Advertisement

ಅರಂತೊಟು: ಅಪರೂಪದ ಸಾರಿಬಾಳ ಹಾವು ರಕ್ಷಣೆ

02:53 PM Dec 07, 2022 | Team Udayavani |

ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಅರಂತೊಟ್ಟು ಎಂಬಲ್ಲಿ ಅಪರೂಪದ ಸಾರಿಬಾಳ (ಫಾರೆಸ್ಟ್‌ ಕ್ಯಾಟ್‌ ಸ್ನೇಕ್‌) ಹಾವು ಪತ್ತೆಯಾಗಿದ್ದು ಇದನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ. ಇಲ್ಲಿನ ದೀಪಕ್‌ ಎಂಬುವರ ಮನೆಯಲ್ಲಿ ಸುಮಾರು 5 ಅಡಿ ಉದ್ದದ ಸಾರಿಬಾಳ ಹಾವು ಕೋಳಿಯನ್ನು ನುಂಗುತ್ತಿದ್ದ ಸಮಯ ಅದನ್ನು ಕಂಡ ಮನೆಯವರು ಉರಗಮಿತ್ರ ಸ್ನೇಕ್‌ ಅಶೋಕ್‌ ಲಾೖಲ ಅವರಿಗೆ ಮಾಹಿತಿ ನೀಡಿದ್ದಾರೆ.ಅವರು ಅದನ್ನು ರಕ್ಷಿಸಿದ್ದಾರೆ.

Advertisement

ಫಾರೆಸ್ಟ್‌ ಕ್ಯಾಟ್‌ಸ್ನೇಕ್‌ (ಸಾರಿಬಾಳ) ಹೆಚ್ಚಾಗಿ ಗುಜರಾತ್‌, ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ ಕಾಡುಗಳಲ್ಲಿ ಕಂಡು ಬರುತ್ತದೆ. ಇವು ಜನವಸತಿ ಪ್ರದೇಶದಲ್ಲಿ ಕಂಡುಬರುವುದು ತೀರಾ ವಿರಳ. ರಾತ್ರಿ ಸಮಯ ಹೆಚ್ಚಿನ ಸಂಚಾರ ನಡೆಸುವ ಇವುಗಳ ಪ್ರಮುಖ ಆಹಾರ ಸಣ್ಣ ಪಕ್ಷಿ, ಮೊಟ್ಟೆ,ಇಲಿ, ಬಾವಲಿ ಇತ್ಯಾದಿಯಾಗಿದೆ.

ಇವುಗಳಲ್ಲೂ ಎರಡು ಪ್ರಭೇದಗಳಿದ್ದು ಬೂದು ಬಣ್ಣ ಹಾಗೂ ಕಪ್ಪು ಚುಕ್ಕೆ, ಇನ್ನೊಂದು ಪ್ರಭೇದ ಕಪ್ಪು ಚುಕ್ಕೆಗಳೊಂದಿಗೆ ತಿಳಿಕೆಂಪು, ಕಂದು ಬಣ್ಣವನ್ನು ಹೊಂದಿರುತ್ತದೆ. ಇದು ವಿಷ ರಹಿತ ಹಾವಾಗಿದೆ ಎಂದು ಅಶೋಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next