Advertisement

ಎಲ್ಲರ ಅಭಿಪ್ರಾಯ ಪಡೆಯಿರಿ : ದಿಲ್ಲಿಯಲ್ಲಿ ಅರುಣ್‌ ಸಿಂಗ್‌ಗೆ ಬೆಲ್ಲದ ಮನವಿ

02:14 AM Jun 15, 2021 | Team Udayavani |

ಬೆಂಗಳೂರು : ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಬೆಂಗಳೂರು ಭೇಟಿ ಸಮೀಪಿಸುತ್ತಿರುವಂತೆಯೇ ಸಿಎಂ ಪರ -ವಿರೋಧಿ ಬಣದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಎಲ್ಲ ಶಾಸಕರ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಪಡೆದು ವರಿಷ್ಠರಿಗೆ ವರದಿ ನೀಡಿ ಎಂದು ಭಿನ್ನಮತೀಯರ ತಂಡ ಮನವಿ ಮಾಡಿದೆ.

Advertisement

ಹೊಸದಿಲ್ಲಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿದ ಶಾಸಕ ಅರವಿಂದ ಬೆಲ್ಲದ, ಎಲ್ಲ ಶಾಸಕರ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಪಡೆದು ವರಿಷ್ಠರಿಗೆ ವರದಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮೂರು ದಿನಗಳ ಹಿಂದೆ ಖಾಸಗಿ ಕಾರ್ಯದ ನೆಪದಲ್ಲಿ ದಿಲ್ಲಿಗೆ ದೌಡಾಯಿಸಿದ್ದ ಅರವಿಂದ ಬೆಲ್ಲದ, ಆರೆಸ್ಸೆಸ್‌ ನಾಯಕರು ಮತ್ತು ಬಿಜೆಪಿಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ.

ಅಧಿಕೃತ ಸಭೆ ಇಲ್ಲ?
ಅರುಣ್‌ ಸಿಂಗ್‌ ಜೂ. 16ರಂದು 3 ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಶಾಸಕರ ಜತೆಗೆ ಅಧಿಕೃತ ಸಭೆ ಇರುವುದಿಲ್ಲ. ಶಾಸಕಾಂಗ ಸಭೆ ಕರೆಯುವಂತೆ ಸಿಎಂಗೆ ಸೂಚಿಸಿ ಎಂದು ಬಹುತೇಕ ಶಾಸಕರು ಸಿಂಗ್‌ ಅವರಿಗೆ ಮನವಿ ಮಾಡಿದ್ದಾರೆ. ಆದರೂ ಅಧಿಕೃತ ಶಾಸಕಾಂಗ ಸಭೆ ಕರೆಯುವ ಸಾಧ್ಯತೆ ಕಡಿಮೆ. ಅರುಣ್‌ ಸಿಂಗ್‌ ಜೂ. 15ರಂದು ಸಚಿವರ ಜತೆಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸೋಂಕು ನಿಯಂತ್ರಣಕ್ಕೆ ಸಚಿವರು ಕೈಗೊಂಡ ಕ್ರಮಗಳ ಮಾಹಿತಿ ಪಡೆಯಲಿದ್ದಾರೆ. ಸಂಪುಟ ಪುನಾ ರಚನೆಗೆ ತೀರ್ಮಾನಿಸಿದರೆ ಸ್ಥಾನ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂಬ ಸಂದೇಶ ನೀಡುವ ಸಾಧ್ಯತೆ ಇದೆ. ಜೂ. 18ರಂದು ಬಿಜೆಪಿ ರಾಜ್ಯ ಘಟಕದ ಕೋರ್‌ ಕಮಿಟಿ ಸಭೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next