ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮರಣೋತ್ತರ ಪರೀಕ್ಷೆ ಕುರಿತಾದ ವರದಿಯಲ್ಲಿ ಏಮ್ಸ್ ವೈದ್ಯರ ತಂಡವು ಮಂಗಳವಾರ ಸಿಬಿಐಗೆ ಸಲ್ಲಿಸಿದೆ. ಸುಶಾಂತ್‌ವಿಷ ಸೇವನೆಯಿಂದ ಮೃತಪಟ್ಟಿದ್ದಲ್ಲ ಎಂದು ವರದಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಆದರೆ, ಸುಶಾಂತ್‌ರದ್ದು ಆತ್ಮಹತ್ಯೆಯೋ, ಕೊಲೆಯೋ ಎಂಬುದನ್ನು ಈಗಲೇ ಹೇಳಲಾಗದು. ಈ ಕುರಿತು ಏಮ್ಸ್ ವೈದ್ಯಕೀಯ ಮಂಡಳಿ ಮತ್ತೂಂದು ಸುತ್ತಿನ ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದೂ ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಸುದ್ದಿವಾಹಿನಿಗಳು ವರದಿ ಮಾಡಿವೆ.
ಈ ಮಧ್ಯೆ, ಸುಶಾಂತ್ ಹಾಗೂ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಹಿಂದೆ ಬಾಲಿವುಡ್ ನಟ ಅರ್ಬಾಜ್ ಖಾನ್ ಕೈವಾಡವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದ ಕೆಲವರ ವಿರುದ್ಧ ಅರ್ಬಾಜ್ ಖಾನ್ ಮುಂಬೈನ ಸಿವಿಲ್ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.
ಇದೇ ವೇಳೆ, ರಿಯಾ ಚಕ್ರವರ್ತಿ ಹಾಗೂ ಸೋದರ ಶೋವಿಕ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ಬಾಂಬೆ ಹೈಕೋರ್ಟ್‌ನಲ್ಲಿ ನಡೆದಿದೆ.
ಇವರ ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಾದಕದ್ರವ್ಯ ನಿಯಂತ್ರಣಮಂಡಳಿ(ಎನ್‌ಸಿಬಿ), ಇವರು ಡ್ರಗ್ ಸಿಂಡಿಕೇಟ್‌ನ ಸಕ್ರಿಯ ಸದಸ್ಯರು ಎಂದುಕೋರ್ಟ್ ಗೆ ತಿಳಿಸಿದೆ.
ರಾಜ್ಯಪಾಲರಭೇಟಿ:ಈ ನಡುವೆ, ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ನಟಿ ಪಾಯಲ್ ಘೋಷ್ ಮಂಗಳವಾರ ರಾಜ್ಯಪಾಲ ಬಿ.ಎಸ್.ಕೋಶಿಯಾರಿ ಅವರನ್ನು ಭೇಟಿ ಮಾಡಿ, ಕಶ್ಯಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.