Advertisement
ಪ್ರಪಂಚ ತುಂಬಾ ವಿಶಾಲವಾಗಿದೆ. ನಾವು ನಮಗೆ ಮನಸ್ಸು ಬಂದಾಗ, ಬೇಕೆನಿಸಿದ ಕಡೆ ಹೋಗುತ್ತೇವೆ. ಸ್ವೇಚ್ಛೆಯನ್ನು ಅನುಭವಿಸುತ್ತೇವೆ. ಬೋರಾದರೆ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡುತ್ತೇವೆ, ಉದ್ಯಾನವನಕ್ಕೆ ತೆರಳುತ್ತೇವೆ. ಗ್ರಂಥಾಲಯದಲ್ಲಿ ಪುಸ್ತಕ ಓದುತ್ತೇವೆ. ದೇವಾಲಯದಲ್ಲಿ ದೇವರ ಆಶೀರ್ವಾದಕ್ಕೆ ಪಾತ್ರರಾಗುತ್ತೇವೆ. ಸಾಹಿತ್ಯ- ನಾಟಕ- ನೃತ್ಯ ಮನರಂಜನಾ ಕಾರ್ಯಕ್ರಮಗಳಿಗೆ ವಿಸಿಟ್ ಕೊಡುತ್ತೇವೆ. ಸ್ನೇಹಿತರೊಂದಿಗೆ ರೆಸ್ಟೋರೆಂಟಿನಲ್ಲಿ ಹರಟುತ್ತೇವೆ, ಬಿಗ್‌ಬಜಾರ್‌ನಲ್ಲಿ ಮನೆಗೆ ಅಗತ್ಯವಾದ ಸಾಮಾನುಗಳನ್ನು ಸರದಿ ಸಾಲಿನಲ್ಲಿ ನಿಂತು ಖರೀದಿಸಿ ತರುತ್ತೇವೆ. ಬೆಂಗಳೂರಿನಲ್ಲಿ ವಾಸಿಸುವ ಮಂದಿಯ ನಾರ್ಮಲ್ ಬದುಕು ಇವಿಷ್ಟೂ ಸ್ಥಳಗಳನ್ನು ಒಳಗೊಂಡಿದೆ.
ಪ್ರಾಜೆಕ್ಟ್ ಹುಟ್ಟಿದ ಕತೆ
Related Articles
Advertisement
ಕ್ಯಾನ್‌ವಾಸ್ ಆದ ಬೆಂಗಳೂರಿನ ಗೋಡೆಗಳು
ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ನಲ್ಲಿ ಮೊದಲ ಪೇಂಟಿಂಗ್ ಸಿದ್ಧವಾಯಿತು. ನಂತರ ಮೆಜೆಸ್ಟಿಕ್ ಹತ್ತಿರದ ಧನ್ವಂತರಿ ಬ್ರಿಜ್, ಫ್ರೀಡಂ ಪಾರ್ಕ್‌ನ ಮುಂಭಾಗದ ಗೋಡೆ ಹಿಜಡಾ ಸಮುದಾಯದ ಸ್ಫೂರ್ತಿಗೆ ಸಾಕ್ಷಿಯಾಗಿದೆ. ಒಂದೊಂದು ಗೋಡೆಯ ಮೇಲೆ ಚಿತ್ರ ರಚಿಸಲು ವಾರಗಳಷ್ಟು ಸಮಯ ತಗುಲುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ಅವಿಸ್ಮರಣೀಯ ಘಟನೆಗಳು ಜರುಗಿವೆ ಎಂದು ಪೂರ್ಣಿಮಾ ಅವರು ನೆನಪಿಸಿಕೊಳ್ಳುತ್ತಾರೆ. ಚಿತ್ರ ರಚಿಸುವಾಗ ಸಾರ್ವಜನಿಕರು ಕುತೂಹಲದಿಂದ ನಿಂತು ಹಿಜಡಾಗಳೊಂದಿಗೆ ಸಂವಹನದಲ್ಲಿ ತೊಡಗಿದ್ದು ಅವುಗಳಲ್ಲೊಂದು. ಅಂದಹಾಗೆ, ಅರವನಿ ಪ್ರಾಜೆಕ್ಟ್‌ನಲ್ಲಿ ಸ್ವಯಂಸೇವಕರಾಗಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು.
