Advertisement

‘ನೀರಿನ ಅಭಾವ ತಡೆಗೆ ಸಹಕರಿಸಿ’

06:44 AM Feb 25, 2019 | Team Udayavani |

ವೇಣೂರು: ಆರಂಬೋಡಿ ಗ್ರಾ.ಪಂ.ನ 2018-19ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಗುಂಡೂರಿಯ ತುಂಬೆದ ಲೆಕ್ಕಿ ಶ್ರೀ ಸತ್ಯನಾರಾಯಣ ಭಜನ ಮಂದಿರದ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಎಚ್‌. ಮಾತನಾಡಿ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಹದಗೆಟ್ಟ ರಸ್ತೆಗಳಿಗೆ ಈಗಾಗಲೇ ಶಾಸಕರು ಅನುದಾನ ಒದಗಿಸಿದ್ದು, ದುರಸ್ತಿ ಕಾಮಗಾರಿ ಪ್ರಾರಂಭಗೊಂಡಿದೆ. ಕುಡಿಯುವ ನೀರಿನ ಅಭಾವವನ್ನು ತಡೆಗಟ್ಟಲು ಪಂ.ನೊಂದಿಗೆ ನಾಗರಿಕರೂ ಕೈಜೋಡಿಸಬೇಕು ಎಂದರು.

Advertisement

ವೇಣೂರು ಪಶು ಆಸ್ಪತ್ರೆ ವೈದ್ಯಾಧಿಕಾರಿ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಮುದ್ದಾಡಿ ತಿರುವಿನ ಅಪಾಯಕಾರಿ ವಿದ್ಯುತ್‌ ಕಂಬವನ್ನು ಸ್ಥಳಾಂತರಿಸುವಂತೆ ಗ್ರಾ.ಪಂ. ಸದಸ್ಯ ರಮೇಶ್‌ ಪೂಜಾರಿ ಮೆಸ್ಕಾಂ ಇಲಾಖೆಯ ಅಧಿಕಾರಿಯನ್ನು ಒತ್ತಾಯಿಸಿದರು. ರಸ್ತೆ ಸುರಕ್ಷತೆ, ಕೆಎಎಸ್‌ಪಿ ಆ್ಯಪ್‌ ಬಗ್ಗೆ ವೇಣೂರು ಪೊಲೀಸ್‌ ಠಾಣೆಯ ಸಿಬಂದಿ ಮಾಹಿತಿ ನೀಡಿದರು.

ಅಡಿಕೆ ಕೊಳೆರೋಗದ ಕೃಷಿಕರಿಗೆ ಪರಿಹಾರ ಮೊತ್ತ ಲಭಿಸಬೇಕು, ಆಧಾರ್‌ ಸೇವೆಯ ಸರ್ವರ್‌ ಸಮಸ್ಯೆಯನ್ನು ತತ್‌ ಕ್ಷಣ ಸರಿಪಡಿಸಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹಿಸಿದರು.

ಸಮ್ಮಾನ
ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಾದ ಡೀಕಮ್ಮ ಗುಂಡೂರಿ, ಲಲಿತಾ ಹೊಕ್ಕಾಡಿಗೋಳಿ, ಬಸ್‌ ತಂಗುದಾಣ ನಿರ್ಮಿಸಿ ಪಂ.ಗೆ ಹಸ್ತಾಂತರಿಸಿದ ಶೀನ ಪೂಜಾರಿ ಕೈರೋಡಿ, ಚಂದ್ರಾವತಿ ನಾರಾಯಣ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಪಂ. ಸದಸ್ಯ ಹರೀಶ್‌ ಕುಮಾರ್‌ ಸಮ್ಮಾನಿತರ ಪರಿಚಯ ಮಾಡಿದರು.

ತಾ.ಪಂ. ಸದಸ್ಯ ಓಬಯ್ಯ ಆರಂಬೋಡಿ, ಗ್ರಾ.ಪಂ. ಉಪಾಧ್ಯಕ್ಷೆ ಆಶಾ ಎಸ್‌. ಶೆಟ್ಟಿ, ಸದಸ್ಯರು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಸೋಮಶೇಖರ್‌, ಸಿಬಂದಿ ಸಹರಿಸಿದರು. ಪಿಡಿಒ ನಿರ್ವಹಿಸಿ, ಪಂ. ಸದಸ್ಯ ರಮೇಶ್‌ ಪೂಜಾರಿ ಪಡ್ಡಾಯಿಮಜಲು ವಂದಿಸಿದರು.

Advertisement

ಗ್ಯಾಸ್‌ ಸಂಪರ್ಕ
ಹನ್ನೆರಡುಕವಲು ಅಂಗನವಾಡಿ ಕೇಂದ್ರದಲ್ಲಿ ಗ್ಯಾಸ್‌ ಸಂಪರ್ಕ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಸಭೆಯಗಮನ ಸೆಳೆದರು. ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರ ಹೆಸರಿನಲ್ಲಿಯೇ ಗ್ಯಾಸ್‌ ಸಂಪರ್ಕ ಇದೆ. ಹನ್ನೆರಡುಕವಲು ಕೇಂದ್ರದ ಕಾರ್ಯಕರ್ತೆ ಮನೆಯಲ್ಲಿ ಅವರ ಹೆಸರಿನಲ್ಲಿ ಗ್ಯಾಸ್‌ ಸಂಪರ್ಕವಿರುವುದರಿಂದ ಸಮಸ್ಯೆ ಎದುರಾಗಿದೆ. ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಗ್ರಾಮಸ್ಥರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next