ಹುಬ್ಬಳ್ಳಿ : ಡಿಸೆಂಬರ್ 31 ರಂದು ಒತ್ತಾಯಪೂರ್ವಕವಾಗಿ ಬಂದ್ ನಡೆಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಗಾರರೊಂದಿಗೆ ಮಾತನಾಡಿದ ಅವರು ಎಂಇಎಸ್ ನಿಷೇಧಿಸುವ ಕುರಿತು ಸರಕಾರ ಸಮಾಲೋಚನೆ ನಡೆಸುತ್ತಿದೆ. ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯನ್ನು ಜನರೇ ತಿರಸ್ಕರಿಸಿದ್ದಾರೆ. ಜನರು ಸಂಕಷ್ಟದಲ್ಲಿರುವ ಕಾರಣ ಕನ್ನಡಪರ ಹೋರಾಟಗಾರರು ಬಂದ್ ಕೈಬಿಡಬೇಕು ಎಂದರು.
ರಾಜ್ಯದಲ್ಲಿ ಕೋವಿಡ್ ಪರಿಣಾಮ ಜನರು, ಸಣ್ಣ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಬಂದ್ ಮುಂದಾಗುವುದು ಸರಿಯಲ್ಲ. ಕೆಲ ಕನ್ನಡಪರ ಸಂಘಟನೆಗಳು ಬಂದ್ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ. ಈ ಕುರಿತು ಇನ್ನೊಮ್ಮೆ ಚಿಂತನೆ ನಡೆಸಬೇಕು. ಅವರು ಬಂದರೆ ಮುಖ್ಯಮಂತ್ರಿ ಅಥವಾ ಸಂಬಂಧಪಟ್ಟವರು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಎಂಇಎಸ್ ಬ್ಯಾನ್ ಕುರಿತು ಸರಕಾರ ಸಮಾಲೋಚನೆ ನಡೆಸಿದೆ. ಇಂದೇ, ನಾಳೆಯೇ ಆಗಬೇಕೆಂದರೆ ಆಗೋದಿಲ್ಲ. ಮಹಾರಾಷ್ಟ್ರ ಸರಕಾರದೊಂದಿಗೆ ಸರಕಾರ ಮಾತುಕತೆ ಮಾಡುತ್ತಿದೆ. ಯಾವುದೇ ಕಾರಕ್ಕೂ ಬಲವಂತದಿಂದ ಬಂದ್ ಮಾಡುವುದು ಸರಿಯಲ್ಲ. ಅಂತಹವರ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆ 150 ಸ್ಥಾನ ಖಚಿತ : ಅರುಣ್ ಸಿಂಗ್