Advertisement

ಪಟ್ಟಣ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಆಸ್ತಿ ರಕ್ಷಣೆಗೆ ಕ್ರಮ

03:07 PM Dec 30, 2021 | Team Udayavani |

ಅರಕಲಗೂಡು: ಪಪಂ ಆಸ್ತಿ ಉಳಿಸಲು ಬದ್ಧ, ಯಾರ ಮುಲಾಜಿಗೂ ಒಳಗಾಗದೇ ಪಪಂನ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಆಂದೋಲನ ನಡೆಸುವ ಮೂಲಕ ಪಟ್ಟಣ ವ್ಯಾಪ್ತಿಯ ಸರ್ಕಾರಿ ಆಸ್ತಿಯನ್ನು ರಕ್ಷಿಸುವ ನಿರ್ಣಯವನ್ನು ಪಪಂ ಅಧ್ಯಕ್ಷ ಹೂವಣ್ಣ ಕೈಗೊಂಡರು.

Advertisement

ಬುಧವಾರ ನಡೆದ ಪಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಪಂ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ತಿಗಳ ಅಕ್ರಮ ಖಾತೆಗಳಾಗುತ್ತಿರುವುದು ಆತಂಕ ಮೂಡಿಸುತ್ತಿದೆ. ಪಪಂನ ಆಸ್ತಿಗಳ ಅಕ್ರಮ ಖಾತೆ ಹಾಗೂ ಅತಿಕ್ರಮಣದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ ಬೆನ್ನಲ್ಲಿ ಶಾಸಕರು ಈ ವಿಷಯದ ಬಗ್ಗೆ ಚರ್ಚಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪಪಂನ ಅಧಿಕಾರಿಗಳಿಗೆ ಹಲವು ಭಾರಿ ಎಚ್ಚರಿಕೆ ನೀಡಿದರೂ ಅಕ್ರಮ ಖಾತೆಗಳಿಗೆ ಕಡಿವಾಣ ಬೀಳುತ್ತಿಲ್ಲ. ಅಧಿಕಾರಿಗಳು ಇದೇ ಪ್ರವೃತ್ತಿ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ತಿಯನ್ನು ಸಂಪೂರ್ಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಇವುಗಳ ರಕ್ಷಣೆಗಾಗಿ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ನನ್ನೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು. ಇದಕ್ಕೆ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿದರು.

ಪಪಂ 6ನೇ ವಾರ್ಡ್‌ ಸದಸ್ಯೆ ರಶ್ಮಿ, ವಾರ್ಡ್‌ ನಂ. 6 ಮತ್ತು 7 ರಲ್ಲಿ ಅಕ್ರಮ ಖಾತೆಗಳು ನಕಲಿ ಹಕ್ಕು ಪತ್ರಗಳು ದಿನನಿತ್ಯ ಹೆಚ್ಚುತ್ತಿದ್ದು, ಒಂದೇ ನಿವೇಶನಕ್ಕೆ ಇಬ್ಬರು ಮೂವರು ನನ್ನದು ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಿರುವ ಮೂಲಕ ವಾರ್ಡಿನ ಶಾಂತಿಗೆ ಭಂಗವಾಗುತ್ತಿದೆ ಎಂದು ದೂರಿದರು. ಪಪಂ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಅರ್ಜಿಗಳು ಹಾಲಿನ ಡೇರಿ ನಿರ್ಮಾಣದ ಹೆಸರಿನಲ್ಲಿ ಬರುತ್ತಿರುವುದು ಆಶ್ಚರ್ಯಕರ. ಪಟ್ಟಣದ ಪ್ರಮುಖ ಸ್ಥಳಗಳನ್ನು ಸಾರ್ವಜನಿಕರ ಅನುಕೂಲಕರವಾಗುತ್ತದೆ ಎಂಬ ದೃಷ್ಟಿಯಿಂದ ನೀಡಿದರೆ, ಆ ಮಳಿಗೆಯಲ್ಲಿ ಹಾಲಿನ ಜೊತೆಗೆ ಇತರೆಯ ವ್ಯಾಪಾರಿಗಳನ್ನು ಮಾಡುತ್ತಿರುವುದು ಸಾಮಾನ್ಯವಾಗಿದೆ. ಆದ್ದರಿಂದ ಅನಾವಶ್ಯಕವಾಗಿ ಸರ್ಕಾರಿ ಜಾಗ ಡೇರಿ ಹೆಸರಿನಲ್ಲಿ ನೀಡುವು ದನ್ನು ನಿಲ್ಲಿಸುವಂತೆ ಸದಸ್ಯ ಪ್ರದೀಪಕುಮಾರ ಆಗ್ರಹಿಸಿದರು.

Advertisement

ಪಪಂನ ಸದಸ್ಯರಲ್ಲಿ 9 ಮಹಿಳಾ ಸದಸ್ಯರಿದ್ದರೂ ಅಧಿಕಾರದ ವಿಷಯದಲ್ಲಿ ಮಹಿಳೆಯರಿಗೆ ಆದ್ಯತೆ ನೀಡದೇ ಪುರುಷ ಸದಸ್ಯರೇ ಪಡೆಯುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ವಾರ್ಡ್‌ ನಂ 15ರ ಸದಸ್ಯ ಅನುಷಾ ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 80 ವರ್ಷಗಳಿಂದ ಪೌರ ಕಾರ್ಮಿಕರ ಕುಟುಂಬಗಳು ಜೀವನ ನಡೆಸುತ್ತಾ ಬರುತ್ತಿರುವ ಈ ಸ್ಥಳದಲ್ಲಿ ಸುಚಿತ್ವವಿಲ್ಲದೆ ಒಂದೇ ಮನೆಯಲ್ಲಿ 3-4 ಕುಟುಂಬಗಳು ಜೀವಿಸುತ್ತಿದ್ದರೂ, ಈ ಮನೆಗಳ ಹಕ್ಕು ಪಟ್ಟಣ ಪಂಚಾಯಿತಿಯದ್ದಾಗಿದೆ. ಈ ಸ್ಥಳವನ್ನು ಪೌರ ಕಾರ್ಮಿಕರಿಗೆ ಹಕ್ಕು ಪತ್ರ ನೀಡುವ ವಿಷಯದಲ್ಲಿ
ವಾರ್ಡ್‌ ನಂ 16ರ ಸದಸ್ಯ ಅನಿಕೇತನ ಅವರ ಪರಿಶ್ರಮದಿಂದ ಆ ಸ್ಥಳವನ್ನು ಕೊಳಚೆ ನಿರ್ಮೂಲನಾ ಮಂಡಳಿಗೆ ಹಸ್ತಾಂತರಿಸಿ ಅವರ ಮೂಲಕ ಪೌರ ಕಾರ್ಮಿಕರ 47 ಮನೆಗಳ ಹಕ್ಕುಪತ್ರವನ್ನು ಕೊಡಿಸುವ ಮೂಲಕ ಹಲವಾರು ವರ್ಷಗಳ ಹೋರಾಟಕ್ಕೆ ತೆರೆ ನೀಡಿದಂತಾಗಿದೆ. ಉಪಾಧ್ಯಕ್ಷ ನಿಖೀಲ್‌ಕುಮಾರ, ಮುಖ್ಯಾಧಿಕಾರಿ ಶಿವಕುಮಾರ್‌, ಎಂಜಿನಿಯರ್‌
ಜಗದೀಶ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next