Advertisement

ಫೆ. 1 ರಿಂದ ಹಳೇಬೀಡಲ್ಲಿ ತರಳಬಾಳು ಹುಣ್ಣೆಮೆ ಸಂಭ್ರಮ

06:46 PM Jan 01, 2020 | Naveen |

ಅರಸೀಕೆರೆ: ಶಿಲ್ಪಕಲೆಯ ನಾಡು ಬೇಲೂರು ತಾಲೂಕಿನ ಹಳೇಬೀಡು ಗ್ರಾಮದಲ್ಲಿ ಫೆ. 1 ರಿಂದ 9 ರವರೆಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಧಾರ್ಮಿಕ ಸಮಾರಂಭ ಭಕ್ತ ಸಮೂಹದ ತನು, ಮನ, ಧನ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

Advertisement

ನಗರದ ಜೇನುಕಲ್‌ ಕ್ರೀಡಾಂಗಣದ ಸಮೀಪದಲ್ಲಿರುವ ಅನುಭವ ಮಂಟಪ ಶಾಲೆಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಭಕ್ತಾದಿಗಳಿಗೆ ಆರ್ಶೀವಚನ ನೀಡಿದರು.

ನಾವು ಮಾಡುವ ದಾನ, ಧರ್ಮಗಳು ಸತ್ಕಾರ್ಯಗಳಿಗೆ ಸಲ್ಲುತ್ತದೆ ಎಂದು ಭಕ್ತರಿಗೆ ಅರಿವು ಉಂಟಾದರೆ ತಮ್ಮ ಶಕ್ತಿಯನ್ನು ಮೀರಿ ತುಂಬು ಹೃದಯದಿಂದ ಸಹಕಾರ ನೀಡುತ್ತಾರೆ ಎನ್ನುವುದಕ್ಕೆ ಶ್ರೀಮಠ ಪ್ರತಿ ವರ್ಷ ನಡೆಸುವ ತರಳಬಾಳು ಹುಣ್ಣಿಮೆ ಉತ್ಸವ ಸಾಕ್ಷೀಯಾಗಿದೆ ಎಂದರು.

ಫೆ. 1ರಿಂದ 9 ರವರೆಗೂ ಹಳೇಬೀಡಿನಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಸಮಾರಂಭಕ್ಕೆ ನಿಧಿ ಸಂಗ್ರಹಣೆಗೆ ಬಂದಿರುವ ಸಂಗತಿ ಗೊತ್ತಿದ್ದರೂ ಭಕ್ತ ಸಮೂಹ ಆಗಮಿಸಿ ತಮ್ಮ ಶಕ್ತಿ ಮೀರಿ ನಿಧಿ ಸಂಗ್ರಹಣೆಗೆ ಮುಂದಾಗಿರುವುದು ತಾವೆಲ್ಲರೂ ಶ್ರೀಮಠದ ಮೇಲಿನ ಹಾಗೂ ಜಗದ್ಗುರುಗಳ ಮೇಲಿಟ್ಟಿರುವ ಭಕ್ತಿಗೆ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.

ಇತ್ತೀಚಿನ ಆಧುನಿಕ ಯುಗದಲ್ಲಿ ಮನುಷ್ಯನಲ್ಲಿ ಪರಸ್ಪರ ಸ್ನೇಹ ,ವಿಶ್ವಾಸ, ನಂಬಿಕೆ ಮರೆಯಾಗಿ ಸ್ವಾರ್ಥ ಮನೋಭಾವನೆಗಳು ಹೆಚ್ಚು ಬೆಳೆಯುತ್ತಿರುವ ಕಾರಣ ಕೌಟುಂಬಿಕ ಬದುಕು ದುಸ್ತರವಾಗುತ್ತಿದೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮಠಮಾನ್ಯಗಳ ಆದ್ಯ ಕರ್ತವ್ಯವಾಗಿದ್ದು, ಕೌಟುಂಬಿಕ ಜೀವನದಲ್ಲಿ ಆಧ್ಯಾತ್ಮಿಕತೆ ಚಿಂತನೆ ಮೂಡಿಸಲು ತರಳಬಾಳು ಹುಣ್ಣಿಮೆಯನ್ನು ಶ್ರೀಮಠ ಆಯೋಜನೆ ಮಾಡುತ್ತಿದೆ.

Advertisement

ಈ ಸಮಾರಂಭದಲ್ಲಿ ಜಾತಿ ಧರ್ಮ ಭೇದ-ಭಾವವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಸಮಾರಂಭವನ್ನು ಅರ್ಥಪೂರ್ಣವಾಗಿ ನಡೆಸಲು ಹಾಗೂ ಭಾರತೀಯ ಸಂಸ್ಕೃತಿಯ ಗುರು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಸಹಕಾರ ನೀಡಬೇಕೆಂದು ತಿಳಿಸಿದರು.

ಸಭೆಯಲ್ಲಿ ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಚ್‌.ಜಿ. ರೇವಣ್ಣ, ಸ್ವಾತಂತ್ರ್ಯ ಹೋರಾಟಗಾರ ನೇರ್ಲಿಗೆ ಬಸವರಾಜು, ಜಿಪಂ ಸದಸ್ಯರಾದ ಮಾಡಾಳು ಸ್ವಾಮಿ, ಹಳೇಬೀಡು ಮಂಜುನಾಥ್‌, ಸಮಾಜದ ಮುಖಂಡರಾದ ಜಿ.ವಿ.ಬಸವರಾಜ್‌, ಅಗ್ಗುಂದ ಶೇಖರಣ್ಣ, ಸಾಹಿತಿ ಚಟ್ನಹಳ್ಳಿ ಮಹೇಶ್‌, ವಿರೂಪಾಕ್ಷಪ್ಪ, ರಮೇಶ್‌, ಅಣ್ಣನಾಯಕನಹಳ್ಳಿ ವಿಜಯ್‌ಕುಮಾರ್‌, ಜಿ.ಬಿ ಶಶಿಧರ್‌, ಕಲ್ಲಳ್ಳಿ ನಾಗರಾಜ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಭಕ್ತಾದಿಗಳು ಸ್ವಯಂಪ್ರೇರಿತರಾಗಿ 10 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸಮಾರಂಭಕ್ಕೆ ನೀಡುವುದಾಗಿ ವಾಗ್ಧಾನ ಮಾಡಿದರು. ಸ್ಥಳದಲ್ಲಿಯೇ 30 ಸಾವಿರ ರೂ.ಗಳನ್ನು ಶ್ರೀಗಳಿಗೆ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next