ಅರವನಿ ಎಂದರೆ ಯಾರು ಗೊತ್ತಾ?ಉಪಕಥೆಯೊಂದರ ಪ್ರಕಾರ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಗೆಲ್ಲಬೇಕೆಂದರೆ ಅವರಲ್ಲೊಬ್ಬ ಪುರುಷಕುಮಾರ ಒಂದು ರಾತ್ರಿಯ ಮಟ್ಟಿಗೆ ಶೀಲವನ್ನು ಕಳೆದುಕೊಳ್ಳಬೇಕು ಎಂದು ನಿಶ್ಚಯವಾಗುತ್ತದೆ. ಆ ಸಮಯದಲ್ಲಿ ತನ್ನವರ ಗೆಲುವಿಗಾಗಿ ಇಂಥ ಒಂದು ತ್ಯಾಗಕ್ಕೆ ಮುಂದಾದವನು ಅರವನ್. ಆ ರಾತ್ರಿಯನ್ನು ಅವನ ಜೊತೆಯಲ್ಲಿ ಕಳೆದಿದ್ದು ಮೋಹಿನಿ ರೂಪದಲ್ಲಿದ್ದ ಶ್ರೀಕೃಷ್ಣ.. ಅರವನ್, ಮೋಹಿನಿ ಜೊತೆ ಕಳೆದ ಆ ಒಂದು ರಾತ್ರಿಯನ್ನು ತಮಿಳುನಾಡಿನಲ್ಲಿ ಕೂವಗಂ ಹಬ್ಬವಾಗಿ ಆಚರಿಸುತ್ತಾರೆ. ದೇಶದ ಅಸಂಖ್ಯ ಹಿಜಡಾಗಳು ಅಂದು ಅಲ್ಲಿ ಸೇರುತ್ತಾರೆ. ಮದುವೆ ಒಂದು ರಾತ್ರಿಯ ಮಟ್ಟಿಗಾದುದರಿಂದ ಮರುದಿನ ಬೆಳಗ್ಗೆ ಹಿಜಡಾಗಳು ಬಿಳಿ ಸೀರೆಯುಟ್ಟುಕೊಂಡು, ಬಳೆಗಳನ್ನು ಒಡೆದುಕೊಂಡು ಸಂಜೆವರೆಗೆ ಶೋಕ ಆಚರಿಸುವರು. ಇವರನ್ನು ದೇವ ಅರವನ್‌ನ ವಿಧವೆಯರು, ಅಂದರೆ ಅರವನಿಗಳೆಂದು ಕರೆಯಲಾಗುತ್ತದೆ. ಇಷ್ಟಕ್ಕೂ ಪಾಂಡವ ಸೈನ್ಯದಲ್ಲಿದ್ದ ಅರವನ್ ಬೇರೆ ಯಾರೂ ಅಲ್ಲ, ಅರ್ಜುನನ ಮಗ. ಯಾರಾದರೂ ನಮಗೆ ಸಹಾಯ ಮಾಡಿದರೆ ನಾವು ಖುಷಿ ಪಡುತ್ತೇವೆ. ಆದರೆ, ಹಿಜಡಾಗಳು ಖುಷಿ ಪಡುವುದಿಲ್ಲ, ಸಹಾಯ ಮಾಡಿದವರನ್ನು ಅನುಮಾನದ ದೃಷ್ಟಿಯಲ್ಲಿ ನೋಡುತ್ತಾರೆ. ಅವರ ಜೀವನದಲ್ಲಿ ಒಳ್ಳೆಯದೇನೂ ನಡೆಯುವುದಿಲ್ಲ. ನಡೆದರೂ ಅದನ್ನು ನಂಬದ ಸ್ಥಿತಿಯಲ್ಲಿರುತ್ತಾರೆ. ಅದು ಅವರು ಬೆಳೆದು ಬಂದ ಪರಿಸರದ ಪ್ರಭಾವ. ಹೀಗಾಗಿ ನಾನು ಅವರ ವಿಶ್ವಾಸ ಗಳಿಸಲು ಹರಸಾಹಸ ಪಡಬೇಕಾಯ್ತು. ಅದಕ್ಕೆ ಅನೇಕ ವರ್ಷಗಳೇ ಹಿಡಿದವು.
– ಪೂರ್ಣಿಮಾ ಸುಕುಮಾರ್ ಹರ್ಷವರ್ಧನ್ ಸುಳ್ಯ