Advertisement

ಪುರಾತತ್ವ ಇಲಾಖೆ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

07:28 AM Feb 13, 2019 | Team Udayavani |

ಹಾಸನ: ಜಿಲ್ಲೆಯ ಭಾರತೀಯ ಪುರಾತತ್ವ ಸವೇಕ್ಷಣಾ ಇಲಾಖೆಯ ಐತಿಹಾಸಿಕ ಸ್ಮಾರಕಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆಯ ಕಾರ್ಮಿಕರಿಗೆ ಕಳೆದ 7 ತಿಂಗಳಿಂದ ವೇತನ ನೀಡದಿರುವುದನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕಾಯಂ ಅಲ್ಲದ ಕಾರ್ಮಿಕರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ಕನಿಷ್ಠ ವೇತನ ನೀಡಿ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ಕಾರ್ಮಿಕರು ಶಾಸನಾತ್ಮಕ ಸೌಲಭ್ಯಗಳಾದ ಕನಿಷ್ಠ ವೇತನ, ವೇತನ ಚೀಟಿ, ಭವಿಷ್ಯ ನಿಧಿ, ಇಎಸ್‌ಐ ಮತ್ತಿತರ ಸೌಲಭ್ಯಗಳನ್ನು ತಮಗೂ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. 

ಕೇಂದ್ರ ಸರ್ಕಾರದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಬೆಂಗಳೂರು ವಲಯದ ವ್ಯಾಪ್ತಿಗೊಳಪಡುವ ಹಾಸನ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ರಕ್ಷಣೆಯಲ್ಲಿ ಸುಮಾರು 25 ವರ್ಷಗಳಿಗಿಂತಲೂ ಅವಧಿ ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ ಯಲ್ಲಿ ನಿರಂತರವಾಗಿ ಕಾರ್ಮಿಕರು ದುಡಿಯುತ್ತಿದ್ದಾರೆ.

ಹಳೇಬೀಡು, ಬೇಲೂರು, ಸಕಲೇಶಪುರದ ಮಂಜರಾಬಾದ್‌ ಕೋಟೆ, ದೇವನಹಳ್ಳಿ ಕೋಟೆ, ಅಮೃತಪುರ, ಗೇರುಸೋಪ್ಪ, ಬೆಳವಾಡಿ, ದೊಡ್ಡಗದ್ದವಳ್ಳಿ, ಮುಂತಾದ ಕಡೆಗಳಲ್ಲಿ ದೇವಸ್ಥಾನದ ಹಾಳಾದ ಭಾಗಗಳನ್ನು ಪುನರ್‌ ಜೋಡಿಸಿ ಮತ್ತು ದುರಸ್ತಿ ಕಾರ್ಯಗಳಿಗೆ ರಾತ್ರಿ, ಹಗಲು ಪಾಳಿಯದಲ್ಲಿ ನಮ್ಮಿಂದ ಕೆಲಸ ಮಾಡಿಸುತ್ತಿದ್ದಾರೆ.

ಭಾರತೀಯ ಪುರಾತತ್ವ ಸವೇಕ್ಷಣಾ ಇಲಾಖೆಯು ಈ ಹಿಂದೆ ಇವರಿಗೆ ಬ್ಯಾಂಕ್‌ ಖಾತೆಯ ಮುಖಾಂತರ ತಿಂಗಳಿಗೆ 9,300 ರೂ. ವೇತನ ಜಮಾ ಮಾಡುತ್ತಿದ್ದರು. ಆದರೆ 2018ರ ಜನವರಿ ನಂತರ ಕಾರ್ಮಿಕರಿಗೆ ಬ್ಯಾಂಕ್‌ ಮುಖಾಂತರ ವೇತನ ಪಾವತಿಸದೆ ತಿಂಗಳಿಗೆ ಕೇವಲ 4 ಸಾವಿರರೂ. ಗಳ ನಗದು ಕೊಡಲಾಗುತ್ತಿತ್ತು ಕಳೆದ 7 ತಿಂಗಳಿಂದ ಅದನ್ನೂ ಕೊಟ್ಟಿಲ್ಲ ಎಂದು ದೂರಿದರು. 

Advertisement

ಕಾರ್ಮಿಕರಿಗೆ ಮೋಸ: ಸರ್ಕಾರದ ಕನಿಷ್ಠ ವೇತನದ ಆದೇಶಕ್ಕಿಂತ ಕಡಿಮೆ ವೇತನ ಪಾವತಿಸಲಾಗುತ್ತಿದೆ. ವೇತನವನ್ನು ಬ್ಯಾಂಕ್‌ ಮುಖಾಂತರ ಪಾವತಿಸದೆ ಕೈಗೆ ನಗದು ನೀಡಲಾಗುತ್ತಿದೆ. ವೇತನ ಚೀಟಿ ನೀಡುತ್ತಿಲ್ಲ . ಭಷ್ಯನಿಧಿ, ಇಎಸ್‌ಐ ಸೌಲಭ್ಯಗಳನ್ನ ಜಾರಿ ಮಾಡಿಲ್ಲ. ಕಾನೂನು ಪ್ರಕಾರ ನೀಡಬೇಕಾದ ಹಾಜರಾತಿ, ವಾರದ ರಜೆ ನೀಡುತ್ತಿಲ್ಲ. ಗುತ್ತಿಗೆದಾರರ ಹೆಸರಿನಲ್ಲಿ ಕಾರ್ಮಿಕರಿಗೆ ಮೋಸ ಮಾಡಲಾಗುತ್ತಿದೆ.

ದಿನದಲ್ಲಿ 8 ಗಂಟೆಗಳಿಗೂ ಅಧಿಕ ಕಾಲ ದುಡಿಸಿಕೊಳ್ಳಲಾಗುತ್ತಿದೆ. ಕೆಲವು ಕಾರ್ಮಿಕರನ್ನು ಅಕ್ರಮವಾಗಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ದೂರಿದರು. ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌, ಪ್ರಧಾನ ಕಾರ್ಯದರ್ಶಿ ಎಚ್‌.ಎನ್‌. ನಾಗರಾಜು, ಖಜಂಚಿ ಮಹದೇವ್‌, ಉಪಾಧ್ಯಕ್ಷ ಸೋಮಶೇಖರ್‌, ಅರವಿಂದ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next