Advertisement

ಪ್ರಗತಿಪರ ಸಾಧನೆಗಳ ಸರದಾರ ಅರಸು

06:08 AM Jun 08, 2020 | Lakshmi GovindaRaj |

ಹುಣಸೂರು: ದೇಶದಲ್ಲಿ ಸಾಮಾಜಿಕ ಕ್ರಾಂತಿ ಉಂಟು ಮಾಡಿದ, ಪ್ರಗತಿಪರ ಸಾಧನೆಗಳ ಸರದಾರ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಎಂದು ಶಾಸಕ ಮಂಜುನಾಥ್‌ ಹೇಳಿದರು. ಜನಪರ ಆಡಳಿತದ ವೈಖರಿ ಹಾಗೂ ಅವರ  ಹೋರಾಟದ ಬದುಕಿನ ಬಗ್ಗೆ ಇಂದಿನ ಯುವ ಪೀದೇವರಾಜ ಅರಸರ 38ನೇ ಪುಣ್ಯಸ್ಮರಣೆ ಅಂಗವಾಗಿ ನಗರದಲ್ಲಿ ಅರಸು ಪುತ್ಥಳಿಗೆ ಮಾಲಾರ್ಪಣೆಳಿಗೆ ಅರಿತುಕೊಳ್ಳಬೇಕು ಸಲಹೆ ನೀಡಿದರು.

Advertisement

ನಗರದಲ್ಲಿ ದೇವರಾಜ ಅರಸರ 38ನೇ  ಪುಣ್ಯಸ್ಮರಣೆ ಅಂಗವಾಗಿ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಶಾಸಕರು, ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಯವರ 20 ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು ಕ್ರಾಂತಿಕಾರಿ ಬದಲಾವಣೆಗೆ ಕೊಡುಗೆ ನೀಡಿದ ದೇಶದ ಏಕೈಕ ಮುಖ್ಯಮಂತ್ರಿ ಅರಸು. ಅವರ ಆಡಳಿತಾವ ಧಿಯಲ್ಲಿ ಶೋಷಿತ ಸಮಾಜಗಳಿಗೆ ರಾಜಕೀಯ ಧ್ವನಿ ನೀಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಬಳಿಕ ದೇವರಾಜ ಅರಸು ಅದೇ ಮಾದರಿಯಲ್ಲಿ ಆಡಳಿತ  ನಡೆಸಿದರೆಂದರು.

ಕೆರೆಗಳಿಗೆ ನೀರು: ಲಕ್ಷ್ಮಣ ತೀರ್ಥ ನದಿಯಿಂದ ತಾಲೂಕಿನ 47 ಕೆರೆಗಳಿಗೆ ಮರದೂರು ಏತ ನೀರಾವರಿ ಯೋಜನೆಯಿಂದ ನೀರು ಹರಿಸುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು. ಇದೇ ವೇಳೆ ಅರಸರ ಬದುಕು, ಆಡಳಿತದ  ಕುರಿತು ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪುಸ್ತಕ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಗೌರಮ್ಮ, ತಾಪಂ ಅಧ್ಯಕ್ಷೆ ಪದ್ಮಮ್ಮ, ನಗರಸಭಾ ಸದಸ್ಯ ಮನು, ಉಪ  ವಿಭಾಗಾ ಧಿಕಾರಿ ವೀಣಾ, ತಹಶೀಲ್ದಾರ್‌ ಬಸವರಾಜ್‌, ಪೌರಾಯುಕ್ತ ಮಂಜುನಾಥ್‌, ಡಿವೈಎಸ್ಪಿ ಸುಂದರರಾಜ್‌, ಬಿಸಿಎಂ ಅ ಧಿಕಾರಿ ಪ್ರೇಮಕುಮಾರ್‌, ಶಿವಶಂಕರ್‌ ಚಿಕ್ಕವಡ್ಗಲ್‌, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಬಸವರಾಜೇಗೌಡ,  ಕೆಂಪೇಗೌಡ, ರಾಘು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next