Advertisement
ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಸಿ.ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯ ವೆಂಕಟಮುನಿ, ಜೆಡಿಎಸ್ ಸದಸ್ಯರಾದ ಎಂ.ಸಮೀವುಲ್ಲ, ಜಿ.ಟಿ. ಗಣೇಶ್, ಕೆ.ಎಂ.ಈಶ್ವರಪ್ಪ, ಅನ್ನಪೂರ್ಣ, ಮದುರಾ ಹರೀಶ್, ಶುಭ ಮನೋಜ್, ಪ್ರೇಮಾ ಮಾತನಾಡಿದರು. ನಮ್ಮ ವಾರ್ಡ್‌ಗಳಲ್ಲಿ ಕುಡಿಯುವ ನೀರು, ಬೀದಿ ದೀಪ, ಒಳಚರಂಡಿ ವ್ಯವಸ್ಥೆ, ಪರಿಸರ ಸ್ವಚ್ಛತೆ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ನಗರಸಭೆ ಸದಸ್ಯರ ಮಾತು ಕೇಳು ತ್ತಿಲ್ಲ. ಫೋನ್ ಮಾಡಿದರೂ ಉತ್ತರ ನೀಡಲ್ಲ ಎಂದು ಕಿಡಿಕಾರಿದರು.
Related Articles
Advertisement
ಸಮಸ್ಯೆಗೆ ಸಲಹೆ: ಯಾದಾಪುರ ರಸ್ತೆಯಲ್ಲಿನ ಹಮಾಲಿಗಳ ವಸತಿ ಗೃಹಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಕೊಂಡು ಅಭಿವೃದ್ಧಿ ಪಡಿಸಬೇಕು. ಜೇನುಕಲ್ ನಗರ ಹಾಗೂ ವೃಷಬೇಂದ್ರ ನಗರದಲ್ಲಿ ಈ ಹಿಂದೆ ನಗರಸಭೆ ವತಿಯಿಂದ ವಸತಿ ರಹಿತರಿಗೆ ನೀಡಿದ್ದ ನಿವೇಶನ ಬೇನಾ ಮಿ ಹೆಸರಿನಲ್ಲಿ ಇನ್ನೂ ಖಾಲಿ ಬಿದ್ದಿರುವ ಕಾರಣ ಅವುಗಳ ವಾರಸುದಾರರಿಗೆ ನೋಟಿಸ್ ನೀಡಿ ನಂತರ ಕಾನೂನಿನಂತೆ ಕ್ರಮಕೈಗೊ ಂಡು ವಸತಿ ರಹಿತ ಫಲಾನುಭವಿಗಳಿಗೆ ವಿತರಿಸಲು ತ್ವರಿತವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಯಿಂದ ಸ್ವಲ್ಪ ಹಾನಿಯಾದ ಮನೆಯ ದುರಸ್ತಿಗೆ 90 ಸಾವಿರ ಅನುದಾನ ನೀಡಲಾಗಿದೆ. ಆದರೆ, ಸಂಪೂರ್ಣವಾಗಿ ಹಾಳಾದ ಮನೆಗೆ 50 ಸಾವಿರ ರೂ.ನೀಡಲಾಗಿದೆ. ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸದಸ್ಯ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭಾ ಸದಸ್ಯರಾದ ಇ.ಎಂ.ರಾಜಶೇಖರ್ ಅವರ ಹೆಸರಿನಲ್ಲಿ ಮಾಡಿರುವ ಲೇಔಟ್‌ನಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ, ಹಾಗೂ ಉದ್ಯಾನ ವನಕ್ಕೆ ಜಾಗ ಬಿಟ್ಟಿಲ್ಲ. ಆದ್ದರಿಂದ ಖಾತೆ ರದ್ದು ಪಡಿಸಬೇಕು ಎಂದು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ರಾದ ಸೈಯದ್ ಸಿಕಂದರ್ ಅರ್ಜಿ ಸಲ್ಲಿಸಿರುವ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಸಮೀವುಲ್ಲ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪೌರಾಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ದೂರು ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರಾ? ಉದ್ಯಾನವನದ ಜಾಗ ಅವರು ಬಿಟ್ಟಿಲ್ಲವೇ ಮೂಲ ಸೌಕರ್ಯವನ್ನು ಕಲ್ಪಿಸಿಲ್ಲವೇ ಎಂದು ಪ್ರಶ್ನಿಸಿದರು.
ದುರುದ್ದೇಶ ಪೂರಕವಾಗಿ ನೀಡಿರುವ ಅರ್ಜಿಯನ್ನ ಸಭೆಗೆ ತಂದು ಚುನಾಯಿತ ಸದಸ್ಯರ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಆಕ್ಷೇಪಿಸಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಕಾಂತೇಶ್ ಹಾಗೂ ಪೌರಾಯು ಕ್ತರಾದ ಕೇಶವ ಚೌಗಲೆ ವ್ಯವಸ್ಥಾಪಕರಾದ ಕಲಾವತಿ ಅಧಿಕಾರಿಗಳು ಉಪಸ್ಥಿತರಿದ್ದರು.