ ಪುರಾತತ್ವ ಸರ್ವೇಕ್ಷಾಲಯ ಇಂಥದ್ದೊಂದು ಕೆಲಸ ಕೈಗೆತ್ತಿಕೊಂಡಿದೆ. ಉತ್ತರ ಪ್ರದೇಶದ ಮೀರತ್‌ನಿಂದ 40 ಕಿ.ಮೀ. ದೂರದಲ್ಲಿರುವ ಪ್ರದೇಶದಲ್ಲಿ ಉತVನನ ವನ್ನುನಡೆಸಲಾಗುತ್ತದೆ.ಸದ್ಯ ಮುಂಗಾರು ಮಳೆಯಾಗುತ್ತಿರುವುದರಿಂದ ಉತ್ಖನನ ಕಷ್ಟಕರ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಈ ಕೆಲಸ ಕೈಗೆತ್ತಿಕೊಳ್ಳಲಿದ್ದೇವೆ ಎಂದು ಭಾರ ತೀಯ ಪುರಾತತ್ವ ಇಲಾಖೆ ಹೇಳಿದೆ.
ಭಾರತೀಯ ಪುರಾತತ್ವ ಇಲಾಖೆ ಈಗಾಗಲೇ ಹಲವಾರು ಸ್ಥಳಗಳನ್ನು ಶೋಧನೆ ಮಾಡಿ ಮಹಾಭಾರತ ನಡೆದಿತ್ತು ಎಂಬು ದನ್ನು ಸಾಬೀತು ಮಾಡಲು ಯತ್ನಿಸಿದೆ. ಈಗ ಇದೇ ಪ್ರಯತ್ನಕ್ಕೆ ಪೂರಕವಾಗಿ ಹಸ್ತಿನಾಪುರದ ಹುಡುಕಾಟಕ್ಕೆ ಮುಂದಾಗಿದೆ. ಹಸ್ತಿನಾಪುರವೂ ಸೇರಿದಂತೆ ಐದು ಸ್ಥಳಗಳ ಶೋಧನೆಗಾಗಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಇದರ ಮೊದಲ ಅಂಗವಾಗಿ ಹುಡುಕಾಟ ನಡೆಯಲಿದೆ. ಅಂದರೆ, 2022ರ ಬಜೆಟ್‌ನಲ್ಲಿಯೇ ಈ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಹಸ್ತಿನಾಪುರ ಬಿಟ್ಟರೆ ಹರ್ಯಾಣದ ರಾಖೀಘಡ, ಅಸ್ಸಾಂನ ಶಿವಸಾಗರ, ಗುಜರಾತ್‌ನ ಢೋಲವಿರಾ, ತಮಿಳುನಾಡಿನ ಆದಿಚಲ್ಲನೂರುಗಳಲ್ಲೂ ಮಹಾಭಾರತದ ಕುರುಹುವಿಗಾಗಿ ಹುಡುಕಾಟ ನಡೆಯಲಿದೆ.
Related Articles
ಅಯೋಧ್ಯೆಯಲ್ಲಿ12ಕಂಬಗಳ ದೇಗುಲ ಇತ್ತು ಎಂಬುದನ್ನು ಸಂಶೋಧನೆಯಿಂದ ದೃಢಪಡಿಸಿದ್ದ ಪ್ರಾಚ್ಯವಸ್ತು ಸಂಶೋಧಕ ಪ್ರೊ.ಬಿ.ಬಿ.ಲಾಲ್ ನೇತೃತ್ವದಲ್ಲಿ ಹಸ್ತಿ ನಾಪುರದ ಬಗ್ಗೆ 1952ರಲ್ಲಿ ಮೊದಲ ಬಾರಿಗೆ ಸಂಶೋಧನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಮಹಾಭಾರತದ ಕಾಲ ಕ್ರಿಸ್ತಪೂರ್ವ 900 ಎಂದು ಅಂದಾಜಿಸ ಲಾಗಿತ್ತು. 2006ರಲ್ಲಿ ಹಸ್ತಿನಾಪುರದಿಂದ 90ಕಿಮೀ ದೂರದಲ್ಲಿರುವ ಸಿನೌಲಿಯಲ್ಲಿ ಕೂಡ ಉತ್ಖನನ ನಡೆಸಲಾಗಿತ್ತು. 2018 ರಲ್ಲಿ ಅಲ್ಲಿ ಕಂಚಿನಿಂದ ನಿರ್ಮಿಸಲಾಗಿದ್ದ ಕುದುರೆಗಳಿರುವ ರಥ ಸಿಕ್ಕಿತ್ತು. ಮಹಾ ಭಾರತದಲ್ಲಿ ರಥ-ಕುದುರೆಗಳ ಪ್ರಸ್ತಾಪ ಹೆಚ್ಚಾಗಿ ಇದ್ದುದರಿಂದ ಅದು ಕೂಡ ಮಹಾಭಾರತದ ಕಾಲಕ್ಕೇ ಸೇರಿದ್ದಿರಬಹುದು ಎಂದು ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಕೆ.ಶರ್ಮಾ ಪ್ರತಿಪಾದಿಸಿದ್ದಾರೆ.
Advertisement