Advertisement

ಪ್ರಿಯಾಂಕ್ ಖರ್ಗೆ ಚಿತ್ತಾಪುರ ಶಾಸಕರಾ ಅಥವಾ ಸದಾಶಿವ ನಗರ ಶಾಸಕರಾ?: ಅರವಿಂದ ಚವ್ಹಾಣ ಪ್ರಶ್ನೆ

05:37 PM Feb 14, 2023 | Team Udayavani |

ಕಲಬುರಗಿ: ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆಯಲ್ಲ.‌ ಬದಲಾಗಿ ಹಲವರು ಶಾಸಕ ಸ್ಥಾನ ನಿಭಾಯಿಸುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಅರವಿಂದ ಚವ್ಹಾಣ ಆರೋಪಿಸಿದರು.

Advertisement

ಸರ್ಕಾರ ಹಾಗೂ ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ, ಶಿಷ್ಟಾಚಾರ ಬದಿಗೊತ್ತಿ ಚಿತ್ತಾಪುರ ಕ್ಚೇತ್ರದಲ್ಲಿ ನಡೆಯುವ ಸರ್ಕಾರಿ ಯೋಜನೆಗಳ ಶಂಕು ಸ್ಥಾಪನೆ, ಉದ್ಘಾಟನೆಗಳ ಅಧಿಕಾರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಪಂ ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಿಗೆ ನೀಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಸರ್ಕಾರದ ನಿಯಮಾವಳಿ ಪ್ರಕಾರ ಆಯಾ ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರೇ ವಹಿಸಬೇಕು. ಯಾವುದೇ ಸರ್ಕಾರಿ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಖಾಸಗಿ ವ್ಯಕ್ತಿಗಳನ್ನು ಬಿಡಿ ಸರ್ಕಾರಿ ಅಧಿಕಾರಿಗಳೇ ಮಾಡುವಂತಿಲ್ಲ ಎಂದಿದ್ದರೂ ಶಾಸಕರು ಬಹುತೇಕ ಕಾರ್ಯಕ್ರಮಗಳಿಗೆ ಗೈರು ಹಾಜರಾಗಿರುತ್ತಾರೆ ಎಂದು ಹಲವು ಉದಾಹರಣೆಗಳ ಸಮೇತ ವಿವರಣೆ ನೀಡಿದರು. ‌

ಶಾಸಕರು ಕ್ಷೇತ್ರವನ್ನು ಹಾಗೂ ಮತ ಹಾಕಿ ಗೆಲ್ಲಿಸಿದ ಜನರನ್ನು ಮರೆತು ಸದಾ ಬೆಂಗಳೂರಿನಲ್ಲೇ ಕುಳಿತು ಕಾಲ ಕಳೆಯುತ್ತಿದ್ದಾರೆ. ನಿಮಗೆ ಮತ ಹಾಕಿ ಶಾಸಕರನ್ನಾಗಿ ಮಾಡಿದ್ದು ಚಿತ್ತಾಪುರದ ಜನರೋ? ಸದಾಶಿವ ನಗರದ ಜನರೋ? ಎನ್ನುವಂತಾಗಿದೆ ಎಂದು ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ:ಕಾಂಗ್ರೆಸ್ ಗೆ ರಾಜಿನಾಮೆ ನೀಡಿದ್ದ ಪ್ರಭಾಕರ ಚಿಣಿ ಫೆ.15ರಂದು ಬಿಜೆಪಿ ಸೇರ್ಪಡೆ

Advertisement

ಮಾತೆತ್ತಿದ್ದರೆ ನಿಯಮ ಬಗ್ಗೆ ಮಾತನಾಡುವ ಶಾಸಕರು ಸರ್ಕಾರಿ ಕಾಮಗಾರಿಗಳ ಶಂಕು ಸ್ಥಾಪನೆ, ಗುದ್ದಲಿ ಪೂಜೆ ಹಾಗೂ ಉದ್ಘಾಟನೆಯ ಅಧಿಕಾರವನ್ನು ಕಾಂಗ್ರೆಸ್ ಮುಖಂಡರಿಗೆ ಕೊಟ್ಟಿದ್ಯಾರು? ಪ್ರಜಾಪ್ರಭುತ್ವ, ಸಂವಿಧಾನದ ಕುರಿತು ಉದ್ದುದ್ದ ಭಾಷಣ ಬಿಗಿಯುವ ಶಾಸಕರಿಗೆ ಇದು ಶಿಷ್ಟಚಾರದ ಉಲ್ಲಂಘನೆ ಎಂಬುದು ಗೊತ್ತಿಲ್ಲವೇ ಎಂದು ಕುಟುಕಿದರು.

ಕೆಲವು ದಿನಗಳ ಹಿಂದೆ ಚಿತ್ತಾಪುರದಲ್ಲಿ ಯಾವೊಬ್ಬ ಬಿಜೆಪಿ ಮುಖಂಡನನ್ನೂ ಓಡಾಡಲು ಬಿಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು.‌ ಅವರ ಈ ಹೇಳಿಕೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರುದ್ಧ ಅಲ್ಲವೇ? ಇವರೇನು ರಿಪಬ್ಲಿಕ್ ಆಪ್ ಚಿತ್ತಾಪುರ ಮಾಡಲು ಹೊರಟಿದ್ದಾರೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಮುಖಂಡರಾದ ಭೀಮಣ್ಣಾ ಸೀಬಾ, ಅವಿನಾಶ ಅರಳಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next