ಭಟ್ಕಳ: ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆಯ ವತಿಯಿಂದ ಭಟ್ಕಳದಲ್ಲಿ ಹಮ್ಮಿಕೊಂಡಿದ್ದ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿದ ಜಾಗೃತಿ ಜಾಥಾ ಅತ್ಯಂತ ಯಶಸ್ವೀಯಾಗಿ ನಡೆಯಿತು.
ಬೆಳಿಗ್ಗೆ ಇಲ್ಲಿನ ಪ್ರವಾಸಿ ಬಂಗಲೆಯ ಆವರಣದಿಂದ ಆರಂಭವಾದ ಜಾಥಾದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಜನ ಅತಿಕ್ರಮಣದಾರರು ಭಾಗವಹಿಸಿದ್ದು ರಾಷ್ಟ್ರೀಯ ಹೆದ್ದಾರಿ ಮೂಲಕ ನವಾಯತ ಕಾಲೋನಿಯಲ್ಲಿರುವ ಸಭಾ ಭವನವನ್ನು ತಲುಪಿತು.
ಜಾಥಾ ಹೊರಡುವ ಪೂರ್ವದಲ್ಲಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯವಾಸಿಗಳನ್ನ ಉಳಿಸಿ-ಜಾಥಕ್ಕೆ ಸಂಘನೆಯ ಭಾವುಟವನ್ನ ಪ್ರದರ್ಶಿಸುತ್ತಾ ಚಾಲನೆ ನೀಡಿ ಮಾತನಾಡಿ ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ವ್ಯಾಪಕ ಜಾಗೃತ ಮೂಡಿಸುವ ಹಾಗೂ ಸರಕಾರ ಅರಣ್ಯವಾಸಿಗಳ ಸಮಸ್ಯೆಗೆ ಸ್ಫಂದಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳನ್ನ ಉಳಿಸಿ- ಜಾಥವು ಭಟ್ಕಳ ತಾಲೂಕಿನಲ್ಲಿ ಯಶಸ್ವಿಯಾಗಿದ್ದು ಜನರು ಸರಕಾರದ ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದರು.
ರಾಜ್ಯ ಮಟ್ಟದ ಕಾರ್ಯಕ್ರಮದ ಅಂಗವಾಗಿ ಪ್ರಥಮ ಹಂತದಲ್ಲಿ ಜಿಲ್ಲೆಯಲ್ಲಿ ಹತ್ತುಸಾವಿರ ಕೀ.ಮೀ ಸಂಚರಿಸುವ ಹೋರಾಟ ವಾಹಿನಿ 500 ಹಳ್ಳಿಗಳಿಗೆ 30 ದಿನಗಳಲ್ಲಿ ತಿರುಗಾಟಮಾಡಲಿದ್ದು, ಅರಣ್ಯವಾಸಿಗಳ ಹಳ್ಳಿಗಳಲ್ಲಿ ಹೋರಾಟ ವಾಹಿನಿ ಮೂಲಕ ಕಾನೂನು ಜಾಗೃತೆ ಮೂಡಿಸುವ ಕಾರ್ಯಕ್ರಮವು ಭಟ್ಕಳ ತಾಲೂಕಿನಾದ್ಯಂತ ಅರಣ್ಯವಾಸಿಗಳಲ್ಲಿ ಸಂಚಲನ ಮೂಡಿಸಲು ಯಶಸ್ವಿಯಾಗಿದೆ ಎಂದರು.
ಇದನ್ನೂ ಓದಿ : 50 ಲಕ್ಷ ಅಕ್ರಮದ ವಾಸನೆ ; ಸಭಾ ನಡಾವಳಿಗೆ ಆಗ್ರಹಿಸಿ ಸದಸ್ಯರ ಧರಣಿ
ಜಾಥದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರಂಗ ನಾಯ್ಕ ಬೆಳಕೆ, ಹಿರಿಯ ಧುರೀಣರಾದ ಇನಾಯತ ಸಾಬಂದ್ರಿ, ರಿಜವಾನ, ಖಯೂಮ್, ಚಂದ್ರು ನಾಯ್ಕ ಕಾರಗದ್ದೆ, ತಂಜೀಮ್ ಅಧ್ಯಕ್ಷ ಎಸ್.ಎಂ.ಫರವೇಜ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್, ಜಾಸೀಬ್ ಬ್ಯಾರಿ, ಖಯೂಮ್ ಕೋಲಾ, ನಜೀರ್ ಖಾಶಿಮ್‍ಜಿ, ಶಿವು ಮರಾಠಿ, ರುಕ್ಯ ಮರಾಠಿ, ಸೋಮಯ್ಯ ಗೊಂಡ, ಫರಿದಾ ಬಾನು, ಲಕ್ಷ್ಮೀ, ಶಾಂತಿ ಮೋಗೇರ್, ಸುಬ್ಬಯ್ಯ ಗೊಂಡ ಮುಂತಾದವರು ನೇತೃತ್ವ ವಹಿಸಿದ್ದರು.