Advertisement

ಆರಂಬೋಡಿ: ಸ್ವಚ್ಛಮೇವ ಜಯತೆ ಆಂದೋಲನದ ಯಶಸ್ಸಿಗೆ ಸಭೆ

08:59 PM Jun 10, 2019 | mahesh |

ವೇಣೂರು: ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸರಕಾರ ಜಾರಿಗೆ ತಂದಿರುವ ಸ್ವಚ್ಛಮೇವ ಜಯತೆ ಎಂಬ ವಿನೂತನ ಕಾರ್ಯಕ್ರಮ ಆಂದೋಲನದ ಯಶಸ್ವಿಗೆ ಆರಂಬೋಡಿ ಗ್ರಾ.ಪಂ.ನಲ್ಲಿ ಪೂರ್ವಭಾವಿ ಸಭೆ ಜರಗಿತು.

Advertisement

ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಎಚ್‌. ಅವರು ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್‌ ಪಿಡಿಒ ಗಣೇಶ್‌ ಶೆಟ್ಟಿ ಅವರು ಮಾಹಿತಿ ನೀಡಿ, ವೈಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯ ಬಳಕೆ, ಶಾಲೆ ಮತ್ತು ಅಂಗನವಾಡಿ ಶೌಚಾಲಯ ಉಪಯೋಗ ಮಾಡಲು ವಿದ್ಯಾರ್ಥಿಗಳಲ್ಲಿ ಮತ್ತು ಶಿಕ್ಷಕರಲ್ಲಿ ಜಾಗೃತಿ ಮೂಡಿಸುವುದು. ಒಂದು ತಿಂಗಳ ಕಾಲ ಎಲ್ಲ ಹಂತದಲ್ಲೂ ಅರಿವು ಮೂಡಿಸಿ, ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡುವ ಮೂಲಕ ಗ್ರಾಮೀಣ ಜನರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಜೂ.5ರಿಂದ 30ಸರಕಾರ ಜೂ.5ರಿಂದ ಜೂ.30ರವರೆಗೆ ಆಯೋಜಿಸಲು ಸೂಚಿಸಿರುವ ಈ ಆಂದೋಲನದಲ್ಲಿ ಹಲವು ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗೆ ಗ್ರಾಮಸ್ಥರು ಕೈಜೋಡಿಸಬೇಕೆಂದರು.

ಪಂಚಾಯತ್‌ ಉಪಾಧ್ಯಕ್ಷೆ ಆಶಾ ಎಸ್‌. ಶೆಟ್ಟಿ, ಕಾರ್ಯದರ್ಶಿ ಸೋಮಶೇಖರ, ಪಂಚಾಯತ್‌ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next